ಮಂಗಳೂರು ಬಂದರಿನಲ್ಲಿ ಕೃತಕ ನೆರೆ ಭೀತಿ

Latest News

ಅಸಲಿ ಪೊಲೀಸರಿಗೆ ಸೆರೆಸಿಕ್ಕ ನಕಲಿ ಅಧಿಕಾರಿ: ಉದ್ಯಮಿಗೆ ಬೆದರಿಸಿ 24 ಲಕ್ಷ ರೂ. ಸುಲಿಗೆ, ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಬೆಂಗಳೂರು: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಬೆದರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್​ಎಎಲ್...

ಯುವಕನ ಕೊಲೆ ಮಾಡಿದ್ದ ದಂಪತಿ ಬೆಳಗಾವಿಯಲ್ಲಿ ಸೆರೆ

ಆನೇಕಲ್: ಖಾಸಗಿ ಸಂಸ್ಥೆಯ ಉದ್ಯೋಗಿ ಭದ್ರಾವತಿಯ ಕಿರಣ್ ಕುಮಾರ್ (25) ಕೊಲೆ ಪ್ರಕರಣ ಭೇದಿಸಿರುವ ಜಿಗಣಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾವಣಗೆರೆಯ ಸುರೇಖಾ (38)...

ತನ್ನದಲ್ಲದ ತಪ್ಪಿಗೆ ದಂಡ ಕಟ್ಟಿದ ಟೆಕ್ಕಿ: ನಕಲಿ ನಂಬರ್ ಪ್ಲೇಟ್ ಅಳವಡಿಸಿ 4 ವರ್ಷ ಕಾರು ಓಡಿಸಿದ್ದ, ಆರ್​ಟಿಒ ವಶದಲ್ಲಿ ಉದ್ಯಮಿ

ಬೆಂಗಳೂರು: ಪರಿಚಿತರೊಬ್ಬರ ಬೆನ್ಜ್ ಕಾರಿನ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು 7 ವರ್ಷಗಳಿಂದ 27 ಲಕ್ಷ ರೂ. ತೆರಿಗೆ ವಂಚಿಸಿ ಓಡಾಡುತ್ತಿದ್ದ ಮರ್ಸಿಡೀಸ್...

ಅಕ್ರಮ ಸಂಪತ್ತಿಗೆ ಅಧಿಕಾರಿಗಳ ಕಾವಲು

| ರಮೇಶ ದೊಡ್ಡಪುರ ಬೆಂಗಳೂರು ನಗರ ಪ್ರದೇಶದಲ್ಲಿ ವಸತಿ, ವಾಣಿಜ್ಯ ಪ್ರದೇಶಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ರಚಿಸಲಾಗಿರುವ ಕಾನೂನು ಪಾಲಿಸಿ ಅಕ್ರಮ ಕಟ್ಟಡಗಳಿಗೆ ಬ್ರೇಕ್ ಹಾಕಬೇಕಾದ...

ಪೊಲೀಸ್ ಠಾಣೆಗಳಲ್ಲಿ ದಲಿತರ ದಿನ ಆಚರಣೆ ಕಡ್ಡಾಯ: ಪ್ರತಿ ತಿಂಗಳ 2ನೇ ಭಾನುವಾರ ಕಡ್ಡಾಯ, ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಇಲಾಖೆ ಗರಂ

| ಕೀರ್ತಿನಾರಾಯಣ ಸಿ. ಬೆಂಗಳೂರು ದಲಿತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳ 2ನೇ ಭಾನುವಾರ ‘ದಲಿತರ...

ಭರತ್‌ರಾಜ್ ಸೊರಕೆ ಮಂಗಳೂರು

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಚರಂಡಿಯ ಹೂಳೆತ್ತದೆ ಈ ಬಾರಿ ಕೃತಕ ನೆರೆ ಸೃಷ್ಟಿಯಾಗುವ ಆತಂಕವಿದೆ.
ಇಲ್ಲಿನ ಚರಂಡಿಗಳಲ್ಲಿ ರಸ್ತೆ ಮಟ್ಟಕ್ಕೆ ಹೂಳು ತುಂಬಿಕೊಂಡಿದ್ದು, ಪರಿಸರ ಗಲೀಜಾಗಿದೆ. ದಕ್ಕೆಯಿಂದ ಹೊರಹೋಗುವ ಲಾರಿಗಳಿಂದ ವಿಪರೀತ ಗಲೀಜು ನೀರು ರಸ್ತೆ ಹರಿದು ಚರಂಡಿಗೆ ಇಳಿಯುತ್ತದೆ. ಹೀಗೆ ಹರಿದ ಗಲೀಜು, ಮರಳು ಚರಂಡಿಯಲ್ಲಿ ತುಂಬಿಕೊಂಡಿದೆ.

ಮಂಗಳೂರು ಮಹಾನಗರ ಪಾಲಿಕೆ ಮಳೆಗೆ ಪೂರ್ವದಲ್ಲಿ ನಗರದ ರಾಜಕಾಲುವೆ, ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯ ನಡೆದಿತ್ತು. ಆದರೆ ಮೀನುಗಾರಿಕಾ ದಕ್ಕೆಯಲ್ಲಿ ಈ ಕೆಲಸ ನಡೆದಂತಿಲ್ಲ.
ಬಂದರು ಅಳಿವೆಬಾಗಿನ ಅಂಚಿನಲ್ಲಿರುವ ಇಳಿಜಾರಿನ ಪ್ರದೇಶ. ಜೋರು ಮಳೆಗೆ ಪೇಟೆಯಿಂದ ನೀರು ನುಗ್ಗಿ ಬಂದಾಗ ಸರಾಗವಾಗಿ ಹರಿಯಲು ಜಾಗವಿಲ್ಲ. ನೀರು ಹರಿಯದೆ ಅಂಗಡಿ, ಗೋಡೌನ್‌ಗಳ ಒಳಗೆ ನುಗ್ಗುವ ಸಾಧ್ಯತೆ ಇದೆ. ಹಲವಾರು ಹಳೇ ಕಟ್ಟಡ, ಗೋಡೌನ್‌ಗಳು ಈ ಭಾಗದಲ್ಲಿ ಇದ್ದು ನೀರು ನುಗ್ಗಿದರೆ ಧರೆಗೆ ಉರುಳುವ ಆತಂಕವೂ ಇದೆ. ರಸ್ತೆ ಬದಿಯ ಮಣ್ಣಿನೊಂದಿಗೆ ಪ್ಲಾಸ್ಟಿಕ್‌ಗಳು ಮಿಶ್ರಗೊಂಡಿರುವುದರಿಂದ ಮೊದಲ ಮಳೆಗೆ ಅಷ್ಟೊಂದು ಸುಲಭವಾಗಿ ಕೊಚ್ಚಿ ಹೋಗದು. ಕನಿಷ್ಠ ಪಕ್ಷ ರಸ್ತೆಯ ಒಂದು ಕಡೆಯಾದರೂ ನೀರು ಹರಿಯಲು ಜಾಗವಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಇಲ್ಲಿ ಎರಡೂ ಬದಿ ಜಾಗವಿಲ್ಲ. ರಸ್ತೆಯೇ ತೋಡಾಗಿ ಹರಿಯುವ ಆತಂಕ ವ್ಯಾಪಾರಿಗಳದ್ದು.

ಎಲ್ಲೆಲ್ಲೂ ಕಸ, ಅಸಹ್ಯ ವಾತಾವರಣ
ಮತ್ಸೋದ್ಯಮಕ್ಕೆ ಈಗ ರಜೆ. ಮೀನುಗಾರಿಕಾ ದಕ್ಕೆಯಲ್ಲಿ ಕಾರ್ಮಿಕರು, ಲಾರಿಗಳ ಓಡಾಟವಿಲ್ಲದೆ ಖಾಲಿ ಖಾಲಿ. ಆದರೆ ಎಲ್ಲೆಲ್ಲೂ ಕಸದ ರಾಶಿ, ಚರಂಡಿ ತುಂಬ ಗಲೀಜು ತುಂಬಿ ಅಸಹ್ಯ ವಾತಾವರಣ ಸೃಷ್ಟಿಯಾಗಿದೆ. ಹಿಂದೆ ಲಾರಿಗಳ ಓಡಾಟದ ಒತ್ತಡದಲ್ಲಿ ಸ್ವಚ್ಛ ಮಾಡಲು ಕಷ್ಟವಾಗುತ್ತಿತ್ತು. ಆದರೆ ಈಗ ಅಂಥ ಸಮಸ್ಯೆ ಇಲ್ಲ. ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಿದೆ. ರಸ್ತೆ, ಚರಂಡಿಯಲ್ಲೂ ಕಸ ಕೊಳೆಯುತ್ತಿದೆ. ಮಳೆ ಬಂದರೆ ಕಸದ ಗಲೀಜು ರಸ್ತೆಗೆ ಹರಿಯವ ಸಾಧ್ಯತೆ ಇದೆ.

ಚರಂಡಿ ಮೇಲೆ ಕಬ್ಬಿಣ ರಾಶಿ
ಬಂದರಿನ ಮುಖ್ಯ ರಸ್ತೆಗಳ ಚರಂಡಿಗಳನ್ನು ಸ್ವಚ್ಛ ಮಾಡುವ ಕಾರ್ಯ ಇತ್ತೀಚೆಗೆ ನಡೆದಿದೆ. ಆದರೆ ಸವಾಲು ಇರುವುದು ಇಲ್ಲಿನ ಕೆಲವು ವ್ಯಾಪಾರಿಗಳು ಚರಂಡಿ ಮೇಲೆ ಕಬ್ಬಿಣ ರಾಶಿ ಹಾಕಿ ವ್ಯಾಪಾರ ನಡೆಸುತ್ತಿರುವುದರಿಂದ. ಮೊದಲೇ ಇಲ್ಲಿ ನಡೆದಾಡಲು ಜಾಗವಿಲ್ಲ. ಈ ನಡುವೆ ಗುಜರಿ ವ್ಯಾಪಾರಿಗಳು, ಕಬ್ಬಿಣ ವ್ಯವಹಾರಿಗಳು ರಸ್ತೆಯಂಚಿನಲ್ಲೇ ಚರಂಡಿ ಮೇಲೆ ಕಬ್ಬಿಣ ರಾಶಿ ಹಾಕಿದ್ದಾರೆ. ಮಳೆ ನೀರು ತುಂಬಿ ಹರಿದಾಗ ಬರುವ ಕಸಕಡ್ಡಿ, ಪ್ಲಾಸ್ಟಿಕ್‌ಗಳು ಕಬ್ಬಿಣಕ್ಕೆ ಸಿಲುಕಿಕೊಂಡು ಕೃತಕ ನೆರೆ ಸೃಷ್ಟಿಸಬಹುದು ಎನ್ನುತ್ತಾರೆ ಸ್ಥಳೀಯರು.

ಮೀನಿನ ಲಾರಿಯಿಂದ ನಿತ್ಯ ಗಲೀಜು ಹರಿಯುವ ಬಂದರು ಮೊದಲೇ ಗಲೀಜು ಪ್ರದೇಶ. ಈ ವರ್ಷ ಚರಂಡಿಯ ನಿರ್ವಹಣೆ ಇಲ್ಲದೆ ರಸ್ತೆಯಲ್ಲೇ ನೀರು ಹರಿಯಬಹುದು. ಶೀಘ್ರ ಚರಂಡಿಯ ಹೂಳೆತ್ತಿದರೆ ಒಳ್ಳೆಯದು. ಇಲ್ಲವಾದಲ್ಲಿ ವಾಹನಗಳ ಓಡಾಟಕ್ಕೂ ಅಸಾಧ್ಯವಾದೀತು.
ಹಕೀಂ, ಮೀನುಸಾಗಾಟ ಲಾರಿ ಡ್ರೈವರ್

- Advertisement -

Stay connected

278,673FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...