28.5 C
Bengaluru
Monday, January 20, 2020

ಸುಪ್ತ ಮನಸು ಕೇಳುತಿದೆ ಏಟು!

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ನಿಮ್ಮ ಮಗನೋ, ಮಗಳೋ ವಿಪರೀತ ಹಠಮಾರಿಯಾಗಿದ್ದರೆ, ಅದು ಆನುವಂಶೀಯವಾಗಿ ಬಂದ ಸಮಸ್ಯೆ ಇದ್ದಿರಬಹುದು. ಆದರೆ ನಿಮ್ಮ ಮಗು ಚೆನ್ನಾಗಿ ಏಟು ಕೊಟ್ಟಮೇಲೆ ಸುಮ್ಮನಾಗಿ ಏನೂ ಆಗದಂತೆ ಇದ್ದರೆ ಅದು ಏಟಿಗೆ ಹೆದರಿದೆ ಎಂದು ಭಾವಿಸಬೇಡಿ. ನೀವು ಏಟು ಕೊಡಲಿ ಎಂದೇ ಮಕ್ಕಳು ಹಠ ಮಾಡುತ್ತಾರೆ ಎನ್ನುವುದು ನಿಮಗೆ ಗೊತ್ತೆ? ಇದು ಏಕೆ? ಇಲ್ಲಿದೆ ವಿವರ…

ತನ್ನ ಮಗಳ ಬಗ್ಗೆ ತೀವ್ರ ಆತಂಕದಲ್ಲಿದ್ದ ಎರಡು ಮಕ್ಕಳ ತಾಯಿ ಗೀತಾ (ಇದು ಕಾಲ್ಪನಿಕ ಹೆಸರು) ನನ್ನ ಮುಂದೊಂದು ಗಂಭೀರ ಎನ್ನಬಹುದಾದ ಪ್ರಶ್ನೆ ಇಟ್ಟಿದ್ದರು. ಅವರು ಹೇಳಿದ್ದೇನೆಂದರೆ ಅವರ ಮಗಳಿಗೆ 10 ವರ್ಷ, ಮಗನಿಗೆ 3 ವರ್ಷ. ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು. ಮನೆಯಲ್ಲಿ ಹಿರಿಯರು ಯಾರೂ ಇಲ್ಲದ್ದರಿಂದ ಗೀತಾ ಅವರು ಮಗಳನ್ನು ಚಿಕ್ಕಂದಿನಿಂದಲೇ ಬೇಬಿ ಸಿಟ್ಟಿಂಗ್​ನಲ್ಲಿಯೇ ಬಿಟ್ಟಿದ್ದರು. ಶಾಲಾ ಜೀವನ ಪೂರ್ತಿ ಮಗಳು ಅಲ್ಲಿಯೇ ಕಳೆದಳು.

ಇದು ಮಗಳ ಕಥೆಯಾದರೆ, ಮಗನಿಗೆ ಆದದ್ದೇ ಬೇರೆ. ಮಗ ಹುಟ್ಟುವ ವೇಳೆಗೆ ಗೀತಾರ ತಂದೆಗೆ ನಿವೃತ್ತಿಯಾಗಿತ್ತು. ಅವರು ಗೀತಾ ಮನೆ ಹತ್ತಿರವೇ ಮನೆ ಮಾಡಿದರು. ಆದ್ದರಿಂದ ಮಗನನ್ನು ಅಲ್ಲಿಯೇ ಬಿಟ್ಟು ದಂಪತಿ ಆಫೀಸಿಗೆ ಹೋಗುತ್ತಿದ್ದರು. ಅವರ ಮಗಳೀಗ ಐದನೇ ಕ್ಲಾಸ್ ಓದುತ್ತಿದ್ದಾಳೆ. ಶಾಲೆಯಲ್ಲಿ ಒಳ್ಳೆಯ ಹೆಸರು ತೆಗೆದುಕೊಂಡಿದ್ದಾಳೆ.

ಓದುವುದರಲ್ಲಿಯೂ ಮುಂದಿದ್ದಾಳೆ. ಚೆನ್ನಾಗಿ ಮಾರ್ಕ್ಸ್ ತೆಗೆದುಕೊಳ್ಳುತ್ತಿದ್ದಾಳೆ. ತಮ್ಮನನ್ನು ಕಂಡರೆ ತುಂಬಾ ಇಷ್ಟ ಪಡುತ್ತಾಳೆ. ಅವನ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸುತ್ತಾಳೆ. ಆದರೆ ಸಮಸ್ಯೆ ಇರುವುದು ಆಕೆಯ ವಿಪರೀತ ಹಠದ ಕುರಿತಾಗಿ.

‘ಎಲ್ಲಾ ವಿಚಾರಕ್ಕೂ ವಿಪರೀತ ಹಠ ಮಾಡುತ್ತಾಳೆ. ಒಳ್ಳೆಯ ಮಾತಿನಲ್ಲಿ ಹೇಳಿದರೆ ಕೇಳುವುದೇ ಇಲ್ಲ. ಬೆಳಗ್ಗೆ ಹಾಸಿಗೆ ಬಿಟ್ಟು ಏಳುವುದರಿಂದ ಅವಳ ಹಠ ಪ್ರಾರಂಭವಾಗುತ್ತದೆ. ಮೊದಲು ಒಳ್ಳೆಯ ಮಾತಾಡಿ, ನಂತರ ಬಯ್ದು, ನಂತರ ಎರಡೇಟು ಬಿಟ್ಟ ಮೇಲೆಯೇ ಅವಳು ತನ್ನ ಹಠವನ್ನು ಬಿಡುತ್ತಾಳೆ, ನಂತರ ಏನೂ ನಡೆದೇ ಇಲ್ಲವೇನೋ ಎಂಬಂತೆ ದಿನದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾಳೆ. ಏಳಲು, ಊಟ ಮಾಡಲು, ಹೋಂವರ್ಕ್ ಮಾಡಲು ಒಂದೊಂದು ದಿನ ಹಠ ಬಂದುಬಿಡುತ್ತದೆ. ಕೊನೆಯ ಅಸ್ತ್ರವಾದ ಹೊಡೆತ ಬೀಳುವವರೆಗೆ ಅದು ಮುಗಿಯುವುದಿಲ್ಲ.

ನಮಗೂ ಸಾಕಾಗಿದೆ ಮೇಡಂ. ಇಬ್ಬರೂ ಕೆಲಸದಿಂದ ಬಂದು ಸುಸ್ತಾಗಿರುತ್ತೇವೆ. ಹೇಗೋ ಮನೆ ಕೆಲಸ ನಿಭಾಯಿಸಿ ಮುಗಿಸಿದರೆ ಸಾಕಾಗಿರುತ್ತದೆ. ಅಂಥಾ ನಮ್ಮ ದುಗುಡದ ಸಮಯದಲ್ಲೇ ಇವಳ ಹಠ ಪ್ರಾರಂಭವಾಗುತ್ತದೆ. ಇತ್ತ ಎಲ್ಲಾ ತಿಳಿದವಳೂ ಅಲ್ಲ, ಅತ್ತ ತೀರಾ ಮಗುವೂ ಅಲ್ಲದ ಇವಳಿಗೆ ಯಾವ ರೀತಿಯ ತಿಳಿವಳಿಕೆ ಕೊಡಲು ಸಾಧ್ಯ ಹೇಳಿ? ನನ್ನ ತಾಯಿ ತಂದೆಯ ಹತ್ತಿರ, ಅವರ ಶಾಲೆಯ ಮೇಡಂ ಹತ್ತಿರ ಚೆನ್ನಾಗಿ ವರ್ತಿಸುವ ಮಗಳು, ನಮ್ಮನ್ನು ಕಂಡರೆ ಮಾತ್ರ ಹೀಗೆ ಮಾಡುತ್ತಾಳೆ? ಇದೇನಾದರೂ ಮಾನಸಿಕ ರೋಗವೇ?’ ಎನ್ನುವುದು ಆ ತಾಯಿಯ ಪ್ರಶ್ನೆಯಾಗಿತ್ತು.

ನಿಮ್ಮ ಮನೆಯಲ್ಲಿಯೂ ಇಂಥ ಸಮಸ್ಯೆ ಎದುರಾಗಿರಬೇಕಲ್ಲವೆ? ಮೊದಲು ಸಾಮಾನ್ಯ ಸಂಗತಿಯನ್ನು ನೋಡೋಣ. ಮಕ್ಕಳಿಗೆ ಹಠ ಎರಡು ಕಾರಣಕ್ಕೆ ಬರಬಹುದು. ಒಂದು ಆನುವಂಶಿಕವಾಗಿ ಹಿರಿಯರಲ್ಲಿ ಕೋಪ ಮತ್ತು ಹಠದ ಗುಣಗಳಿದ್ದರೆ ಅದು ವಂಶವಾಹಿಯಲ್ಲಿ ಬರಬಹುದು.

ಮತ್ತೊಂದು ಇಂದಿನ ದಿನಗಳಲ್ಲಿ ಮನೋವಿಜ್ಞಾನಿಗಳು ಗಮನಿಸುತ್ತಿರುವ ಅಂಶವೆಂದರೆ ತಪ್ಪಾದ ಪೇರೆಂಟಿಂಗ್ ಸಹ ಮಕ್ಕಳ ಕೆಟ್ಟ ನಡವಳಿಕೆಗೆ ಕಾರಣವಾಗುತ್ತಿದೆ. ಹಿಂದೆ ಐದಾರು ಮಕ್ಕಳನ್ನು ಸಾವಕಾಶವಾಗಿ ಬೆಳೆಸುವ ವಾತಾವರಣ ಎಲ್ಲಾ ಮನೆಯಲ್ಲೂ ಇರುತ್ತಿತ್ತು.

ಈಗ ಕೇವಲ ಎರಡು ಅಥವಾ ಒಂದು ಮಗುವನ್ನು ಬೆಳೆಸುವ ತಂದೆತಾಯಿ ನಾಲ್ಕು, ಐದು ಮಕ್ಕಳಿಗೆ ಮಾಡುವ ಮುತುವರ್ಜಿಯನ್ನು ಮತ್ತು ಕಕ್ಕುಲಾತಿಯನ್ನು ಒಂದು ಮಗುವಿಗೇ ತೋರಿಸಲು ಪ್ರಾರಂಭಿಸುತ್ತಾರೆ. ಮಗು ಅಳಬಾರದು, ಸದಾ ಎತ್ತಿಕೊಂಡಿರು, ಮಗು ಏನು ಕೇಳುತ್ತದೋ ಅದನ್ನು ತಕ್ಷಣ ಕೊಟ್ಟು ಮಗುವಿನ ಅಳುನಿಲ್ಲಿಸು, ಮಗುವಿನ ಅಗತ್ಯಕ್ಕಿಂತ ಹೆಚ್ಚಿನ ಆಟಿಕೆಗಳನ್ನು ಊಟ ಉಪಚಾರಗಳನ್ನು ಸದಾ ಒದಗಿಸುತ್ತಲೇ ಇರುವುದು, ಹೀಗೆ ಮಾಡುವುದರಿಂದ ಮಗುವಿಗೆ ಸಹಜವಾಗಿ ತಾನು ಅತ್ತರೆ ಅಥವಾ ಕಿರುಚಿದರೆ ತಾನು ಕೇಳಿದ್ದು ಸಿಗುತ್ತದೆ ಎನ್ನುವ ಸಂದೇಶ ಸಿಗುತ್ತದೆ. ಅತ್ತು ಹೆದರಿಸಿ ಪಡೆದುಕೊಳ್ಳುವ ಗುಣವನ್ನು ಬೆಳೆಸಿಕೊಳ್ಳುತ್ತದೆ. ಈಗಿನ ಮಕ್ಕಳಂತೂ ಒಂದೇ ವರ್ಷಕ್ಕೆ ಮೊಬೈಲ್ ಅಡಿಕ್ಟ್ ಆಗಿವೆ. ಅದರಲ್ಲೂ ತಾಯಿಯೂ ಉದ್ಯೋಗಸ್ಥೆಯಾದರೆ, ಅಂಥಾ ಮಕ್ಕಳಲ್ಲಿ ಈ ಹಠದಿಂದ ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ.

ಇಂಥ ನಡವಳಿಕೆ ಎರಡನೆಯ ಮಗುವಿನ ಜನನದ ಬಳಿ ಶುರುವಾಗುವುದು ಮಾಮೂಲು. ಗೀತಾರ ಪ್ರಕರಣದಲ್ಲಿ ಇಬ್ಬರಿಗೂ ಏಳು ವರ್ಷಗಳ ಅಂತರವಿದೆ. ಅವಳು ಹುಟ್ಟಿದ ಏಳು ವರ್ಷಗಳು ಮನೆಯಲ್ಲಿ ಅನಭಿಷಿಕ್ತ ರಾಣಿಯಂತೆ ಮೆರೆದವಳು. ನಂತರ ತಮ್ಮನ ಆಗಮನ, ತನ್ನ ತಾಯಿಯ ಮಡಿಲಲ್ಲಿ ಮತ್ತೊಂದು ಜೀವಕ್ಕೆ ಸ್ಥಾನ, ಇವು ಸಹಜವಾಗಿ ಆ 7ವರ್ಷದ ಮಗುವಿಗೆ ಅಘಾತವನ್ನೇ ತಂದುಕೊಟ್ಟಿದೆ. ಇದು ನಿಮಗೂ ಗೊತ್ತಿರಲಿಕ್ಕೆ ಸಾಕು. ಎರಡನೆಯ ಮಗು ಬಂದ ಮೇಲೆ ಅದರತ್ತವೇ ಕಾಳಜಿ ಹೆಚ್ಚಾಗುವುದು ಮಾಮೂಲು.

ಆ ಸಂದರ್ಭದಲ್ಲಿ ದೊಡ್ಡ ಮಗುವಿಗೆ ನೋವು, ಅಸೂಯೆ ಆಗುವುದನ್ನು ನೀವು ಕೇಳಿರಬಹುದು ಅಥವಾ ನಿಮ್ಮ ಮನೆಯಲ್ಲಿಯೂ ಹೀಗೆ ಆಗಬಹುದು. ಆದರೆ ಇಲ್ಲಿ ಅಂಥ ಸಮಸ್ಯೆ ಇಲ್ಲ. ಈ ‘ಅಕ್ಕ’ನಿಗೆ ತಮ್ಮನ ಕಂಡರೆ ವಿಪರೀತ ಪ್ರೀತಿ. ಆದರೆ ಅವಳದ್ದು ಮಾತ್ರ ಹಠದ ಸ್ವಭಾವ. ಇದಕ್ಕೂ ಕಾರಣವಿದೆ. ಅದೇನೆಂದರೆ, ಅವಳ ಹೆಣ್ಣು ಹೃದಯ ತಾಯಿಯ ರೂಪತಾಳಿ ತಮ್ಮನನ್ನು ಒಪ್ಪಿಕೊಂಡಿದೆ. ಆದರೆ ತಮ್ಮನನ್ನು ಈ ಜಗತ್ತಿಗೆ ತಂದ ತಂದೆತಾಯಿಯ ಮೇಲೆ ಸಹಜವಾಗಿ ಕೋಪ ಒಳಗೆ ಶೇಖರಣೆಯಾಗಿದೆ. ಜತೆಗೆ, ಮಗಳು ಬಾಲ್ಯದಲ್ಲಿ ಬೇಬಿಸಿಟ್ಟಿಂಗ್ ವ್ಯವಸ್ಥೆಯಲ್ಲಿ ಬೆಳೆದಳು, ಈಗ ತಮ್ಮನ ಅದೃಷ್ಟ ಅವನಿಗೆ ಅಜ್ಜಿತಾತ ಸಿಕ್ಕಿದ್ದಾರೆ.

ಈ ವ್ಯತ್ಯಾಸವನ್ನೂ ಆ ಪುಟ್ಟ ಮಗುವಿನ ಸುಪ್ತಮನಸ್ಸು ಗ್ರಹಿಸಿದೆ. ಇದಕ್ಕೂ ಕಾರಣ ಕೂಡ ಅಪ್ಪ-ಅಮ್ಮನೇ ಎಂದು ಕೋಪ ದ್ವಿಗುಣವಾಗಿದೆ. ಇವಕ್ಕೆಲ್ಲಾ ಕಾರ್ಯಕಾರಣ ಸಂಬಂಧವನ್ನು ಕಲ್ಪಿಸಲು ಮಕ್ಕಳಿಗೆ ಗೊತ್ತಾಗುವುದಿಲ್ಲ. ಇದು ಅಪ್ಪ-ಅಮ್ಮನ ಮೇಲೆ ಮಗು ಕೋಪಗೊಳ್ಳುವುದು, ಹಠಮಾರಿಯಾಗುವುದು ಸಹಜ. ಇದನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಬರೆಯುವೆ.

ಹೊಡೆದರೆ ಸುಮ್ಮನಾಗುವುದೇಕೆ?

ಈ ಪ್ರಕರಣದಲ್ಲಿ ಒಂದು ಸೂಕ್ಷ್ಮತೆಯನ್ನು ನೀವು ಗ್ರಹಿಸಿದ್ದೀರಾ? ಅದೇನೆಂದರೆ, ‘ನನ್ನ ಮಗಳಿಗೆ ಎರಡೇಟು ಬಿಟ್ಟ ಮೇಲೆಯೇ ಅವಳು ತನ್ನ ಹಠವನ್ನು ಬಿಟ್ಟು ಏನೂ ನಡೆದೇ ಇಲ್ಲವೇನೋ ಎಂಬಂತೆ ದಿನದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾಳೆ’ ಎಂದಿದ್ದಾರೆ ಗೀತಾ.

ಅಂದರೆ ಹೊಡೆತ ಬೀಳುವವರೆಗೂ ಆಕೆ ಹಠ ಮಾಡುತ್ತಾಳೆ. ಹೊಡೆತ ಬಿದ್ದ ಮೇಲೆ ಸುಮ್ಮನಾಗುತ್ತಾಳೆ. ಏಕೆ ಹೀಗೆ? ಹೊಡೆತದ ನೋವು ತಡೆದುಕೊಂಡು ಸುಮ್ಮನಾಗುತ್ತಾಳೆ ಎಂದುಕೊಂಡರೆ ಅದು ತಪು್ಪ. ಹಿಂದೆ ನೀವು ಮಕ್ಕಳಾಗಿದ್ದರೂ ಇಂದಿನ ಮಕ್ಕಳ ಮನಸ್ಸು ಅರಿಯುವುದು ಅಷ್ಟು ಸುಲಭವಲ್ಲ. ಉಳಿದವರ ಬಳಿ ಚೆನ್ನಾಗಿ ಇರುವವಳು ಅಪ್ಪ-ಅಮ್ಮನನ್ನು ಕಂಡರೆ ಮಾತ್ರ ಏಕೆ ಹೀಗೆ ಎಂದ ತಕ್ಷಣ ಗೀತಾ ಅವರು ಅಂದುಕೊಂಡಂತೆ ಮಗಳಿಗೆ ಏನೋ ಮಾನಸಿಕ ಸಮಸ್ಯೆ ಇರಬಹುದು ಎನ್ನಿಸಿಬಿಡುತ್ತದೆ. ಆದರೆ ಅದು ಕೂಡ ಸ್ವಲ್ಪವೂ ಸರಿಯಲ್ಲ.

ಮಕ್ಕಳು ಹೊಡೆತ ತಿಂದ ಮೇಲೆ ಸುಮ್ಮನಾಗುವುದು ಮಕ್ಕಳು ಅಪ್ಪ-ಅಮ್ಮನಿಗೆ ನೀಡುವ ಸಂದೇಶ. ಆದರೆ ಈ ಸಂದೇಶ ಪಾಲಕರಿಗೆ ಅರ್ಥವಾಗುವುದೇ ಇಲ್ಲ. ಅದೇನೆಂದರೆ ಮಕ್ಕಳಿಗೆ ಅಪ್ಪ-ಅಮ್ಮನ ಸ್ಪರ್ಶ ಬೇಕಾಗುತ್ತದೆ. ಬೆಳಗ್ಗೆ ಮನೆ ಬಿಡುವ ಪಾಲಕರು, ಸಂಜೆ ಸುಸ್ತಾಗಿ ಮನೆಗೆ ಬರುತ್ತಾರೆ. ಬರುವಾಗ ಒಂದಿಷ್ಟು ತಿನಿಸು ತಂದೋ ಇಲ್ಲವೇ ಮಕ್ಕಳ ಕೈಯಲ್ಲಿ ದುಡ್ಡು ಕೊಟ್ಟು ಏನು ಬೇಕಾದರೂ ಅಂಗಡಿಗೆ ಹೋಗಿ ತೆಗೆದುಕೊಂಡು ಬಾ ಎಂದೋ ಹೇಳುತ್ತಾರೆ. ಇಲ್ಲವೇ ಅವರಿಗೆ ಬೇಕಾದ ವಸ್ತುಗಳನ್ನೆಲ್ಲಾ ಹಿಂದೆ-ಮುಂದೆ ನೋಡದೇ ಕೊಡಿಸುತ್ತಾರೆ. ಆದರೆ ನಿಮ್ಮ ಮಕ್ಕಳು ವಿಪರೀತ ಹಠಮಾರಿಯಾಗಿದ್ದರೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ.

ಇಲ್ಲಿ ಹೇಳಿರುವಷ್ಟನ್ನು ಬಿಟ್ಟು, ನೀವು ಎಂದಾದರೂ ಮಕ್ಕಳನ್ನು ಹತ್ತಿರ ಕೂಡಿಸಿಕೊಂಡು ತಲೆಸವರುವ, ಬೆನ್ನು ಸವರುವ, ಅಪ್ಪಿಕೊಳ್ಳುವ, ಚಟುವಟಿಕೆಗಳ ಮೂಲಕ ನಿನ್ನೊಂದಿಗೆ ಸದಾ ನಾನಿದ್ದೇನೆ ಎಂದು ಮಕ್ಕಳಲ್ಲಿ ಅವ್ಯಕ್ತ ಭಾವನೆ ಮೂಡಿಸುವ ಕೆಲಸ ಮಾಡಿದ್ದೀರಾ? ಅವರು ಏನಾದರೂ ತಮ್ಮ ಶಾಲೆಯ ಬಗ್ಗೆಯೋ, ಇಲ್ಲವೇ ಇನ್ನೇನೋ ವಿಷಯವನ್ನು ಹೇಳುವ ಉತ್ಸುಕತೆ ತೋರಿದ್ದಾಗ ಅದನ್ನು ಸಮಾಧಾನಚಿತ್ತದಿಂದ ಆಲಿಸಿದ್ದೀರಾ? ಅವರು ಮಾಡಿದ ಕೆಲಸಕ್ಕೆ ಹತ್ತಿರ ಕೂರಿಸಿಕೊಂಡು ಅಪ್ಪಿ ಮುದ್ದಾಡಿ ಶಹಭಾಸ್​ಗಿರಿ ಕೊಟ್ಟಿದ್ದೀರಾ? ಮಗುವಿಗೆ ನೀವು ರ್ಸ³ಸುವುದು ಏಟು ಕೊಡುವಾಗ ಮಾತ್ರ ತಾನೆ? ಅದೇ ಆಗಲಿ ಬಿಡು, ಅಮ್ಮ-ಅಪ್ಪ ಏಟು ನೀಡುವ ಮೂಲಕವಾದರೂ ನನ್ನನ್ನು ರ್ಸ³ಸುತ್ತಾರೆ, ಸ್ಪರ್ಶದ ಸುಖ ನನಗೆ ಸಿಗುತ್ತದೆ ಎಂದು ಆ ಎಳೆಯ ಮಗುವಿನ ಸುಪ್ತ ಮನಸ್ಸು ಅಂದುಕೊಳ್ಳುತ್ತದೆ. ಅದಕ್ಕಾಗಿಯೇ ಹೊಡೆಯಲಿ ಎಂದೇ ಮಕ್ಕಳು ಹಠ ಮಾಡುತ್ತಾರೆ. ಹೊಡೆತದ ಸ್ಪರ್ಶ ಸಿಕ್ಕಾಗ ಸರಿಯಾಗುತ್ತಾರೆ. ಇದು ನಿಜಕ್ಕೂ ದುರಂತ!

ಪಾಲಕರು ಏನು ಮಾಡಬೇಕು?

ಗೀತಾರಿಗೆ ಹೇಳಿದ ಮಾತನ್ನೇ ನಾನು ಎಲ್ಲಾ ಪಾಲಕರಿಗೂ ಹೇಳುತ್ತಿದ್ದೇನೆ. ನೀವೀಗ ಮಾಡಬೇಕಾಗಿರುವುದು ಇದನ್ನೇ . ಪ್ರತಿದಿನ ಮಗನೋ, ಮಗಳೋ ಅವರನ್ನು ಪಕ್ಕದಲ್ಲಿ ಕೂಡಿಸಿಕೊಳ್ಳಿ. ಬೆನ್ನು ತಲೆ ಸವರಿ. ಸಾಧ್ಯವಾದರೆ ಒಂದೆರಡು ಮಾತುಗಳಿಂದ ಅವಳನ್ನು ಹೊಗಳಿ ಸಾಧ್ಯವಾದಷ್ಟೂ ಅನ್​ಕಂಡೀಷನಲ್ ಲವ್ ಕೊಡಲು ಪ್ರಯತ್ನಿಸಿ (ಅಂದರೆ ನೀನು ಚೆನ್ನಾಗಿ ಓದಿ ಅಂಕಗಳಿಸಿದರೆ ಇಂಥ ವಸ್ತುವನ್ನು ತಂದುಕೊಡುತ್ತೇನೆ, ನೀನು ಇಂಥ ಕೆಲಸ ಮಾಡಿದರೆ ಇಂಥಾದನ್ನು ಕೊಡುತ್ತೇನೆ ಎನ್ನುವುದು ಕಂಡೀಷನಲ್ ಲವ್. ಇಂಥ ಯಾವ ಷರತ್ತನ್ನೂ ಹಾಕದಿರುವುದು ಅನ್​ಕಂಡೀಷನಲ್ ಲವ್) ನೀನು ನನ್ನ ಮುದ್ದಿನ ಮಗ/ಮಗಳು. ನೀನು ಜಾಣಮರಿ. ನೀನು ತಪ್ಪು ಮಾಡುವುದಿಲ್ಲವೆನ್ನುವ ಭರವಸೆ ನನಗಿದೆ, ನೀನು ಮಾಡುವ ಕೆಲಸಗಳು ಚೆನ್ನ, ನೀನು ಹೇಗಿದ್ದರೂ ನನಗೆ ಇಷ್ಟ ಇಂಥ ಮಾತುಗಳನ್ನು ಹೆತ್ತವರು ಆಡುತ್ತಿದ್ದರೆ ಮಕ್ಕಳಿಗೆ ಸಹಜವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಅವರು ತಮ್ಮ ಜಾಣತನಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ನೀವೂ ಖಂಡಿತಾ ಪ್ರಯತ್ನಿಸಿ, ಬದಲಾವಣೆ ಕಾಣಿ.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...