3 ಬಿಜೆಪಿ ಅಭ್ಯರ್ಥಿ ಅವಿರೋಧ

ಗುವಾಹಟಿ: ಅರುಣಾಚಲಪ್ರದೇಶ ವಿಧಾನಸಭಾ ಚುನಾವಣೆಗೆ ಮೂವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರಗಳಿಗೆ ಸಲ್ಲಿಕೆಯಾಗಿರುವ ಪ್ರತಿಪಕ್ಷಗಳ ಅಭ್ಯರ್ಥಿಗಳ ನಾಮಪತ್ರಗಳು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.

ಈ ಕ್ಷೇತ್ರಗಳಲ್ಲಿ ಜೆಡಿಯು ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದರೆ, 7 ಪಕ್ಷೇತರ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಚುನಾವಣೆಗೆ ಮುನ್ನವೇ ಬಿಜೆಪಿ 3 ಸೀಟು ಗೆದ್ದಂತಾಗಿದೆ.

2 ದಶಕದಲ್ಲಿ ಮೊದಲ ಚುನಾವಣೆ: ಅರುಣಾಚಲ ಮುಖ್ಯಮಂತ್ರಿ ಪೇಮ್ ಖಂಡು ಸ್ಪರ್ಧಿಸುತ್ತಿರುವ ‘ದಿ ಮುಕ್ಟೊ’ ವಿಧಾನಸಭಾ ಕ್ಷೇತ್ರಕ್ಕೆ 2 ದಶಕಗಳಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಖಂಡು ತಂದೆ ಅವಧಿಯಲ್ಲೂ ಅವಿರೋಧ ಆಯ್ಕೆಯಾಗುತ್ತಿತ್ತು. ಬಿಜೆಪಿಯ ಖಂಡು ವಿರುದ್ಧ ಕಾಂಗ್ರೆಸ್ ಮೊದಲ ಬಾರಿಗೆ ಅಭ್ಯರ್ಥಿ ಹಾಕಿದೆ.

Leave a Reply

Your email address will not be published. Required fields are marked *