More

    ದೆಹಲಿ ಚುನಾವಣೆಗೆ ಆಪ್​ನ ಐದು ಶಬ್ದಗಳ ಕಾರ್ಯಸೂಚಿ; ಟ್ವೀಟ್​ಮಾಡಿದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ

    ನವದೆಹಲಿ: ಈ ಬಾರಿ “ಚುನಾವಣೆ ಅಭಿವೃದ್ಧಿ ಕಾರ್ಯದ ಮೇಲೆ ನಡೆಯಲಿದೆ” ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಟ್ವೀಟ್​ ಮಾಡಿದ್ದಾರೆ.

    ಚುನಾವಣೆಯಲ್ಲಿ ಈ ಬಾರಿಯು ಆಪ್​ ಪಕ್ಷಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್​ ಎದುರಾಳಿಯಾಗಿದೆ ಎಂದಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಸುನಿಲ್​ ಆರೋರಾ, ಚುನಾವಣೆಯನ್ನು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗದಿಗೊಳಿಸಲಾಗಿದೆ. ಹಿರಿಯ ಪೊಲೀಸ್​ ಅಧಿಕಾರಿಗಳು ಕಾನೂನು ಸುರಕ್ಷತೆ ಬಗ್ಗೆ ನಮಗೆ ಬರವಣಿಗೆಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದರು.

    ಅಲ್ಲದೆ ಚುನಾವಣೆ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಯಾಗಿದೆ ಎಂದು ಆರೋರಾ ಸ್ಪಷ್ಟಪಡಿಸಿದ್ದರು.

    ಈ ನಡುವೆ ಬಿಜೆಪಿ “ಚಾರ್ಜ್​ಶೀಟ್​” ದಾಖಲೆ ಪತ್ರವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಆಪ್​ ಪಕ್ಷದ ವಿರುದ್ಧ, ದೆಹಲಿ ಮಾಲಿನ್ಯದ ವಿರುದ್ಧ, ವಾಹನ ಸಾಗಣೆ ವಿರುದ್ಧ ಕಿಡಿ ಕಾರಿದೆ.

    ಈ “ಆರೋಪಪತ್ರ”ಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್​, ಇದರಲ್ಲಿನ ಆರೋಪಗಳನ್ನು ಪರಿಶೀಲಿಸಲಾಗುವುದು ಮತ್ತು ಬಿಜೆಪಿ ನೀಡುವ ಸಲಹೆಗಳನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts