28.5 C
Bengaluru
Monday, January 20, 2020

ಸಮಾಧಿಯೊಳಿರ್ದ ಯೋಗಿ

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಸಾಧಕನಿಗೆ ಹಲವು ವಿಘ್ನಗಳು ಬರುವುದುಂಟು. ಅಂಥ ಕೆಲವು ಅಂತರಾಯಗಳನ್ನು ಮಹಲಿಂಗರಂಗ ಈಗಾಗಲೇ ಹೇಳಿದ್ದಾನೆ. ಸಾಧಕನು ಒಮ್ಮೊಮ್ಮೆ ಸಾಧನೆಯ ಹಾದಿಯಲ್ಲಿ ಕೆಲವು ಸಿದ್ಧಿಗಳನ್ನು ಪಡೆದಾಗ ಆತನು ತೃಪ್ತಿಪಟ್ಟದ್ದುಂಟು. ಅವನ ಸಾಧನೆಯು ಮೊಟಕಾದದ್ದೂ ಉಂಟು. ಶ್ರೀಮನ್ನಿಜಗುಣ ಶಿವಯೋಗಿಗಳು ‘ಪರಮಾರ್ಥ ಪ್ರಕಾಶಿಕೆ’ಯಲ್ಲಿ ಮಹಲಿಂಗರಂಗನು ಹೇಳುವ ವಿಘ್ನಗಳನ್ನೇ ಹೇಳಿದ್ದಾರೆ.

ಅವುಗಳನ್ನು ಹೀಗೆ ಸಂಗ್ರಹಿಸಬಹುದು: ಆಲಸ್ಯ, ರೋಗ, ದುಃಖತ್ರಯಂಗಳು (ಶರೀರದಲ್ಲಿ ಹುಟ್ಟಿದ ಆಧ್ಯಾತ್ಮಿಕ, ಇತರ ಪ್ರಾಣಿಗಳಿಂದ ಸಂಭವಿಸುವ ಆಧಿಭೌತಿಕ, ಪಂಚಭೂತಗಳಿಂದಾಗುವ ಆಧಿದೈವಿಕ), ಸಂಶಯ, ಪ್ರಮಾದ (ತಪ್ಪು), ಅನವಸ್ಥೆ (ದೃಢವಾಗಿಲ್ಲದಿರುವುದು), ತತ್ತ್ವ (ಅದು, ಎಂದರೆ ತನಗಿಂತ ಭಿನ್ನವಾದುದು), ಒಂದೇ ಮನಸ್ಸಿನಿಂದ ವಿಷಯಚಿಂತನೆ, ದರ್ಶನಭ್ರಾಂತಿ, ಅಶ್ರದ್ಧೆ – ಇವು ಹತ್ತು ವಿಘ್ನಗಳು. ಪಾತಂಜಲಯೋಗಸೂತ್ರದಲ್ಲೂ ಈ ವಿಘ್ನಗಳ ವಿಚಾರ ಬಂದಿದೆ. ಅಲ್ಲಿ ‘ವ್ಯಾಧಿಸ್ತ್ಯಾನ …ಅಂತರಾಯ’ ಎಂಬ ಸೂತ್ರವೇನೋ ಉಂಟು. ಈ ಸೂತ್ರದಲ್ಲಿ ರೋಗ, ಮನಸ್ಸಿನ ಬೇಸರ, ಸಂದೇಹ, ಉತ್ಸಾಹ ಇಲ್ಲದಿರುವುದು, ಅಲಸಿಕೆ, ಬಯಕೆ, ಸುಳ್ಳು ತಿಳಿವಳಿಕೆ, ಸಮಾಧಿ ದೊರೆಯದಿರುವುದು, ಸಮಾಧಿ ಪಡೆದರೂ ಆ ಸ್ಥಿತಿಯಿಂದ ಪತನಗೊಳ್ಳುವುದು – ಹೀಗೆ ಒಂಬತ್ತು ಬಗೆಯ ವಿಘ್ನಗಳನ್ನು ಹೇಳಿದೆ.

ಮಹಲಿಂಗರಂಗನ ಮಾತಿದು:

ತನಯ, ಕೇಳಾಲಸ್ಯ, ರೋಗಗ

ಳನುಗತದ ದುಃಖತ್ರಯಂಗಳು,

ಮನದಲುದಿಸಿದ ಸಂಶಯ ಪ್ರಮಾದಗಳು, ಚಿತ್ತದಲಿ |

ನೆನಹು ತೋರ್ಪನವಸ್ಥೆ, ತತ್ತ್ವವ

ದೆನುವುದೊಮ್ಮನ ವಿಷಯ ಚಿಂತನೆ

ಯನಘ, ದರುಶನಭ್ರಾಂತಿಯ ಶ್ರದ್ಧೆಗಳು ವಿಘ್ನಗಳು || 6.88

ಈ ಪದ್ಯದ ತಾತ್ಪರ್ಯಾರ್ಥವನ್ನು ಗಮನಿಸೋಣ: ‘ಮಗನೆ ಕೇಳು, ಆಲಸ್ಯ ಮತ್ತು ರೋಗಗಳು. ಒಡನೆ ಬಂದ ದುಃಖತ್ರಯಗಳು, ಮನಸ್ಸಿನಲ್ಲಿ ಉಂಟಾಗುವ ಸಂಶಯ ಪ್ರಮಾದಗಳು, ಚಿತ್ತದಲ್ಲಿ ತೋರಿಬರುವ ಅನವಸ್ಥೆ, ತತ್ತ್ವ ಎಂಬಿವು ಒಮ್ಮನದ ವಿಷಯ ಚಿಂತನೆ, ದರ್ಶನಭ್ರಾಂತಿ ಅಶ್ರದ್ಧೆಗಳೆಂಬ ವಿಘ್ನಗಳು ಅಗಾಧವಾಗಿರುತ್ತವೆ.’’ ಸಾಧಕನು ಇದನ್ನು ಗಮನಕ್ಕೆ ತೆಗೆದುಕೊಳ್ಳದೆ ಸಾಧನೆಯ ಹಾದಿಯಲ್ಲಿ ನಡೆಯುತ್ತಿರಬೇಕು.

ಸಾಧಕನು ಸಾಧನೆಯ ಹಾದಿಯಲ್ಲಿ ಇರುವಾಗ ಕೆಲವೊಮ್ಮೆ ಸಿದ್ಧಿಗಳು ಪ್ರಾಪ್ತವಾಗುವುದುಂಟು. ಆದರೆ, ಇವು ಅಲ್ಪಕಾಲದ ಸಿದ್ಧಿಗಳು ಮಾತ್ರ. ಪ್ರತಿಭೆ, ಶ್ರವಣ, ಅತಿಶಯವಾದ ವಾರ್ತೆ, ದರ್ಶನ, ಆಸ್ವಾದನ ಮತ್ತು ವೇದನ ಇವು ಆರು ಗತಿಗಳು. ಇವು ವಿಚಿತ್ರವಾಗಿ ಅವತರಿಸುತ್ತವೆ. ಆದರೆ, ಸಾಧಕನು ಈ ಕಡೆ ಹೆಚ್ಚು ಗಮನ ಕೊಡಕೂಡದು! ಇವು ಸಾಧಕನಿಗೆ ‘ಬ್ರಹ್ಮಾಭ್ಯಾಸಕಾಲ’ದಲ್ಲಿ ಉಂಟಾಗುತ್ತವೆ. ಆದರೆ, ಸಾಧಕನು ‘ಬ್ರಹ್ಮಾಭ್ಯಾಸ’ವನ್ನು ಬಿಡದೆ ನಡೆಸುತ್ತಿರಬೇಕು. ಮಹಲಿಂಗರಂಗನ ಮಾತುಗಳು ಹೀಗಿವೆ:

ಈ ವಿಧದೊಳಭ್ಯಾಸವನು ಬಿಡ

ದಾವಗಲು ತಪ್ಪದಲೆ ನೆರೆ ತಾ

ನೋವಿ ಮಾಡುತ್ತಿರಲು ಚಂಚಳವಳಿದು ಚಿತ್ತಕ್ಕೆ |

ಆವ ವೃತ್ತಿಯು ಹುಟ್ಟದೆಯೆ ಮೇ

ಣಾವ ವಾಸನೆಯಿಲ್ಲದೆಯೆ ಸ

ತ್ತ್ವಾವಲಂಬನೆಯಾಗಿ ಶಾಂತಿಯ ತೋರಿ ಸುಖವಹುದು || 6.90

ಈ ಪದ್ಯದ ಅರ್ಥ ಇಷ್ಟು: ‘‘ಈ ರೀತಿಯಾಗಿ ಎಡೆಬಿಡದೆ ಅಭ್ಯಾಸವನ್ನು ಶ್ರದ್ಧೆಯಿಂದ ಮಾಡುತ್ತಿರುವಾಗ ಮನಸ್ಸು ಚಂಚಲತೆಯಿಂದ ಮುಕ್ತವಾಗುತ್ತದೆ. ಆಗ ಯಾವ ಬೇರೆ ವೃತ್ತಿಗಳೂ ಒದಗಿಬರದೆ ಮತ್ತು ಯಾವ ವಾಸನೆಯೂ ಇಲ್ಲದೆ ಸತ್ತಾ್ವವಲಂಬನೆಯಾಗಿ, ಶಾಂತಿಸುಖಗಳು ಒದಗಿಬರುತ್ತವೆ.’’ ಹೀಗೆಂದು ಮಹಲಿಂಗರಂಗ ಹೇಳಿದ್ದಾನೆ. ಈ ಪದ್ಯದಲ್ಲಿ ‘ಸತ್ತಾ್ವವಲಂಬನೆ’ ಎಂಬ ಮಾತು ಬಂದಿದೆಯಷ್ಟೆ. ಮೂರು

ಬಗೆಯ ಗುಣಗಳಲ್ಲಿ ಸತ್ತ ್ವುಣವೂ ಒಂದು ಇದಕ್ಕೆ ಪ್ರಥಮ ಸ್ಥಾನವುಂಟು. ರಜೋಗುಣ, ತಮೋಗುಣ ಸಾಧಕನಿಗೊ ಬ್ರಹ್ಮಸಾಧಕನಿಗೊ ಸುತಾರಾಂ ಅನ್ವಯಿಸುವುದಿಲ್ಲ. ಈ ಎಚ್ಚರ ಸಾಧಕನಿಗೆ ಇರುವುದು ಅಗತ್ಯ.

ಸಾಧಕನು ಈ ಭೂಮಿಕೆಗಳ ಅಭ್ಯಾಸದಲ್ಲಿ ಶ್ರವಣಾದಿ ಪೂರ್ಣಸಮಾಧಿ ಉಂಟಾಗುವಂತೆ ಶಾಸ್ತ್ರವಿಚಾರಗಳನ್ನು ಮನದಲ್ಲಿ ತಾಳಬೇಕು. ಈ ಮುಖಾಂತರ ಯೋಗಾಭ್ಯಾಸ ಮಾಡಿದರೆ ಸಹಜಾನಂದ ಗುರುಪದ ಸಿಗುವುದರಲ್ಲಿ ಸಂಶಯವೇ ಇಲ್ಲ. ಅದು ದೊರೆತ ಮೇಲೆ ಉಳಿದ ಯಾವುದೇ ವಿಚಾರಗಳು ನಗಣ್ಯವೇ.

ಇಷ್ಟು ವಿಚಾರಗಳ ಮೂಲಕ ಆರನೆಯ ಅಧ್ಯಾಯವು ಇಲ್ಲಿಗೆ ಕೊನೆಗೊಳ್ಳುತ್ತದೆ. ಮಹಲಿಂಗರಂಗನು ಅಧ್ಯಾಯದ ಕೊನೆಗೆ ಶ್ರೀಗಿರೀಶನನ್ನು ನೆನೆಯುತ್ತಾನೆ. ಇಲ್ಲಿಗೆ ‘ಸಪ್ತಭೂಮಿಕೆಗಳ ಅಭ್ಯಾಸ’ವೆಂಬ ಆರನೆಯ ಅಧ್ಯಾಯವು ಮುಕ್ತಾಯವಾಯಿತು. ಅಧ್ಯಾತ್ಮವು ಶೋಧನೆಯ ಜಗತ್ತನ್ನು ಬೇಡುತ್ತದೆ. ಇದು ಅಂತರಂಗಕ್ಕೆ ಸೇರಿದ್ದು. ನಾವು ಅಂತರಂಗ ಶೋಧನೆ ಮಾಡಿಕೊಂಡಾಗ ಆ ಅನುಭವದಲ್ಲಿ ಆತ್ಮಾನುಭವ ನಮಗೆ ಉಂಟಾಗುತ್ತದೆ.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...