More

    ನಿಗದಿತ ಸಮಯಕ್ಕೆ ಚುನಾವಣಾಧಿಕಾರಿ ಕಚೇರಿ ತಲುಪದೇ ನಾಮಪತ್ರ ಹಿಡಿದು ವಾಪಾಸ್ಸಾದ ಸಿಎಂ ಕೇಜ್ರಿವಾಲ್​!

    ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಸಿಎಂ ಅರವಿಂದ್​ ಕೇಜ್ರಿವಾಲ್​ ಸೋಮವಾರ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ, ರೋಡ್​ ಶೋ ಕಾರಣದಿಂದಾಗಿ ಮಂಗಳವಾರಕ್ಕೆ ಮುಂದೂಡಲಾಗಿದೆ.

    ಕೇಜ್ರಿವಾಲ್​ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೃಹತ್​ ರೋಡ್​ ಶೋ ಆಯೋಜಿಸಲಾಗಿತ್ತು. 3 ಗಂಟೆಯ ಒಳಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ, ರೋಡ್​ ಶೋ ಕಾರಣದಿಂದಾಗಿ ನಿಗದಿತ ಸಮಯದಲ್ಲಿ ನಾಮಪತ್ರ ಸಲ್ಲಿಸುವ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಕಾರಣ ನಾಳೆಗೆ ಮುಂದೂಡಲಾಗಿದೆ. ಅದಲ್ಲದೆ ನಾಮಪತ್ರ ಸಲ್ಲಿಕೆಗೆ ನಾಳೆಯೇ ಕೊನೆಯ ದಿನವಾಗಿದೆ. ​

    ಈ ಬಗ್ಗೆ ಮಾತನಾಡಿರುವ ಕೇಜ್ರಿವಾಲ್​, ನಾನು ನಾಮಪತ್ರ ಸಲ್ಲಿಸಬೇಕೆಂದು ಹೇಳಿದೆ. ಆದರೆ, ನಾನು ಹೇಗೆ ಅವರನ್ನು(ರೋಡ್​ ಶೋಗೆ ಬಂದಿದ್ದ ಜನರು) ಬಿಟ್ಟು ಹೋಗಲಿ? ಹೀಗಾಗಿ ನಾಳೆ ಹೋಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಬೃಹತ್​ ರೋಡ್​ ಶೋ ವಾಲ್ಮೀಕಿ ಮಂದಿರದಿಂದ ಆರಂಭವಾಗಿ ಕೇಜ್ರವಾಲ್​ ಅವರ ವಿಧಾನಸಭಾ ಕ್ಷೇತ್ರ ನವದೆಹಲಿಯ ಚುನಾವಣಾ ಕಚೇರಿಗೆ ಹೋಗಬೇಕಾಗಿತ್ತು. ಆದರೆ, ತುಂಬಾ ಜನ ಇದ್ದುದರಿಂದ ನಿಗದಿತ ಸಮಯಕ್ಕೆ ಸ್ಥಳ ತಲುಪಲು ಸಾಧ್ಯವಾಗಲಿಲ್ಲ.

    ತೆರೆದ ವಾಹನದಲ್ಲಿ ಆಮ್​ ಆದ್ಮಿ ಪಕ್ಷದ ಸಂಕೇತವನ್ನು ಹಿಡಿದು ಕೇಜ್ರಿವಾಲ್​ ನಾಮಪತ್ರ ಸಲ್ಲಿಸಲು ಹೊರಟಿದ್ದರು. ಅವರ ಸುತ್ತ ಸಾವಿರಾರು ಮಂದಿ ಪಕ್ಷದ ಪರ ಹಾಗೂ ಕೇಜ್ರಿವಾಲ್ ಪರ ಜಯಘೋಷ ಮೊಳಗಿಸಿದರು.

    ಅಂದಹಾಗೆ ದೆಹಲಿ ಚುನಾವಣೆ ಫೆ.8ಕ್ಕೆ ನಡೆಯಲಿದ್ದು, ಫೆ.11ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts