ಹವ್ಯಾಸಿ ಕಲಾತಂಡದಿಂದ ಕಲಾವಿದರ ಸೃಷ್ಟಿ: ಆನಂದ್ ಸಿ ಕುಂದರ್ ಅನಿಸಿಕೆ ; ಯಕ್ಷಗಾನ ಪ್ರದರ್ಶನ

karanta

ಕೋಟ: ಯಕ್ಷಗಾನ ಹವ್ಯಾಸಿ ಕಲಾತಂಡದ ಮೂಲಕ ಕಲಾವಿದರ ಸೃಷ್ಟಿ ಜತೆಗೆ ಬದುಕಿಗೆ ಬೆಳಕು ಚೆಲ್ಲುತ್ತದೆ ಎಂದು ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಅವರು ಹೇಳಿದರು.

ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಪಂ ಆಶ್ರಯದಲ್ಲಿ ಯಕ್ಷಸುಮನಸ ಹವ್ಯಾಸಿ ಕಲಾರಂಗ ಕೋಟ ಸಹಯೋಗದಲ್ಲಿ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಪ್ರಸಾದನ ಪ್ರಮುಖರು ದಿ.ಬಾಲಕೃಷ್ಣ ನಾಯಕ್ ಹಂದಾಡಿ, ಯಕ್ಷಗಾನ ಭಾಗವತರು ದಿ.ಸುಬ್ರಹ್ಮಣ್ಯ ಧಾರೇಶ್ವರ್, ವೈದ್ಯರು ಹಾಗೂ ಗಾಯಕ ದಿ.ಡಾ.ಸತೀಶ್ ಪೂಜಾರಿ ಅವರಿಗೆ ಸುಮನಸ ನಮನ ಸಲ್ಲಿಸಲಾಯಿತು.

ಕೋಟತಟ್ಟು ಗ್ರಾಪಂ ಅಧ್ಯಕ್ಷ ಕೆ ಸತೀಶ್ ಕುಂದರ್, ಯಕ್ಷಗಾನ ಪ್ರಸಂಗಕರ್ತ ವಿಷ್ಣುಮೂರ್ತಿ ನಾಯಕ್ ಬೇಳೂರು, ಗೋವಿಗಾಗಿ ಮೇವು ಅಭಿಯಾನ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಾರಂತ ಪ್ರತಿಷ್ಠಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಅಧ್ಯಕ್ಷ ಸದಾನಂದ ಜಿ, ಕೋಟ ಗ್ರಾಪಂ ಸದಸ್ಯ ಚಂದ್ರ ಪೂಜಾರಿ, ಗುತ್ತಿಗೆದಾರ ಸುರೇಶ್ ಗಾಣಿಗ ಶೇವಧಿ, ಉದ್ಯಮಿ ಕಿರಣ್ ತೆಕ್ಕಟ್ಟೆ, ಬಾಳೆಬೆಟ್ಟು ಫ್ರೆಂಡ್ಸ್, ಅಧ್ಯಕ್ಷ ರತ್ನಾಕರ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು. ಯಕ್ಷಸುಮನಸ ಕಲಾರಂಗ ಅಧ್ಯಕ್ಷ ಪ್ರಸಾದ್ ಬಿಲ್ಲವ ಪ್ರಸ್ತಾಪಿಸಿದರು. ಕೋಟತಟ್ಟು ಪಿಡಿಒ ರವೀಂದ್ರ ರಾವ್ ವಂದಿಸಿದರು.

Share This Article

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…

Chanakya Niti: ದಾಂಪತ್ಯ ಜೀವನ ಸುಂದರವಾಗಿರಲು 4 ವಿಷಯಗಳನ್ನು ಅನುಸರಿಸಿ….

ಬೆಂಗಳೂರು:  ವಿದ್ವಾಂಸರಲ್ಲಿ ಚಾಣಕ್ಯರು ( Chanakya Niti ) ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

Tamarind Juice : ಹುಣಸೆ ಹಣ್ಣಿನ ರಸದ ಅದ್ಭುತ ಪ್ರಯೋಜನಗಳಿವು…

ಬೆಂಗಳೂರು:  ಹುಣಸೆಹಣ್ಣು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಹುಣಸೆಹಣ್ಣು ಸ್ವಲ್ಪ ಸಿಹಿ ಮತ್ತು ಸ್ವಲ್ಪ…