22.8 C
Bengaluru
Saturday, January 18, 2020

ಉದಾರೀಕರಣಕ್ಕೆ ಧಿಕ್ಕಾರ 27 ಕೋಟಿ ಮನೆಗಳ ಕೂಗು

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಸಮಾಜದಲ್ಲಿ ಅಸಮಾನತೆ ಅನಾದಿಕಾಲದಿಂದ ಇದೆ. ದೇಶದೇಶಗಳ ನಡುವೆ ಅಸಮಾನತೆ ಇರುವುದು ಸಹಜ. ದೇಶದೊಳಗೇ ಅಸಮಾನತೆ ಇದ್ದರೆ ಅದು ಓಕೆ. ಆದರೆ ಅರ್ಥವ್ಯವಸ್ಥೆಯಲ್ಲೇ ಉಳ್ಳವರಿಗೊಂದು, ಇಲ್ಲದವರಿಗೆ ಇನ್ನೊಂದು ಕಂಡುಬಂದರೆ ನಾಟ್ ಓಕೆ.

ಅರ್ಥವ್ಯವಸ್ಥೆಯಲ್ಲೂ ಎಪಿಎಲ್ ಉಂಟು; ಬಿಪಿಎಲ್ ಅರ್ಥವ್ಯವಸ್ಥೆ ಉಂಟು. ಈ ಎಪಿಎಲ್ ಸಿಟಿಯಲ್ಲಿದೆ. ಹಳ್ಳಿಯಲ್ಲಿರುವುದು ಇನ್ನೊಂದು. ಒಂದಕ್ಕೊಂದು ಸಂಬಂಧ ಇಲ್ಲ. ಅದು ವಿಪರ್ಯಾಸ, ಅಪಾಯಕಾರಿ. ಏಕೆಂದರೆ ಅರ್ಥವ್ಯವಸ್ಥೆಯ ಫಲ ಇಬ್ಬರಿಗೆ, ಅರ್ಥವ್ಯವಸ್ಥೆ ಇದ್ದರೂ ಸತ್ತಂತೆ ಎಂಬುದು ಬಿಪಿಎಲ್ ಅರ್ಥವ್ಯವಸ್ಥೆಯಲ್ಲಿ ಇದ್ದವರಿಗೆ ಆಗಿದೆ. ದೇಶಕ್ಕೆ ಭಾಗ್ಯ ಬಂದರೂ, ನಮಗೇನು ಬಂತು ಭಾಗ್ಯ ಎಂದು ನಮ್ಮ ಹಳ್ಳಿಗರು ಭಾವಿಸಿದರೆ ಅದು ನಿಜಸ್ಥಿತಿ. 6.6 ಲಕ್ಷ ಹಳ್ಳಿಗಳ, 89 ನಗರ ವಾರ್ಡ್​ಗಳ 27 ಕೋಟಿ ಕುಟುಂಬಗಳಿಗೆ ಉದಾರೀಕರಣ ಯುಗ ಒಂದು ಮರೀಚಿಕೆ ಆಗಿದೆ. ಉದಾರೀಕರಣ ಇಲ್ಲಿಗೆ ಬಂದೇ ಇಲ್ಲ. ಈ 27 ಕೋಟಿ ಕುಟುಂಬಗಳು ಭಾರತದಲ್ಲಿ ಕೂಗುತ್ತಿವೆ- ಉದಾರೀಕರಣಕ್ಕೆ ಧಿಕ್ಕಾರ ಎಂದು. ಅವರು ಕೂಗಲಿ.

ಪರಿಸ್ಥಿತಿ ಏನು: ಯಾರೇ ಕೂಗಾಡಲಿ, ಊರೇ ಹೋರಾಡಲಿ… ಎಂದು ಎಮ್ಮೆ ಹಾಡಿನಂತೆ ನಮ್ಮ ದೇಶವು ಉದಾರೀಕರಣ ಯುಗದಲ್ಲಿ ಸಾಗಿದೆ. ಈ ಎಮ್ಮೆ ಹಸುವಿನ ಲೋಕವೇ ಹೀಗೆ ಉದಾರೀಕರಣದ ದೌರ್ಜನ್ಯಕ್ಕೆ ಬಲಿಪಶು ಆಗಿರುವುದು ಎಂದರೆ ವಿಚಿತ್ರ-ವಿಪರ್ಯಾಸ ಹಾಗೆಯೇ ಅದು ಸತ್ಯ. ಏಕೆಂದರೆ ನಮ್ಮ ದನಕರು ಎಮ್ಮೆಗಳ ಸಂಖ್ಯೆ 1992ರ ಪಶುಗಣತಿ ಪ್ರಕಾರ 28.8 ಕೋಟಿ ಇತ್ತು; 2014ರ ಜನಗಣತಿ ಪ್ರಕಾರ ಇನ್ನೂ 30.27 ಕೋಟಿಯಲ್ಲೇ ಇದೆ. ಅಂದರೆ ಇಲ್ಲಿ ಉದಾರೀಕರಣ ಯುಗ ಕಾಲಿಟ್ಟೇ ಇಲ್ಲ! ಪಶುಪಾಲನೆಯೇ ಒಟ್ಟಾರೆಯಾಗಿ ದೇಶದಲ್ಲಿ ಆರ್ಥಿಕ ಉದಾರೀಕರಣದ ದೌರ್ಜನ್ಯಕ್ಕೆ ಬಲಿಯಾಗಿದೆ. ಅದರಲ್ಲೂ ಹಣಕಾಸು ವಿಚಾರದಲ್ಲಿ ಬ್ಯಾಂಕುಗಳು ಅತ್ಯಂತ ಅಸಡ್ಡೆ ತೋರಿಸಿರುವುದು ಈ ಪಶುಪಾಲನೆಗೇ. ಬ್ಯಾಂಕುಗಳ ಪಾಲಿಗೆ ಇದು ಬಿಪಿಎಲ್ ಲೋಕ. ಬೇಡದ ಬಾಬ್ತು. ವಾಸ್ತವದಲ್ಲಿ ಈ ಪಶುಪಾಲನೆಯೇ ನಮ್ಮ ಗ್ರಾಮೀಣ ಲೋಕದ ಜೀವನಾಡಿ. ಈ ಲೆಕ್ಕ ನೋಡಿ:

ನಮಗೆ ಸ್ವಾತಂತ್ರ್ಯ ಬಂದು ಇನ್ನೆರಡು ವರ್ಷವಾದರೆ 75 ತುಂಬುತ್ತದೆ. ಕೃಷಿ ಲೋಕದ ವಿಚಾರದಲ್ಲಿ ಇದು 75 ವರ್ಷಗಳ ಕರಾಳ ಅಧ್ಯಾಯ. ನನಗೆಲ್ಲೋ ತಲೆ ಕೆಟ್ಟಿರಬೇಕು ಎಂದು ನಿಮಗನಿಸುತ್ತಿರಬಹುದು. ನಿಜ, ವಾಸ್ತವ ಸ್ಥಿತಿ ನೋಡಿ ನಿಜಕ್ಕೂ ತಲೆ ಕೆಟ್ಟಿದೆ. ನಮ್ಮ ದೇಶದ ಒಟ್ಟು ಉತ್ಪಾದನೆ – ವಹಿವಾಟಿನ ಮೊತ್ತಕ್ಕೆ ಜಿಡಿಪಿ ಎನ್ನುತ್ತಾರೆ. ಈ ಜಿಡಿಪಿಯಲ್ಲಿ ಕೃಷಿ ಮತ್ತು ಸಂಬಂಧಿ ವಲಯ ಅಂದರೆ ಪಶುಪಾಲನೆ – ಮೀನುಗಾರಿಕೆ- ಅರಣ್ಯದ ಪಾಲು 1950ರಲ್ಲಿ ಶೇಕಡ 52 ಇತ್ತು. ಇದು 1990ಕ್ಕೆ ಶೇಕಡ 30ಕ್ಕೆ ಇಳಿದಿತ್ತು; 2010ಕ್ಕೆ ಶೇಕಡ 20ಕ್ಕೂ ಕೆಳಕ್ಕೆ ಬಂದಿತ್ತು. ಈಗ 2018ರಲ್ಲಿ ಜಿಡಿಪಿಯ ಮಾರ್ಪಾಡು ಜಿಎವಿ ಲೆಕ್ಕದಲ್ಲಿ ಶೇಕಡ 14.4ಕ್ಕೆ ಕುಸಿದಿದೆ. ಅಂದರೆ ಕೃಷಿ ಪತನವೇ ನಮ್ಮ 75 ವರ್ಷಗಳ ಸಾಧನೆ!

ಕೃಷಿ ಪ್ಲಸ್ ಜಿಡಿಪಿ ಹೀಗೆ ಕುಸಿದರೆ ಹಳ್ಳಿಗಾಡಿನಲ್ಲಿ ಬದುಕಿನಲ್ಲಿ ಹೆಣಗಾಟವು ಹೆಪ್ಪುಗಟ್ಟುವುದು, ಬದುಕು ದುರ್ಬರವಾಗುವುದು ಸಹಜ ತಾನೆ? ಕೇವಲ ಅಷ್ಟೇ ಅಲ್ಲ ಅದು. ನಮ್ಮ ದೇಶದ ಉದ್ಯೋಗದಲ್ಲಿ ಮೆಜಾರಿಟಿ ಇರುವುದು ಹಳ್ಳಿಗಾಡಿನ ಕೃಷಿ ಪಶುಪಾಲನೆಯಲ್ಲೇ. ದೇಶದ ಉದ್ಯೋಗದಲ್ಲಿ ಶೇಕಡ 55 ಪಾಲು ಹಳ್ಳಿಗಾಡಿನದು. ಅಂದರೆ ಪಶುಪಾಲನೆ ಮತ್ತು ಕೃಷಿ ಕ್ಷೇತ್ರದ್ದು ಎಂದು 2011ರ ಜನಗಣತಿ ಹೇಳಿದೆ. ಕಾರ್ವಿುಕರ ಬ್ಯೂರೊ ವರದಿಯು ಇದು ಶೇಕಡ 46 ಎಂದು 2015-16ರಲ್ಲಿ ಹೇಳಿದೆ.

ಇದು ಶೇಕಡ 44 ಎಂದು ಅಂತರರಾಷ್ಟ್ರೀಯ ಕಾರ್ವಿುಕ ಸಂಸ್ಥೆ ಐಎಲ್​ಓ ಹೇಳಿದೆ. ಇಷ್ಟು ಉದ್ಯೋಗ ಇಲ್ಲಿರುವಾಗ, ಈ ಕೃಷಿ ಪಶುಪಾಲನೆ ಕ್ಷೇತ್ರ ನಿಸ್ಸೀಮ ನಿರ್ಲಕ್ಷ್ಯ್ಕೆ 70 ವರ್ಷಗಳಿಂದ ತುತ್ತಾಗಿದೆ. ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ನಿರುದ್ಯೋಗ ಹೆಚ್ಚಳಕ್ಕೂ, ನಿಜವಾದ ಉದ್ಯೋಗ ಪರಿಸ್ಥಿತಿಗೂ ಒಂದಕ್ಕೊಂದು ತಾಳೆ ಇಲ್ಲ, ಸಂಬಂಧ ಇಲ್ಲ. 27 ಕೋಟಿ ಕುಟುಂಬಗಳ ಆರ್ತನಾದ, ಅವುಗಳ ಉದಾರೀಕರಣಕ್ಕೆ ಧಿಕ್ಕಾರ ಎಂಬ ಕೂಗು ಯಾರಿಗೂ ಕೇಳುತ್ತಿಲ್ಲ.

ಕೃಷಿಯೇ ತಾತ್ಸಾರಕ್ಕೆ ಒಳಗಾಗಿದ್ದರಿಂದಲೇ ಉದಾರೀಕರಣ ಯುಗದಲ್ಲಿ ಜಿಡಿಪಿ ಪಾಲು ಈ ಕೃಷಿಯಲ್ಲಿ ಅರ್ಧಕ್ಕರ್ಧ ಆಗಿ ಶೇಕಡ 14.4ಕ್ಕೆ ಕುಸಿದಿರುವುದು. ಈ ಕೃಷಿಯಲ್ಲೇ ಮತ್ತೆ ಅಸಮಾನತೆ ಅಗಾಧವಾಗಿದೆ! ಎಪಿಎಲ್ ಕೃಷಿ ಇದೆ, ಬಿಪಿಎಲ್ ಕೃಷಿ ಇದೆ. ನಿಮಗೆ ಅಚ್ಚರಿ ಆಗಬಹುದು, ಇದೇನು, ಈ ಎಪಿಎಲ್ ಕೃಷಿ, ಬಿಪಿಎಲ್ ಕೃಷಿ ಎಂಬುದನ್ನು ನಾವು ಕೇಳೇ ಇಲ್ಲವಲ್ಲ ಎಂದು. ಅದು ನಿಜ, ಸಹಜ.

ಎಪಿಎಲ್ ಕೃಷಿ ಅಂದರೆ ನೀರಾವರಿ ಪ್ರದೇಶದ ಕೃಷಿ. ಆತ್ಮಹತ್ಯೆ ಇಲ್ಲದ ಕೃಷಿ ಲೋಕ ಇದು. ಇನ್ನೊಂದು, ಅದೇ ಬಿಪಿಎಲ್ ಕೃಷಿ ಎಂದರೆ ಮಳೆ ಆಶ್ರಿತ ಬೇಸಾಯದ ಕೃಷಿ. ಇಲ್ಲಿದೆ ರೈತರ ಆತ್ಮಹತ್ಯೆ. ಇಲ್ಲಿದೆ ವಿಧಿಯ ಪ್ರಕೃತಿ ವೈಪರೀತ್ಯದ ಚೆಲ್ಲಾಟ. ಇಲ್ಲಿದೆ ಯಾವಾಗಲೂ ಅಲ್ಲೋಲ ಕಲ್ಲೋಲ- ತಳಮಳ. ಆದರೆ ಈ ಮಳೆ ಆಶ್ರಿತ ಬೇಸಾಯ ಮಾಡುವ ಕೃಷಿಕರೇ ನಮಗೆ ಅನ್ನ ನೀರು, ರೊಟ್ಟಿ, ಎಣ್ಣೆ, ಖಾರ ಎಲ್ಲ ಪದಾರ್ಥಗಳನ್ನು ನೀಡುವವರು ಎಂಬುದು ನಮಗೆ ಗೊತ್ತಿಲ್ಲ.

ಈ ಬಿಪಿಎಲ್ ಕೃಷಿಕರ ಬೃಹತ್ ಪರಾಕ್ರಮದ ಪರಿಚಯ ಹೀಗಿದೆ: ನಮ್ಮ ದೇಶದಲ್ಲಿ ಬಿಪಿಎಲ್ ಕೃಷಿ ಇರುವುದು ಶೇಕಡ 60ರಷ್ಟಿರುವ ಕೃಷಿ ಭೂಮಿ, ಮಳೆ ಆಶ್ರಿತ ಕೃಷಿ ಭೂಮಿಯಲ್ಲಿ. ದೇಶದ ಶೇಕಡ 40ರಷ್ಟು ಜನಸಂಖ್ಯೆ ಇಲ್ಲಿದೆ. ಇವರೇ ಬಹುಪಾಲು ಆಹಾರಧಾನ್ಯ ನೀಡುವವರು. ಇನ್ನು ನಮ್ಮ ದೇಶದ ಒಟ್ಟು ಧಾನ್ಯಗಳಲ್ಲಿ ಶೇಕಡ 84-87 ಪಾಲು ಇವರದ್ದು; ದೇಶದ ಎಣ್ಣೆಕಾಳು ಉತ್ಪಾದನೆ ಈ ಬಿಪಿಎಲ್ ಕೃಷಿಕರದ್ದೇ. ಶೇಕಡ 60ರಷ್ಟು ಹತ್ತಿ ಉತ್ಪಾದನೆ ಇವರದ್ದು. ಶೇಕಡ 50ರಷ್ಟು ಉತ್ತಮ ಧಾನ್ಯ ನೀಡುವವರೂ ಇವರೇ. ಈ ಬಿಪಿಎಲ್ ಕೃಷಿಕರಲ್ಲಿ ಸಣ್ಣ, ಅತಿ ಸಣ್ಣ ರೈತರೇ ಅಧಿಕ – ಅತ್ಯಧಿಕ ಇರುವುದು. 2016-17ರಲ್ಲಿ ಕೂಡ ಈ ವರ್ಗದ ರೈತರ ಪೈಕಿ ಶೇಕಡ 41 ಮಂದಿ ಬ್ಯಾಂಕ್ ಕದ ತಟ್ಟಿಲ್ಲ. ಏಕೆಂದರೆ ಅವರಿಗೆ ಅಲ್ಲಿ ಹಣ ಗಿಟ್ಟಲ್ಲ!

ದುರಂತ ಅಂದರೆ ಬಿಪಿಎಲ್ ಕೃಷಿಕರ ನಡುವೆಯೇ ಅಸಮಾನತೆ ಬಂದುಬಿಟ್ಟಿದೆ! ಕೃಷಿಯಲ್ಲೇ ಹಲವು ವಿಭಾಗಗಳಿವೆ. ಬ್ಯಾಂಕಿನ ಒಟ್ಟು ಸಾಲದಲ್ಲಿ ಕೃಷಿಗೆ ಸಿಕ್ಕುವುದು ಶೇಕಡ 16 ಭಾಗ ಮಾತ್ರ. ಇದರಲ್ಲಿ ಬಹುಪಾಲು ಸಾಲವು ಎಪಿಎಲ್ ಕೃಷಿಗೆ ಹೋಗಿಬಿಡುತ್ತದೆ. ಹೀಗಾಗಿ ಬಿಪಿಎಲ್ ಕೃಷಿ ಮಾತ್ರವಲ್ಲ, ಪಶುಪಾಲನೆಯೂ ಹಣಕಾಸು ವಿಚಾರದಲ್ಲಿ ನಿರ್ಲಕ್ಷ್ಯ ನಿಸ್ಸೀಮ ನಿರ್ಲಕ್ಷ್ಯ್ಕೆ ತುತ್ತಾಗಿದೆ. ಇದಕ್ಕೂ ಲೆಕ್ಕಾಚಾರ ನೋಡಿ.

ಕೃಷಿ ಉತ್ಪಾದನೆ ಪಾಲು ಕೃಷಿ ವಲಯದಲ್ಲಿ ಶೇಕಡ 60 ಇದೆ. ಆದರೆ ಕೃಷಿ ವಲಯಕ್ಕೆ ನೀಡುವ ಸಾಲದಲ್ಲಿ ಅದರ ಪಾಲು ಶೇಕಡ 90 ಇದೆ. ಕೃಷಿ ಹಾಗೂ ತತ್ಸಂಬಂಧಿ ಕ್ಷೇತ್ರದಲ್ಲಿ ಪಶುಪಾಲನೆಯ ಪಾಲು ಶೇಕಡ 40 ಇದೆ. ಆದರೆ ಪಶುಪಾಲನೆಗೆ ಸಿಗುವ ಬ್ಯಾಂಕ್ ಸಾಲ ಕೇವಲ ಶೇಕಡ 6-7 ಮಾತ್ರ ಇದೆ ಎಂದು ರಿಸರ್ವ್ ಬ್ಯಾಂಕ್ ಗಾಬರಿ ವ್ಯಕ್ತಪಡಿಸಿದೆ. ಇದು ಕೂಡಲೇ ಗಮನಿಸತಕ್ಕದ್ದು. ಏಕೆಂದರೆ ಈ ಲೆಕ್ಕ ನೋಡಿ: ಸುಧಾರಿತ ಜಿಡಿಪಿ ಆದ ಜಿಎವಿ ಲೆಕ್ಕದಲ್ಲಿ 2013-14ರಲ್ಲಿ ಕೃಷಿ ಹಾಗೂ ಸಂಬಂಧಿ ವಲಯದ ಪಾಲು ಶೇಕಡ 15.17 ಇದೆ. ಇದರಲ್ಲಿ ಬೆಳೆ ಪಾಲು ಶೇಕಡ 9.72. ಈ ಭಾಗಕ್ಕೇ ಬ್ಯಾಂಕ್ ಸಾಲ ಶೇಕಡ 90ರಷ್ಟು ಕೃಷಿ ಲೆಕ್ಕದಲ್ಲಿ ಸಂದಾಯವಾಗುತ್ತದೆ.

ಬೆಳೆ ಪಾಲು ಶೇಕಡ 9.72 ಇದ್ದರೆ ಪಶುಪಾಲನೆ ಪಾಲು ಶೇಕಡ 3.43 ಇದೆ. ಅಂದರೆ ಮೂರನೇ ಒಂದು ಭಾಗ ಇಲ್ಲಿ ಉತ್ಪಾದನೆ ಆಗುತ್ತದೆ. ಸಂಪಾದನೆ ಇಲ್ಲಿ ಶೇಕಡ 40 ಇದ್ದರೂ ಕೃಷಿ ವಲಯದ ಒಟ್ಟು ಸಾಲದಲ್ಲಿ ಇಲ್ಲಿಗೆ ಬರುವುದು ಶೇಕಡ 6-7 ಮಾತ್ರ. ಇದಕ್ಕಾಗಿ ಬ್ಯಾಂಕ್​ಗಳಿಗೆ ಭಾರತ ಸರ್ಕಾರವು ಸರಿಯಾದ ನಿರ್ದೇಶನ ನೀಡಬೇಕೆಂದು ರಿಸರ್ವ್ ಬ್ಯಾಂಕ್ ಸಲಹೆ ಮಾಡಿದೆ. ಬ್ಯಾಂಕುಗಳು, ಭೂಮಿ ನೋಡಿ ಕೃಷಿ ಸಾಲ ನೀಡುತ್ತವೆ. ಪಶುಪಾಲನೆಗೆ ಭೂಮಿ ದಾಖಲೆ ಕೇಳಲೇಬಾರದು; ರ್ವಂಗ್ ಕ್ಯಾಪಿಟಲ್ ಅಂದರೆ ನಿತ್ಯ ಕಾರ್ಯಕ್ಕೆ ಹಾಗೂ ಸಾವಧಿ ಸಾಲಕ್ಕೆ ಪಶುಪಾಲನೆ ವಲಯಕ್ಕೆ ಆದ್ಯತೆ ವಲಯ ಸಾಲದಲ್ಲಿ ಸಣ್ಣ ಅತಿ ಸಣ್ಣ ರೈತರನ್ನು ಗುರುತಿಸುವಾಗ ಬೇರೆಯೇ ಮಾನದಂಡವನ್ನು ಗುರುತಿಸಬೇಕು ಎಂದು ರಿಸರ್ವ್ ಬ್ಯಾಂಕ್ ಸೂಚಿಸಿದೆ.

ಇನ್ನು 2019ರ ಪಶುಸಂತತಿ ಗಣತಿ ಅಗಾಧವಾಗಿ ಇರುವ ಪಶುಪಾಲನೆ ಸಮಸ್ಯೆಗಳ ಬಗ್ಗೆ ಬಹಳ ಮಾಹಿತಿ ನೀಡುತ್ತದೆ. ಈ ಸೆನ್ಸೆಸ್ ಆಧಾರವಾಗಿಟ್ಟುಕೊಂಡು ಪಶುಪಾಲನೆಗೆ ಹೊಸ ನೀತಿಯನ್ನು ರೂಪಿಸುವ ಅಗತ್ಯ ಮತ್ತು ಅನಿವಾರ್ಯತೆ ಈಗಿದೆ. ನೀರಾವರಿ ಕೃಷಿಯು ಮಳೆ ಆಶ್ರಿತ ಬಿಪಿಎಲ್ ಕೃಷಿಯನ್ನು ಹೇಗೆ ಕಷ್ಟಕ್ಕೆ ತಳ್ಳಿದೆಯೋ ಹಾಗೆಯೇ ಕಂಪನಿ ಪಶುಪಾಲನೆಯೂ ಈಗ ಸಾಗುತ್ತಿರುವಂತಿದೆ. ನಮ್ಮ ದೇಶದ ಪಶುಪಾಲನೆ ಯು ಹಳ್ಳಿಯ ಬದುಕು ಆಗಿದೆ; ಕಂಪನಿ ಪಶುಪಾಲನೆ ಬೆಳೆಸಿ ಈಗ ಗ್ರಾಮೀಣ ಕಸುಬು ಹಾಗೂ ಆದಾಯ ಮೂಲವನ್ನು ಹಾಳುಗೆಡವಬಾರದು, ಜೋಕೆ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...