17.8 C
Bengaluru
Wednesday, January 22, 2020

ಧರ್ಮದ ನೆಲೆಯ ಸತ್ಯಯುಗ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಯುಧಿಷ್ಠಿರಾದಿ ಪಾಂಡವರು ಮರುದಿನ ಪ್ರಾತಃಕಾಲ ಪ್ರಾತರ್ವಿಧಿ, ಅಹ್ನಿಕಗಳನ್ನು ಪೂರೈಸಿಕೊಂಡರು. ಕುರುಕ್ಷೇತ್ರದಲ್ಲಿ ಶರಶಯ್ಯೆಯಲ್ಲಿ ಮಲಗಿರುವ ಪಿತಾಮಹ ಭೀಷ್ಮನೆಡೆಗೆ ಶ್ರೀಕೃಷ್ಣನ ಜತೆಗೂಡಿ ತಲುಪಿ ಚರಣವನ್ನು ರ್ಸ³ಸಿ ನಮಸ್ಕರಿಸಿದರು. ಅಲ್ಲಿಯೇ ಇದ್ದ ವೇದವ್ಯಾಸಾದಿ ಮಹಾತ್ಮರಿಗೂ ಪ್ರಣಾಮಗೈದು ನಿಂತುಕೊಂಡರು. ಭೀಷ್ಮನು ಹೇಳಲಿರುವ ಇನ್ನಷ್ಟು ರಾಜನೀತಿಯ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದಿದ್ದರೂ ಯುಧಿಷ್ಠಿರನು ಮುಂಚಿತವಾಗಿ ತಾನೇ ಬೇರೊಂದು ಪ್ರಶ್ನೆಯನ್ನು ಮುಂದಿರಿಸಿದನು.

‘ಮಹಾಪ್ರಾಜ್ಞನಾದ ಪಿತಾಮಹನೆ! ಒಂದು ಪ್ರಶ್ನೆ ನನ್ನನ್ನು ಗಾಢವಾಗಿ ಕಾಡುತ್ತಿದೆ. ಅದೇನೆಂದರೆ – ಈ ಲೋಕದಲ್ಲಿ ‘ರಾಜ’ ಎಂಬ ಶಬ್ದ ಹಾಗೂ ಆ ಸ್ಥಾನದ ಸೃಷ್ಟಿ ಹೇಗಾಯಿತು? ಏಕೆಂದರೆ – ಎಲ್ಲ ಪ್ರಜೆಗಳಿಂದಲೂ ಶಿರ ಬಾಗಿ ನಮಸ್ಕರಿಸುವ, ‘ರಾಜ’ನೆಂದು ಗೌರವಿಸಲ್ಪಡುವ ವ್ಯಕ್ತಿಯು ಕೂಡ ಎಲ್ಲರಂತೆ ಓರ್ವ ಮನುಷ್ಯನೇ ಆಗಿರುತ್ತಾನೆ. ಇನ್ನಿತರ ಮಾನವರಂತೆಯೇ ದೇಹ-ಇಂದ್ರಿಯಾದಿಗಳನ್ನು, ಮಜ್ಜೆ-ಮಾಂಸ-ರಕ್ತವನ್ನು ತುಂಬಿಕೊಂಡ, ಬುದ್ಧಿ-ಮನಸ್ಸುಗಳನ್ನು ಹೊಂದಿರುವ, ಅನ್ಯರಂತೆಯೇ ಗುಣಾವಗುಣಗಳನ್ನು ವ್ಯಕ್ತಪಡಿಸುವ, ತತ್ಸಮಾನ ಅಥವಾ ತುಸು ಹೆಚ್ಚು-ಕಡಮೆ ಶೂರತ್ವ-ಪರಾಕ್ರಮಗಳನ್ನು, ಸಾಮರ್ಥ್ಯವನ್ನು ಹೊಂದಿರಬಹುದಾದ ವ್ಯಕ್ತಿಯು ‘ರಾಜ’ ಎನಿಸಿಕೊಂಡಾಗ ಶ್ರೇಷ್ಠತ್ವ ಪಡೆದುಬಿಡುತ್ತಾನೆ.

ಹೀಗೆ ಯೋಚಿಸಿದಾಗ ‘ರಾಜ’ನೆಂಬ ವಿಶೇಷತೆಯ ಪರಿಕಲ್ಪನೆ ಹೇಗೆ, ಎಂದಿನಿಂದ ಸೃಷ್ಟಿಯಾಯಿತು ಎಂದು ಅರಿಯುವ ಕುತೂಹಲ ಉಂಟಾಗಿದೆ. ಈ ಕುರಿತು ವಿವರಿಸಲು ನೀನೇ ಅತ್ಯಂತ ಸಮರ್ಥ ಎಂಬ ಭಾವನೆ ನನ್ನದು’ – ಹೀಗೆಂದು ಯುಧಿಷ್ಠಿರನು ಕೇಳಿಕೊಂಡನು. ಯುಧಿಷ್ಠಿರನ ಆ ವಿಶಿಷ್ಟ ಜಿಜ್ಞಾಸೆಯ ಕುತೂಹಲವನ್ನು ಅರಿತ ಭೀಷ್ಮನು ಮುಗುಳ್ನಗೆ ಸೂಸುತ್ತ ಹೀಗೆ ವಿವರಿಸತೊಡಗಿದನು:

‘ಶುದ್ಧಾತ್ಮನಾಗಿರುವ ಯುಧಿಷ್ಠಿರ! ‘ರಾಜ’ ಪದ ಸೃಷ್ಟಿಯ ಕುರಿತು ನಿನ್ನಲ್ಲಿಯ ಕುತೂಹಲ ಅರ್ಥವತ್ತಾಗಿದೆ. ನನಗೆ ತಿಳಿದಂತೆ ಅತ್ಯಂತ ಪ್ರಾಚೀನ ಕಾಲದಲ್ಲಿ ಅಂದರೆ ಸತ್ಯಯುಗವೆಂದು ಭಾವಿಸುವ ಕಾಲದಲ್ಲಿ – ಆ ಕಾಲದಲ್ಲಿ ರಾಜ್ಯ ಎನ್ನುವುದೇ ಇರಲಿಲ್ಲ. ಆದ್ದರಿಂದ ರಾಜ ಎನ್ನುವವನೂ ಇರಲಿಲ್ಲ. ತಪ್ಪಿ ನಡೆದವರಿಗೆ ವಿಧಿಸಲಾಗುವ ದಂಡನೆಯೂ ಇರಲಿಲ್ಲ. ದಂಡಿಸುವವನೂ ಇರಲಿಲ್ಲ. ಆಗ ಅವುಗಳ ಆವಶ್ಯಕತೆ ಇರುತ್ತಿರಲಿಲ್ಲ.

ಪ್ರಜೆಗಳೆಲ್ಲರೂ ಧರ್ಮದ ನೆಲೆಯಿಂದ ಕರ್ತವ್ಯಬುದ್ಧಿಯಿಂದ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುತ್ತಿದ್ದರು (ನ ರಾಜ್ಯಂ ನೈವ ರಾಜಾಸೀತ್ ನ ದಂಡೋ ನ ಚ ದಾಂಡಿಕಃ | ಧಮೇಣೈವ ಪ್ರಜಾಃ ಸರ್ವೆ ರಕ್ಷಂತಿ ಸ್ಮ ಪರಸ್ಪರಮ್ ||). ಮುಂದೆ ರಾಜಮಹಾರಾಜರು ಆಳುತ್ತಿದ್ದ ಕಾಲದಲ್ಲಿ, ಅವರು ಧರ್ಮತತ್ಪರರಾಗಿದ್ದರಿಂದ ಎಲ್ಲಿಯೂ ಅನ್ಯಾಯವಿರುತ್ತಿರಲಿಲ್ಲ.

ಹಾಗೆಯೇ ಕಾಲಕ್ರಮೇಣ ಪರಸ್ಪರರ ಸಂರಕ್ಷಣೆಯ ವಿಷಯದಲ್ಲಿ ಬಗೆಬಗೆಯ ಸಂಕಟಗಳು ಎದುರಾಗತೊಡಗಿದವು. ಎಲ್ಲರಲ್ಲೂ ಸ್ವಮೋಹ ಆವರಿಸತೊಡಗಿತು. ಮೋಹ ಆವರಿಸಿರುವ ಜನರು ಕರ್ತವ್ಯ-ಅಕರ್ತವ್ಯಗಳ ಜ್ಞಾನಶೂನ್ಯರಾಗಿ ಧರ್ಮವೇ ರಕ್ಷಣೆಗೈಯುವ ಸ್ಥಿತಿ ಶಿಥಿಲವಾಗತೊಡಗಿತು. ಮೋಹ ವಶವರ್ತಿಗಳಾಗಿರುವ ಅವರೆಲ್ಲ ಲೋಭದತ್ತ ವಶೀಭೂತರಾಗಿತೊಡಗಿದರು.

ಲೋಭವಶರಾದ ಅವರು ಯಾವ ವಸ್ತು ತನಗೆ ಬೇಕು ಎನಿಸಿತೋ ಅದನ್ನು ಪಡೆದುಕೊಳ್ಳಲೇಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಿಸತೊಡಗಿದ ಮೇಲೆ ಘರ್ಷಣೆಗಳಾದತೊಡಗಿದವು. ಲೋಭದ ವಶರಾಗಿರುವವರಲ್ಲಿ ಕಾಮವು ಪ್ರವೇಶ ಮಾಡಿತು. ಕಾಮಾಪೇಕ್ಷೆಯ ಜಿದ್ದಿನಿಂದ ಕ್ರೋಧವು ಪ್ರವೇಶಿಸಿತು. ಹೀಗೆ ಭಾವ-ಶೀಲ ಪರಿವರ್ತನೆಗೊಳ್ಳುತ್ತಿದ್ದ ಜನರಲ್ಲಿ, ‘ತಾನೇನು ಮಾಡುತ್ತಿರುವೆ?, ಅದು ಧರ್ಮಯುತವಾದುದೇ ಎಂಬ ವಿವೇಚನೆಯೂ ನಶಿಸಿತು.

ಜನಮಾನಸದಲ್ಲಿ ಅಗಮ್ಯ-ಅಗಮನ, ವಾಚ್ಯ-ಅವಾಚ್ಯ, ಭಕ್ಷ ್ಯ -ಅಭಕ್ಷ ್ಯ ದೋಷ-ಅದೋಷಗಳ ಪರಿಭೇದವನ್ನು ಅರಿಯದೆ ತಮತಮಗೆ ಹೇಗೆನಿಸಿತೋ ಹಾಗೆ ವರ್ತಿಸತೊಡಗಿದರು. ಈ ರೀತಿಯಾಗಿ ಮನುಷ್ಯಲೋಕದಲ್ಲಿ ಧರ್ಮಗ್ಲಾನಿಯ ವಿಪ್ಲವವೇ ಉಂಟಾಯಿತು. ವೇದಗಳ ಸ್ವಾಧ್ಯಾಯವೂ ಕುಸಿಯಿತು. ವೈದಿಕ ಜ್ಞಾನ-ಕರ್ಮಗಳು ಲೋಪಗೊಳ್ಳತೊಡಗಿದವು.

ಯಜ್ಞಾದಿ ಸತ್ಕರ್ಮಗಳು ನಶಿಸಿದವು. ಹಾಗೆಯೇ ಭೂಲೋಕದಲ್ಲಿ ವೇದೋಕ್ತ ಧರ್ಮ-ಕರ್ಮಗಳ ಅನುಸರಣೆಯೇ ಕುಸಿಯತೊಡಗಿರುವುದನ್ನು ಕಂಡು ದೇವತೆಗಳೆಲ್ಲ ಚಿಂತೆಗೊಳಗಾದರು. ಅವರೆಲ್ಲ ಸೇರಿಕೊಂಡು ಬ್ರಹ್ಮದೇವನಿಗೆ ಶರಣಾದರು. ‘ದೇವನೆ! ಮಾನವಲೋಕದಲ್ಲಿ ಈಗ ಲೋಭ, ಮೋಹ, ಕಾಮ, ಕ್ರೋಧಾದಿಗಳು ಆವರಿಸುತ್ತಿವೆ. ಸನಾತನ ವೇದಜ್ಞಾನವು ಲುಪ್ತಗೊಳ್ಳುತ್ತಲಿದೆ. ಪರಿಣಾಮ ಏನಾಗುತ್ತದೆಯೋ ಎಂಬ ಭಯ ಕಾಡುತ್ತಿದೆ. ದೇವಲೋಕವೀಗ ದುರ್ಬಲಗೊಂಡ ಅನುಭವವಾಗುತ್ತಲಿದೆ. ಮಾನವಲೋಕದಲ್ಲಿ ಯಜ್ಞ-ಅಘರ್Â-ತರ್ಪಣಾದಿ ಕರ್ಮಗಳನ್ನು ಆಚರಿಸುತ್ತ, ಯಜ್ಞಾದಿಗಳಲ್ಲಿ ಅಗ್ನಿಯ ಮೂಲಕ ಆಹುತಿಗೈಯುವ ಘೃತದಿಂದ ಮೇಲೇಳುವ ಹೋಮಧೂಮದಿಂದಲೇ ಬಲ ಪಡೆಯುವ ದೇವತೆಗಳು ನಾವು.

ಮರಳಿ ಭೂಲೋಕದತ್ತ ಕಾಲಕಾಲಕ್ಕೆ ಮಳೆ ಸುರಿಸಿ ಸಸ್ಯಾದಿಗಳನ್ನು ಸೃಷ್ಟಿಸಿ ಪೋಷಿಸಿಸುತ್ತಲಿದ್ದೆವು. ಈ ಆವರ್ತನೆಯ ಚಕ್ರವೇ ಕುಂಠಿತವಾಗುವಂತಾಗಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲೇಬೇಕಿದೆ.’ ಹೀಗೆಂದು ದೇವತೆಗಳು ಬ್ರಹ್ಮದೇವನ ಎದುರು ಅಳಲನ್ನು ಮುಂದಿಟ್ಟರು.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...