28.5 C
Bengaluru
Monday, January 20, 2020

ನೀವು ಭಾಷಣ ಮಾಡಬೇಕಾದಾಗ… ಇವೆಲ್ಲ ನೆನಪಿರಲಿ

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಭಾಷಣಗಳೇ? ಅಯ್ಯೋ ಬೇಡಪ್ಪಾ, ಬೋರ್ ಮಾಡಿಬಿಡ್ತಾರೆ ಎಂಬ ಉದ್ಗಾರಗಳು ಸರ್ವೆ ಸಾಮಾನ್ಯ. ಭಾರೀ ಭಯಂಕರ ಭಾಷಣಗಳು ಸಭಿಕರಿಗೆ ಭಾರೀ ತಲೆ ನೋವನ್ನೇ ತರುತ್ತವೆ. ಭಾರೀ ಭಯಂಕರ ಭಾಷಣಗಳೇಂದರೆ, ತನಗೂ, ಸಭಿಕರಿಗೂ ತಿಳಿಯದ ವಿಷಯಗಳನ್ನು ಯಾರಿಗೂ ಅರ್ಥವಾಗದ ರೀತಿಯಲ್ಲಿ ಹೇಳಿ, ಎಲ್ಲರನ್ನೂ totally confuse ಮಾಡುವ ಭಾಷಣ. If you cannot convince people, confuse them ಎಂಬ ವಿಚಾರ ಇನರಿಗೆ ಗೊತ್ತು. ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಪ್ರಾಮಾಣಿಕತೆ, ಮೌಲ್ಯಗಳ ಬಗ್ಗೆ ಭಾಷಣ ಬಿಗಿಯುವಾಗ, ಉಪದೇಶದ ಮಾತುಗಳನ್ನಾಡುವಾಗ, ಕೇಳುವವರಿಗೆ ವಾಂತಿ, ವಾಕರಿಕೆ ಬರುತ್ತದೆ.

ಅಂತೆಯೇ, ಭಾಷಣಗಳು ನೀರಸವಾದಾಗ, ಕೇಳಿ ಬೇಸತ್ತು ಸುಸ್ತಾದ ಸಭಿಕರು ಆಕಳಿಸೋದರ ಮೂಲಕವೋ, ಅಕಾಲದಲ್ಲಿ ಚಪ್ಪಾಳೆ ಹೊಡೆಯೋದರ ಮೂಲಕವೋ ನಿಮ್ಮ ಭಾಷಣವನ್ನು ಬೇಗ ಮುಗಿಸಿ ಎಂಬ ಸೂಚನೆಯನ್ನು ಪರೋಕ್ಷವಾಗಿ ನೀಡುತ್ತಿರುತ್ತಾರೆ. ಆದರೆ, ಈ ಚಪ್ಪಾಳೆಗಳು ಸಭಿಕರು ತನ್ನ ಭಾಷಣದ ಬಗ್ಗೆ ವ್ಯಕ್ತಪಡಿಸಿದ ಮೆಚ್ಚುಗೆಯ ಸಂಕೇತವೆಂಬುದಾಗಿ ತಪ್ಪಾಗಿ ಅರ್ಥೈಸಿಕೊಂಡ ಭಾಷಣಗಾರ ಮತ್ತೆ ತನ್ನ ಭಾಷಣವನ್ನು ಮುಂದುವರಿಸಿದರೆ, ಸಭಿಕರೂ, ಸಂಯೋಜಕರೂ ತಲೆ ಚಚ್ಚಿಕೊಳ್ಳಬೇಕಾಗುತ್ತದೆ. ಆಗ ಬೇಗ ಮುಗಿಸಿ ಎಂಬ ಚೀಟಿಯನ್ನು ಕಡ್ಡಾಯವಾಗಿ ಭಾಷಣಗಾರನ ಎದುರು ಇಡಬೇಕಾಗುತ್ತದೆ, ಹಾಗೂ ಆ ಚೀಟಿಯನ್ನು ಆತ ನೋಡಲಿ ಎಂದು ದೇವರನ್ನ ಪ್ರಾರ್ಥಿಸಬೇಕಾಗುತ್ತದೆ.

ಅಂತೆಯೇ, ಕೆಲವೊಮ್ಮೆ ತಾವೇ ಭಾಷಣಗಳನ್ನು ಮಾಡಬೇಕಾದ ಸಂದರ್ಭಗಳು ಹೆಚ್ಚಿನವರ ಜೀವನದಲ್ಲಿ ಬಂದೇ ಬರುತ್ತದೆ. ಇಂತಹ ಸಂದರ್ಭದಲ್ಲಿ ಓರ್ವ ಒಳ್ಳೆಯ ಭಾಷಣಗಾರನಾಗೋದು ಹೇಗೆ ಎಂಬುದರ ಬಗ್ಗೆ ಈ ಚಿಂತನೆ :

ನಾವು, ಅಪೇಕ್ಷಿತ ಭಾಷಣಗಾರರಲ್ಲದಾಗ, ಭಾಷಣ ಮಾಡಲು ಅಧಿಕೃತವಾದ ಅಹ್ವಾನವಿಲ್ಲದಾಗ, ಭಾಷಣ ಮಾಡಬೇಕಾದ ವಿಷಯದ ಬಗ್ಗೆ ನಮಗೇನೂ ತಿಳಿಯದಿದ್ದಾಗ ಯಾರೇ ಬಲವಂತ ಮಾಡಿದರೂ ಭಾಷಣ ಮಾಡಲೇಬಾರದು. ಆಹ್ವಾನದ ಮೇಲೆ, ಭಾಷಣ ಮಾಡಲು ಒಪ್ಪಿಕೊಂಡ ಬಳಿಕ, ಭಾಷಣ ಮಾಡಬೇಕಾದ ವಿಷಯದ ಬಗ್ಗೆ ಸಾಕಷ್ಟು ತಯಾರಿಯನ್ನು (Home work) ಮಾಡಿಕೊಂಡಿರಬೇಕು.

ಇದಕ್ಕಾಗಿ ವಿಷಯ ಸಂಗ್ರಹಣೆ, ಪೂರ್ವಸಿದ್ಧತೆ, ಅಧ್ಯಯನ ಇತ್ಯಾದಿಗಳು ಒಳ್ಳೆಯ ಭಾಷಣಗಾರನಿಗೆ ಅನಿವಾರ್ಯ. ಮಾತನಾಡಬೇಕಾದ ಅವಧಿಗಿಂತ, ತುಸು ಹೆಚ್ಚಿನ ಸಿದ್ಧತೆ ಅವಶ್ಯ. ಕಾರಣ, ಮಧ್ಯೆ ವಿಷಯಗಳು ಮರೆತು ಹೋದಾಗ ಈ ಹೆಚ್ಚಿನ ತಯಾರಿ ನಮ್ಮನ್ನು ರಕ್ಷಿಸುತ್ತದೆ. ಅವಶ್ಯವಿದ್ದಲ್ಲಿ, ಕೆಲವು ಪಾಯಿಂಟ್​ಗಳನ್ನು ಚಿಕ್ಕ ಚೀಟಿಯಲ್ಲಿ ಬರೆದಿಟ್ಟುಕೊಂಡು, ಭಾಷಣದ ವೇಳೆ ನಮ್ಮ ಜತೆ ಒಯ್ಯಬಹುದಾದರೂ, ಭಾಷಣಗಳನ್ನು ಓದುವ ಪರಿಪಾಠ ಒಳ್ಳೆಯ ಭಾಷಣಗಾರನ ಲಕ್ಷಣವಲ್ಲ.

ಭಾಷಣಗಾರನ ಉಡುಗೆ-ತೊಡುಗೆ ಸಂದರ್ಭ ಮತ್ತು ಸಭೆಗೆ ತಕ್ಕಂತಿರಬೇಕು. ಎಲ್ಲಾ ಸಭಿಕರ ಗಮನ ನಮ್ಮತ್ತಲೇ ಇರುವುದರಿಂದ, ನಮ್ಮ ಬಟ್ಟೆಗಳು ಸ್ವಚ್ಛ ಹಾಗೂ ಶುಭ್ರವಾಗಿರಲಿ. ಅತಿಯಾದ ಇಲ್ಲವೇ ವಿಚಿತ್ರವಾದ ವೇಷ ಭೂಷಣಗಳು ತರವಲ್ಲ. ಅಂತೆಯೇ ಭಾಷಣ ಮಾಡುವ ವೇಳೆ ನಮ್ಮ ಭಂಗಿ ಮತ್ತು ಶಾರೀರಿಕ ಭಾಷೆ ಆಕರ್ಷಕವಾಗಿರಬೇಕು ಹಾಗೂ ಘನತೆ ಗೌರವಗಳಿಂದ ಕೂಡಿರಬೇಕು.

ಅವು ಅನವಶ್ಯಕವಾಗಿ, ಸಭಿಕರ ಗಮನವನ್ನು ಸೆಳೆಯುವಂತಿರಬಾರದು. ಉದಾಹರಣೆಗೆ, ಭಾಷಣ ಮಾಡುವಾಗ ಅತಿಯಾಗಿ ಬಾಗೋದು, ತೂಗಾಡೋದು, ಅಗತ್ಯವಿಲ್ಲದೇನೇ ಆಗಾಗ ಕೆಮ್ಮುವುದು, ಕೈಕೈ ಹಿಸುಕಿಕೊಳ್ಳೋದು, ಮೂಗಿನೊಳಗೆ ಬೆರಳು ತೂರಿಸೋದು, Podium ಇಲ್ಲವೇ ಮೈಕನ್ನು ಗಟ್ಟಿಯಾಗಿ ಹಿಡಿದುಕೊಂಡಿರೋದು, ಎಲ್ಲೋ ನೋಡಿ ಮಾತನಾಡುತ್ತಿರೋದು ಎಲ್ಲವೂ, ಅಸಹ್ಯ ವಿಚಿತ್ರ ವರ್ತನೆಗಳೆನಿಸಿಕೊಳ್ಳುತ್ತವೆ. ಧೀರ ನಿಲುವು, ಸಭಿಕರನ್ನು ಆಕರ್ಷಿಸುತ್ತದೆ. ಹಾಗಂತ ಕಲ್ಲಿನ ಮೂರ್ತಿಯಂತೆ ನಿಶ್ಚಲರೂ ಆಗಬಾರದು.

ಮಾತುಗಳ ಸಂದರ್ಭಕ್ಕೆ ತಕ್ಕಂತೆ, ಕೈ-ಕಣ್ಣು ಮತ್ತು ಮುಖದ ಭಾವಗಳು ಬದಲಾಗುತ್ತಿರಲಿ. ನಮ್ಮ ಕಣ್ಣುಗಳು ಸಭಿಕರನ್ನು ನೋಡುತ್ತಿರಲಿ. ಈ ನೇತ್ರ ಸಂಪರ್ಕ ಅವರನ್ನೇ ಉದ್ದೇಶಿಸಿ ಮಾತನಾಡುತ್ತಿರುವಿರಿ ಎಂಬ ಆತ್ಮೀಯ ಭಾವನೆಯನ್ನು ತಂದೊಡ್ಡಿ ಎಲ್ಲರೂ ನಮ್ಮ ಮಾತುಗಳನ್ನು ಉತ್ಸುಕತೆಯಿಂದ ಕೇಳುತ್ತಾರೆ. ಇದು ಸಭಾ ಸ್ನೇಹಕ್ಕೆ ನಾಂದಿಯಾಗುತ್ತದೆ. ಅಂತೆಯೇ ಮುಖದ ಮೇಲೆ ಸದಾ ಮಂದಹಾಸವಿರಲಿ. ಮುಖ ಗಂಟಿಕ್ಕಿಕೊಂಡು, ಮಾಡುವ ಗಂಭೀರ ಭಾಷಣಗಳನ್ನು ಯಾರೂ ಅಷ್ಟಾಗಿ ಇಷ್ಟಪಡೋದಿಲ್ಲ.

ಆತ್ಮವಿಶ್ವಾಸ ಹೊಂದಿದ ದಿಟ್ಟ ಭಂಗಿಯನ್ನು ಭಾಷಣಗಾರ ತನ್ನ ಭಾಷಣದ ಕೊನೇ ತನಕ ಕಾಪಾಡಿಕೊಳ್ಳಬೇಕು. ಸಂದಭೋಚಿತವಾಗಿ, ತಮ್ಮ ಮಾತುಗಳಿಗೆ ಕೊಂಚ ಭಾವುಕತೆಯನ್ನು ಬೆರೆಸಿಕೊಂಡು ಮಾತನಾಡಿದರಂತೂ, ಮಾತು ಪರಿಣಾಮಕಾರಿಯಾಗುತ್ತದೆ. ಹೊಸ ಭಾಷಣಗಾರರಿಗೆ ಆರಂಭದಲ್ಲಿ ಸಭಾ ಕಂಪನ ಉಂಟಾಗೋದು ಸರ್ವೆಸಾಮಾನ್ಯವಾದರೂ, ಸತತ ಅಭ್ಯಾಸ ಬಲದಿಂದ, ಕ್ರಮೇಣ ಇದು ದೂರವಾಗುತ್ತದೆ.

ಮೈಕ್ ಪ್ರಜ್ಞೆ ಕೂಡ ಪರಿಣಾಮಕಾರಿ ಭಾಷಣಕ್ಕೆ ಬಲು ಮುಖ್ಯ. ನಮ್ಮ ಬಾಯಿ ಮತ್ತು ಮೈಕ್ ನಡುವಿನ ಅಂತರವನ್ನು ಮೊದಲೇ ಸಮದೂರದಲ್ಲಿ ಹೊಂದಿಸಿಕೊಂಡಿರಬೇಕು; ಮತ್ತೆ ಬದಲಿಸುತ್ತಿರಬಾರದು. ಈ ಅಂತರ ಕಡಿಮೆಯೂ ಆಗಬಾರದು; ಜಾಸ್ತಿಯೂ ಆಗಿರಬಾರದು. ಆಗ ಮಾತ್ರ ಹೇಳಿದ್ದೆಲ್ಲಾ ಸ್ಪಷ್ಟವಾಗಿ ಕೇಳುತ್ತಿರುತ್ತದೆ. ಮೈಕ್ ಬಿಟ್ಟು ತಲೆಯನ್ನು ಆಚೆ-ಈಚೆ ಸರಿಸಿ, ಅಕ್ಕಪಕ್ಕದವರನ್ನು ನೋಡುತ್ತಾ ಮಾತನಾಡಿದರೆ, ಹೇಳಿದ್ದು ಸರಿಯಾಗಿ ಕೇಳಿಸದೆ, ಸಭಿಕರಿಗೆ ಹಿಂಸೆಯಾಗುತ್ತದೆ.

ಅಂತೆಯೇ ನಮ್ಮ ದನಿಯ ಬಗ್ಗೆಯೂ ಗಮನವಿರಲಿ. ಭಾಷಣದ ಉದ್ದಕ್ಕೂ ಒಂದೇ ತೆರೆನಾಗಿದ್ದರೆ ಭಾಷಣ ನೀರಸವೆನಿಸುತ್ತದೆ. ದನಿ ಗಟ್ಟಿಯಾಗಿರಲಿ, ಸಂದರ್ಭಗಳಿಗೆ ತಕ್ಕಂತೆ ಏರಿಳಿತಗಳಿಂದ, ಪಂಚ್​ಗಳಿಂದ ಕೂಡಿರಲಿ. ಶಬ್ದಗಳ ಮತ್ತು ವಾಕ್ಯಗಳ ನಡುವೆ ಅಂತರವಿರಲಿ, ಅವಸರವಾಗಿ ಮಾತನಾಡುವ ರೀತಿ, ಆತ್ಮವಿಶ್ವಾಸವಿಲ್ಲದ ಸಣ್ಣ ಸ್ವರ, ಇಲ್ಲವೇ ಮಧ್ಯೆ ಶಬ್ದಗಳನ್ನು ನುಂಗಿ ಹಾಕುವ ಅಭ್ಯಾಸ ಒಳ್ಳೆಯದಲ್ಲ.

ಚಪ್ಪಾಳೆಗಳು ಬಂದಲ್ಲಿ, ಅವು ನಿಲ್ಲುವ ತನಕ ಮಾತನಾಡಬಾರದು. ಅಂತೆಯೇ, ಮಾತುಗಳು, ಆವೇಶ, ಉದ್ರೇಕಗಳಿಂದ ಕೂಡಿರಬಾರದು; ನಾಟಕೀಯವಾಗಿರಬಾರದು; ಹಾಗೂ ಉತ್ಪ್ರೇಕ್ಷೆಗಳಿಂದ, ಕಟುವಾದ ನಿಂದನೆಗಳಿಂದ, ಖಂಡನೆಗಳಿಂದ, ಅಶ್ಲೀಲ ಶಬ್ದಗಳಿಂದ ಮುಕ್ತವಾಗಿರಬೇಕು. ಮಾತ್ರವೇ ಅಲ್ಲ ತಪ್ಪು ಮಾಹಿತಿಗಳನ್ನು ನೀಡಬಾರದು: ವೈಯಕ್ತಿಕ ವಿಷಯಗಳ ಬಗ್ಗೆ ಪ್ರಸ್ತಾಪಿಸಬಾರದು; ಧರ್ಮ-ಜಾತಿ-ಮತ-ರಾಜಕಾರಣ ಮುಂತಾದ ವಿವಾದಿತ ವಿಷಯಗಳನ್ನು ತರಲೇಬಾರದು. ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು ಹಾಗೂ ಇತರರನ್ನೂ ನಿಂದಿಸಬಾರದು. ಮಾತುಗಳು ಕೆಲವೇ ಆದರೂ ಪರವಾಗಿಲ್ಲ ಅದು ಸಹಜ ಸ್ವಾಭಾವಿಕವಾಗಿರಲಿ.

ಬಳಸುವ ಭಾಷೆ ಶುದ್ಧವಾಗಿರಲಿ; ಕೀಳು ಭಾಷೆ-ಕೆಟ್ಟ ಭಾಷೆಗಳು ರ್ವ್ಯಜ. ಉಚ್ಚಾರಣೆಯೂ ಸ್ಪಷ್ಟವಾಗಿರಬೇಕು. ಮಹಾಪ್ರಾಣಗಳಿರಬೇಕಾದಲ್ಲಿ ಅಲ್ಪಪ್ರಾಣಗಳಿರಬಾರದು. ಇವರು ‘ಹೆಮ್ಮೆಯ ಹಾಸನ’ದಿಂದ ಬಂದವರು ಎನ್ನುವಲ್ಲಿ ‘ಎಮ್ಮೆಯ ಆಸನ’ದಿಂದ ಬಂದವರು ಎನ್ನಬಾರದು. ಬಳಸುವ ಭಾಷೆ ಎಲ್ಲರಿಗೂ ಅರ್ಥವಾಗುವಂತಹ ಸರಳ ಸುಂದರ ಭಾಷೆಯಾಗಿರಲಿ. ಅಲ್ಲಲ್ಲಿ ಕುತೂಹಲಕಾರೀ, ಪುಟ್ಟ ಘಟನೆಗಳನ್ನು, ನೀತಿಕತೆಗಳನ್ನು ಅರ್ಥಗರ್ಭಿತ ಶ್ಲೋಕಗಳನ್ನು, ತಿಳಿಹಾಸ್ಯವನ್ನು ಬೆರೆಸಿಕೊಂಡರಂತೂ, ಭಾಷಣ ಸಕತ್ ಆಗಿರುತ್ತದೆ.

ಒಳ್ಳೆಯ ಭಾಷಣಗಾರನಿಗೆ 3 ಪ್ರಜ್ಞೆಗಳಿರಬೇಕು

ಸಮಯ ಪ್ರಜ್ಞೆ : ನಾನು ಎಷ್ಟು ಹೊತ್ತು ಮಾತನಾಡಲೀ? ಎಂಬ ಭಾಷಣಗಾರನ ಪ್ರಶ್ನೆಗೆ, ಸಂಯೋಜಕರು ಹೇಳಿದರಂತೆ ತಾವು ಎಷ್ಟು ಹೊತ್ತು ಬೇಕಾದರೂ ಮಾತನಾಡಬಹುದು; ನಮ್ಮ ಅಭ್ಯಂತರವಿಲ್ಲ, ಆದರೆ ಒಂದು ಗಂಟೆಯ ನಂತರ ಇಲ್ಲಿ ನಾವ್ಯಾರೂ ಇರೋದಿಲ್ಲ! ಭಾಷಣ ಹಿತ-ಮಿತವಾಗಿರಲಿ, ಸಮಯದ ಮಿತಿ ಮೀರಿ ಮಾತನಾಡಿದರೆ, ಇತರ ಕಾರ್ಯಕ್ರಮಗಳಿಗೆ ಅಡ್ಡಿಯಾಗುತ್ತದೆ. ನಿಲ್ಲಿಸಿ ಎಂದು ಕೇಳಿಕೊಳ್ಳುವ ಮೊದಲೇ ನಮ್ಮ ಭಾಷಣವನ್ನು

ನಾವೇ ನಿಲ್ಲಿಸಿ ಬಿಡಬೇಕು.

ಸಂದರ್ಭ ಪ್ರಜ್ಞೆ: ಮಾತುಗಳು ಸಂದಭೋಚಿತ-ಸಮಯೋಚಿತವಾಗಿರಬೇಕು; ಅಪ್ರಸ್ತುತ-ಅಸಂಬದ್ಧವಾಗಿರಬಾರದ. ಉದಾಹರಣೆಗೆ ಪುಟ್ಟ ಮಕ್ಕಳಿಗೆ ಕುಟುಂಬ ಯೋಜನೆಯ ವಿಧಿ ವಿಧಾನಗಳ ಬಗ್ಗೆ ಭಾಷಣ ಬಿಗಿಯಬಾರದು.

ಸಭಾ ಪ್ರಜ್ಞೆ: ಭಾಷಣಗಾರ, ಸಭಿಕರ ತಾಳ್ಮೆಯನ್ನು ಪರೀಕ್ಷಿಸುವ ಗೋಜಿಗೆ ಹೋಗಬಾರದು. ಸಭಿಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಿರಬೇಕು. ಕೇಳಲು ಒಲ್ಲದ, ಮನಸ್ಸಿಲ್ಲದ ಸಭಿಕರನ್ನುದ್ದೇಶಿಸಿ ಮಾತನಾಡಲೇಬಾರದು.

ಒಟ್ಟಿನಲ್ಲಿ, ಒಳ್ಳೆಯ ಭಾಷಣಗಾರನೆಂದರೆ, ಒಳ್ಳೆಯ ಅಡುಗೆ ಭಟ್ಟನಿದ್ದಂತೆ. ಅಡುಗೆ ಭಟ್ಟ ಮನೆಯವರ ಬಾಯಿರುಚಿಗೆ ತಕ್ಕಂತೆ ಅಡುಗೆ ಮಾಡಿದಂತೆ, ಒಳ್ಳೆಯ ಭಾಷಣಗಾರ, ಸಭಿಕರ ಮನೋರುಚಿಗೆ ತಕ್ಕಂತೆ ಮಾತನಾಡಬೇಕು. ತನಗೆ ತಿಳಿದುದನ್ನೆಲ್ಲಾ ಹೇಳೋದಲ್ಲ; ಸಭಿಕರಿಗೆ ತಿಳಿಯ ಬೇಕಾದುದನ್ನು ಹೇಳೋದೇ ಒಳ್ಳೆಯ ಭಾಷಣ. ಕೇಳಲು ಆಸಕ್ತಿ ಉಳ್ಳವರ ಎದುರು ಮಾತನಾಡಿದರೆ ವೀಣೆಯ ತಂತಿಗಳನ್ನು ಮೀಟಿದಂತೆ. ಆಸಕ್ತಿ ಇಲ್ಲದವರ, ರಸಿಕರಲ್ಲದವರ, ಹಾಗೂ ಹಾಸ್ಯಪ್ರಜ್ಞೆ ಇಲ್ಲದವರ ಎದುರು ಮಾತನಾಡಿದರೆ ಹೆಣಕ್ಕೆ ಕಚಗುಳಿ ಇಟ್ಟಂತೆ ಎಂಬ ಮಾತನ್ನು ಒಳ್ಳೆಯ ಭಾಷಣಗಾರ ಮರೆಯುವುದಿಲ್ಲ. ಹಾಗೇನೇ, ವಿಷಯಾಂತರವಾಗಬಾರದು.

ಒಳ್ಳೆಯ ಆರಂಭ- ಮುಕ್ತಾಯ

ಒಳ್ಳೆಯ ಆರಂಭ-ಒಳ್ಳೆಯ ಮುಕ್ತಾಯ, ನಡುವೆ, ಒಳ್ಳೆಯ ಮಾತುಗಳ ಹೂರಣ ಇವುಗಳೆ ಉತ್ತಮ ಭಾಷಣಗಳ ಜೀವಾಳ. ಭಾಷಣ, ಒಂದು ಒಳ್ಳೆಯ ಉಲ್ಲೇಖ, ಉಕ್ತಿ, ಕತೆ, ಘಟನೆಯೊಂದಿಗೆ ಆರಂಭವಾಗಿ, ಉತ್ತಮ ಸಂದೇಶದೊಂದಿಗೆ ಕೊನೆಗೊಳ್ಳಲಿ. ಈ ಹಿನ್ನೆಲೆಯಲ್ಲಿ First impression is the best impression and the last impression should be the lasting impression ಎಂಬುದನ್ನು ಮರೆಯಬಾರದು. ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ರಸಿಕನಲ್ಲದವನ ಬರೀ ಮಾತು ಕಿವಿಗೆ ಕೂರ್ದನಿಯ ಬಡಿದಂತೆ ಎಂಬ ಸರ್ವಜ್ಞನ ಮಾತಿನಂತೆ, ನಮ್ಮ ಮಾತುಗಳು ಹಿತವಾಗಿರಲಿ- ಮಿತವಾಗಿರಲಿ-ಮಧುರವಾಗಿರಲಿ ಹಾಗೂ ತಕ್ಕ ತೂಕ- ಪಾಕ, ಸಾಹಿತ್ಯ-ಸಂದೇಶಗಳಿಂದ ಕೂಡಿರಲಿ. ಆಗ ನೀವು ಜನಮೆಚ್ಚುವ ಭಾಷಣಗಾರರಾಗುವಿರಿ!

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...