19.5 C
Bangalore
Wednesday, December 11, 2019

ಎಲ್ಲದಕ್ಕೂ ವಿಚ್ಛೇದನವೇ ಪರಿಹಾರವಲ್ಲ

Latest News

ಪ್ರಸಾದನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿಗೆ ಜೋಳದರಾಶಿ ದೊಡ್ಡನಗೌಡ ಪುರಸ್ಕಾರ

ಬಳ್ಳಾರಿ: ರಂಗತೋರಣ ಸಂಸ್ಥೆಯ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರಕ್ಕೆ ಬೆಂಗಳೂರಿನ ಪ್ರಸಾದನ ಕಲಾವಿದ ರಾಮಕೃಷ್ಣ ಕನ್ನರ್ಪಾಡಿ ಆಯ್ಕೆಯಾಗಿದ್ದಾರೆ. ನಗರದ ರಾಘವ ಕಲಾಮಂದಿರದಲ್ಲಿ ಡಿ.28ರಂದು ಸಂಜೆ 5.45ಕ್ಕೆ...

ಡಿ.14 ರಂದು ಬೆಂಗಳೂರಿನಲ್ಲಿ ಮೀನುಗಾರರ ಸಮಾವೇಶ

ಮೈಸೂರು: ರಾಷ್ಟ್ರೀಯ ಮೀನುಗಾರರ ಸಂಘದ ವತಿಯಿಂದ ಡಿ. 14 ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಮೀನುಗಾರರ ಸ್ವಾಭಿಮಾನ ಸಮಾವೇಶ...

ಪರಸ್ಪರ ಭಾವನಾತ್ಮಕ ಸಂದೇಶ ಮೂಲಕ 2ನೇ ವಿವಾಹ ವಾರ್ಷಿಕೋತ್ಸವವನ್ನು ರಮಣೀಯವಾಗಿಸಿದ ವಿರುಷ್ಕಾ ದಂಪತಿ!

ನವದೆಹಲಿ: ತಾರಾ ದಂಪತಿಯಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಂದು ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ನೆನಪಿನ ಕ್ಷಣವನ್ನು...

ತಳೇವಾಡ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು: ಇಂದು ಮೃತ ದೇಹ ಪತ್ತೆ

ವಿಜಯಪುರ: ಕೆರೆಯಲ್ಲಿ ಈಜಲು ತೆರಳಿದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ತಳೇವಾಡ ಗ್ರಾಮದಲ್ಲಿ ಸಂಭವಿಸಿದೆ. ಸುದೀಪ (10)...

ಗ್ರಾಹಕರಿಗೆ ಸಿಹಿ ಸುದ್ದಿ: ಹೊಸ ಬೆಳೆಯ ಆಗಮನದಿಂದ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇಳಿಕೆ

ನವದೆಹಲಿ: ಇತ್ತೀಚಿನ ವಾರಗಳಲ್ಲಿ ಗ್ರಾಹಕರಿಗೆ ಗಗನಕುಸುಮವಾಗಿದ್ದ ಈರುಳ್ಳಿ ಬೆಲೆಯು ಕೊಂಚ ಕೊಂಚವಾಗಿ ಇಳಿಯುವ ಲಕ್ಷಣಗಳು ಕಾಣುತ್ತಿವೆ. ರೈತರು ಹೊಸ ಬೆಳೆಯನ್ನು ಗುಜರಾತ್​ ಮತ್ತು...
  • ನಾನೊಬ್ಬ ಉಪನ್ಯಾಸಕ. 50 ವರ್ಷ. ನನ್ನ ಹೆಂಡತಿಗೆ 47 ವರ್ಷ. ಅವಳು ನನ್ನ ಅಕ್ಕನ (ನನ್ನ ತಂದೆಯ ದೊಡ್ಡ ಹೆಂಡತಿ) ಮಗಳೇ. ಮದುವೆಯಾಗಿ 20ವರ್ಷಗಳಾಗಿವೆ. ನನಗೀಗ ಬಿ.ಇ ಓದುತ್ತಿರುವ ಮಗಳೂ ಪಿ.ಯು.ಸಿ ಓದುತ್ತಿರುವ ಮಗನೂ ಇದ್ದಾರೆ. ನನ್ನ ಹೆಂಡತಿ ಮದುವೆಯಾದ ದಿನದಿಂದ ನನಗೆ ಹೊಂದಿಕೊಂಡಿಲ್ಲ. ಸದಾ ಜಗಳ, ಕೋಪ. ನಾನು ಒಳ್ಳೆಯ ಮಾತನ್ನೇ ಹೇಳಿದರೂ ಅವಳು ಅದರಲ್ಲಿ ತಪ್ಪು ಕಾಣುತ್ತಾಳೆ. ತಿಂಗಳಿಗೆ 15 ರಿಂದ 20 ದಿವಸ ರೂಮಿನ ಬೋಲ್ಟ್ ಹಾಕಿಕೊಂಡು ಒಬ್ಬಳೇ ಮಲಗುತ್ತಾಳೆ. ಹಿಂದೆ ವಿಪರೀತ ಕೋಪ ಬಂದಾಗ ಅವಳು ನನ್ನನ್ನು ಸೌಟಿನಲ್ಲೂ, ಕಾಲಿನಲ್ಲೂ ಹೊಡೆದ, ಒದ್ದ ನಿದರ್ಶನಗಳು ಇವೆ. ಕೋಪ ಬಂದಾಗ ಒಂದು ಹುಲ್ಲು ಕಡ್ಡಿಯನ್ನೂ ಎತ್ತಿಡುವುದಿಲ್ಲವಾದ್ದರಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂದು ನಾನೇ ಅಡುಗೆ ಕೆಲಸ ಎಲ್ಲಾ ನೋಡಿಕೊಂಡು ಕೆಲಸಕ್ಕೆ ಹೋಗುತ್ತೇನೆ. ಈಗೀಗ ನನ್ನ ಮಕ್ಕಳೂ ನನಗೆ ಸಹಾಯ ಮಾಡುತ್ತಾರೆ. ನನಗೆ ಈ ಜೀವನ ಸಾಕಾಗಿ ಹೋಗಿದೆ ಮೇಡಂ. ನನ್ನಲ್ಲಿ ಹುಡುಕಿದರೂ ಒಂದು ದುರ್ನಡತೆಯಿಲ್ಲ. ಇವಳನ್ನು ಬಿಟ್ಟು ಮತ್ತೊಬ್ಬ ಹೆಣ್ಣಿನ ಕಡೆ ತಿರುಗಿಯೂ ನೋಡಿಲ್ಲ. ಆದರೂ ನನ್ನಮೇಲೆ ಇವಳಿಗೆ ಯಾಕೆ ಈ ಮಟ್ಟದ ಕೋಪವೋ ದ್ವೇಷವೋ ತಿಳಿಯುತ್ತಿಲ್ಲ. ಈಗ ನಾನು ವಿಚ್ಛೇದನವನ್ನು ಕೊಡಬಹುದೇ ತಿಳಿಸಿ. ನನ್ನ ನೋವಿನ ಬದುಕಿಗೊಂದು ಪರಿಹಾರ ತಿಳಿಸಿ.

ನೀವು ಉಪನ್ಯಾಸಕರು. ಸಾಕಷ್ಟು ವರ್ಷ ಕೆಲಸ ಮಾಡಿರುವವರು. ಜನರ ರೀತಿನೀತಿಗಳನ್ನು ಕಣ್ಣಾರೆ ಕಂಡಿರುವವರು. ಇಂಥಾ ನಿಮಗೆ, ನಿಮ್ಮ ಹೆಂಡತಿಗೆ ಮಾನಸಿಕ ಸಮಸ್ಯೆ ಇದೆ ಎಂದು ತಿಳಿಯಲಿಲ್ಲವೇ? ಮಾನಸಿಕವಾಗಿ ಆರೋಗ್ಯವಾಗಿರುವ ಯಾರಾದರೂ 20 ದಿನಗಟ್ಟಲೇ ಕೋಪದಲ್ಲಿರುತ್ತಾರೆಯೇ? ಅದು ತೀರಾ ಅಸಹಜವೆಂದು ನಿಮಗೆ ಮದುವೆಯಾದಾಗಲೇ ಗೊತ್ತಾಗಬೇಕಿತ್ತು ಅಲ್ಲವೇ? ನಮ್ಮ ಸಮಾಜದಲ್ಲಿ ಇದೊಂದು ಅವಜ್ಞೆಯಿದೆ.

ಕೋಪ, ಅಳು, ದ್ವೇಷ, ತಿರಸ್ಕಾರ, ಅತಿ ನಿಧಾನ ಇವೆಲ್ಲವನ್ನೂ ವ್ಯಕ್ತಿಯ ಸ್ವಭಾವಗಳು ಎಂದು ಪರಿಗಣಿಸಿಬಿಡುತ್ತೇವೆ. ಆದರೆ ಇವೆಲ್ಲವೂ ಸ್ವಲ್ಪ ಹದದಲ್ಲಿದ್ದರೆ ಮಾತ್ರ ಸ್ವಭಾವ. ಸ್ವಲ್ಪ ಅತಿಯಾದರೂ ಅದೊಂದು ಮೆಂಟಲ್ ಡಿಸಾರ್ಡರ್. ಅತಿಯಾಗಿ ಕೋಪಿಸಿಕೊಳ್ಳುವುದು, ತನ್ನ ಕರ್ತವ್ಯಗಳನ್ನು ಮತ್ತು ದಿನನಿತ್ಯದ ಕೆಲಸಗಳನ್ನು ಮಾಡದಿರುವುದು, ವಿನಾ ಕಾರಣ ದ್ವೇಷವನ್ನು ಸಾಧಿಸುವುದು, ಆಡಿದ ಮಾತನ್ನು ಸರಿಯಾಗಿ ಗ್ರಹಿಸದಿರುವುದು ಇವೆಲ್ಲವೂ ನಿಮ್ಮ ಹೆಂಡತಿಗೆ ಇದೆ. ಇವು ಆಕೆಗೆ ಇರಬಹುದಾದ ಹಲವು ಡಿಸಾರ್ಡರ್​ಗಳನ್ನು ಸೂಚಿಸುತ್ತಿವೆ.

ಇದಕ್ಕೆ ಕಾರಣಗಳನ್ನು ನಿಮ್ಮ ಪತ್ರದ ಆಧಾರದಿಂದಲೇ ಹುಡುಕುವ ಪ್ರಯತ್ನ ಮಾಡುತ್ತೇನೆ. ನಿಮ್ಮ ತಂದೆಗೆ ನಿಮ್ಮ ತಾಯಿ ಎರಡನೇ ಹೆಂಡತಿ. ಬಹುಶಃ ಅವರ ಮೊದಲ ಹೆಂಡತಿ ಇರಲಿಕ್ಕಿಲ್ಲವಾದ್ದರಿಂದ ಅವರು ಎರಡನೇ ಮದುವೆಯಾಗಿರಬಹುದು. ನಿಮ್ಮ ಅಕ್ಕ ( ಈಗ ಅವರು ನಿಮ್ಮ ಅತ್ತೆ ) ನನ್ನು ನಿಮ್ಮ ತಾಯಿಯೇ ಸಾಕಿರಬಹುದು. ಅವರಿಬ್ಬರ ಸಂಬಂಧ ಸುಮುಖವಾಗಿತ್ತೋ ಅಥವಾ ಮಲತಾಯಿ ಮಲಮಗಳ ವಿಚಿತ್ರ ರೀತಿಯಲ್ಲಿತ್ತೋ ಗೊತ್ತಿಲ್ಲ. ನಿಮ್ಮ ಅಕ್ಕ ಅವರ ಮದುವೆಯಾದ ನಂತರ ತಮ್ಮ ಮಕ್ಕಳಲ್ಲಿ ನಿಮ್ಮ ತಾಯಿಯ ಬಗ್ಗೆ ಮತ್ತು ಮಲ ತಮ್ಮನಾದ ನಿಮ್ಮ ಬಗ್ಗೆಯೂ ಯಾವ ಅಭಿಪ್ರಾಯಗಳನ್ನು ಮೂಡಿಸಿದ್ದಾರೋ ಗೊತ್ತಿಲ್ಲ.

ಸ್ವಲ್ಪ ಕಡಿಮೆ ಬುದ್ಧಿಶಕ್ತಿಯಿರುವ ನಿಮ್ಮ ಹೆಂಡತಿ ತಮ್ಮ ಬಾಲ್ಯದ ಅಹಿತಕರವಾದ ವಿಷಯಗಳನ್ನು ಇನ್ನೂ ಮನಸ್ಸಿನಲ್ಲಿ ತುಂಬಿಕೊಂಡು ಈ ರೀತಿ ವರ್ತಿಸುತ್ತಿರಬಹುದು. ಏನೇ ಆದರೂ ಇದು ಅಸಹಜ ಮತ್ತು ಅನಾರೋಗ್ಯ ಮನಸ್ಸಿನ ವ್ಯಾಪಾರವೇ. ನಿಮ್ಮ ಮುಂದೆ ನಿಮ್ಮ ಮುಂದಿನ ಜೀವನವನ್ನು ಸುಗಮ ಮಾಡಿಕೊಳ್ಳಲು ಹಲವು ದಾರಿಗಳಿವೆ. ನಿಮ್ಮ ಹೆಂಡತಿಗೆ ಇಷ್ಟೊಂದು ಮಾನಸಿಕ ವ್ಯತ್ಯಯಗಳಿದ್ದರೂ ಬುದ್ಧಿವಂತ ಮಕ್ಕಳು ನಿಮಗಿದ್ದಾರೆ. ಅವರು ನಿಮಗೆ ಸಹಾಯಕವಾಗಿ ನಿಂತಿದ್ದಾರೆ. ಆದರೆ ಒಮ್ಮೆ ಯೋಚಿಸಿ. ಎಷ್ಟೇ ಕೆಟ್ಟವರಾದರೂ ನಿಮ್ಮ ಹೆಂಡತಿ ಅವರಿಗೆ ತಾಯಿಯಲ್ಲವೇ? ನೀವು ಈ ವಯಸ್ಸಿನಲ್ಲಿ ವಿಚ್ಛೇದನ ತೆಗೆದುಕೊಳ್ಳುವುದಾದರೆ ಮಕ್ಕಳ ಅಭಿಪ್ರಾಯವನ್ನೂ ಒಮ್ಮೆ ನೀವು ಕೇಳಬೇಕಲ್ಲವೇ? ಅವರೊಂದಿಗೂ ಮಾತನಾಡಿ ಈ ವಿಷಯವನ್ನು ನಿರ್ಧರಿಸಿ.

ಮತ್ತೊಂದು ವಿಷಯವೆಂದರೆ, ನಿಮ್ಮ ಹೆಂಡತಿ ಕೆಟ್ಟವರೋ ಒಳ್ಳೆಯವರೋ ಆದರೂ ನಿಮ್ಮೊಡನೆ 20 ವರ್ಷಗಳ ಕಾಲ ಬದುಕಿದ ಮತ್ತು ನಿಮಗೆ ಇಬ್ಬರು ಮಕ್ಕಳನ್ನು ಹೆತ್ತುಕೊಟ್ಟ ಆ ಹೆಣ್ಣುಜೀವವನ್ನು ಒಮ್ಮೆಲೇ ವಿಚ್ಛೇದನವನ್ನು ಕೊಟ್ಟು ಹೊರಗೆ ಹಾಕಿದರೆ ಅವರು ಎಲ್ಲಿಗೆ ಹೋಗಬೇಕು? ಅವರ ಮುಂದಿನ ಜೀವನದ ಬಗ್ಗೆಯೂ ನೀವು ಯೋಚಿಸಬೇಕಾಗುತ್ತದೆ. ಮೂರನೆಯ ದಾರಿಯೂ ನಿಮಗಿದೆ. ನಿಮ್ಮ ಹೆಂಡತಿಗೆ ಮಕ್ಕಳಿಂದ ಹೇಳಿಸಿ, ಅಥವಾ ದೊಡ್ಡವರಿಂದ ಹೇಳಿಸಿ. ಪರಿಣಿತರಾದ ಮನೋವೈದ್ಯರ ಹತ್ತಿರ ತೋರಿಸಿನೋಡಿ.

ಔಷಧಿ ಮತ್ತು ಥೆರಪಿಗಳ ಸಹಾಯದಿಂದ ಅವರ ಮಾನಸಿಕ ಆರೋಗ್ಯವನ್ನು ಸ್ವಲ್ಪಮಟ್ಟಿಗೆ ಹತೋಟಿಗೆ ತರಬಹುದು. ಇದನ್ನೂ ನೀವು ಪ್ರಯತ್ನಪೂರ್ವಕವಾಗಿ ಬಹಳ ಜಾಣತನದಿಂದ ನಿಭಾಯಿಸಬೇಕಾಗುತ್ತದೆ. ವಿಚ್ಛೇದನವೊಂದೇ ಎಲ್ಲಕ್ಕೂ ಪರಿಹಾರವಲ್ಲ. ನಿಮಗೆ 50ವರ್ಷ. ಈ ಕಾಲದಲ್ಲಿ ಈ ವಯಸ್ಸಿನಲ್ಲಿ ಮರುಮದುವೆಯಾಗುವುದೂ ಕಷ್ಟ. ಮತ್ತು ಇನ್ನು ಐದಾರುವರ್ಷಗಳಲ್ಲಿ ನಿಮ್ಮ ಮಕ್ಕಳು ತಮ್ಮ ನೆಲೆಗಳನ್ನು ಕಂಡುಕೊಂಡು ಹಕ್ಕಿಯ ಹಾಗೆ ಮನೆಯಿಂದ ಹಾರಿದರೆ ನೀವು ಒಂಟಿಯಾಗಿ ಹೇಗೆ ಬದುಕುತ್ತೀರಿ? ಈ ಬಗ್ಗೆಯೂ ನೀವು ಯೋಚಿಸಬೇಕಲ್ಲವೇ?

Stay connected

278,740FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...