ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ಕೇಂದ್ರ ಸಚಿವ ಅರುಣ್​ ಜೇಟ್ಲಿ

ನವದೆಹಲಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದ ಸಚಿವ ಅರುಣ್​ ಜೇಟ್ಲಿ ಅವರು ಭಾರತಕ್ಕೆ ಆಗಮಿಸಿದ್ದಾರೆ. ಚಿಕಿತ್ಸೆ ಮುಗಿಸಿಕೊಂಡು ದೇಶಕ್ಕೆ ಮರಳಿರುವ ಕುರಿತು ಅವರು ಟ್ವೀಟ್​ ಅನ್ನೂ ಮಾಡಿದ್ದಾರೆ.

” ಮನೆಗೆ ಮರಳಿದ್ದು ಸಂತೋಷವಾಗಿದೆ,” ಎಂದು ಅರುಣ್​ ಜೇಟ್ಲಿ ಅವರು ಒಂದೇ ಸಾಲಿನಲ್ಲಿ ಟ್ವೀಟ್​ ಮಾಡಿದ್ದಾರೆ.

ವರ್ಷದ ಹಿಂದೆ ಮೂತ್ರಪಿಂಡ ಕಸಿಗೆ ಒಳಗಾಗಿರುವ ಅರುಣ್​ ಜೇಟ್ಲಿ ಅವರಿಗೆ ಸದ್ಯ ತೊಡೆಯಲ್ಲಿ ಸೂಕ್ಷ್ಮ ಸ್ನಾಯು ಕ್ಯಾನ್ಸರ್​ ಇರುವುದಾಗಿ ಹೇಳಲಾಗಿದೆ. ಇದೇ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದರು.

66 ವರ್ಷದ ಅರುಣ್​ ಜೇಟ್ಲಿ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಹಿನ್ನೆಲೆಯಲ್ಲಿ ಪಿಯೂಷ್​ ಗೊಯಲ್​ ಅವರಿಗೆ ಹಣಕಾಸು ಇಲಾಖೆಯನ್ನು ವಹಿಸಲಾಗಿತ್ತು. ಅಲ್ಲದೆ, ಈ ಬಾರಿಯ ಬಜೆಟ್​ ಅನ್ನೂ ಗೊಯಲ್​ ಅವರೇ ಮಂಡಿಸಿದ್ದರು.