ಸಿನಿಮಾ

ಶ್ರಮಿಕರಿಗೆ ಸಲಾಂ; ಇಂದು ಕಾರ್ವಿುಕ ದಿನ

ಅಸಂಘಟಿತ ವಲಯದ ಕಾರ್ವಿುಕರಿಗೆ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ, ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿಯೇ ಸರ್ಕಾರ ಕಾರ್ವಿುಕ ಇಲಾಖೆಯ ವಿವಿಧ ಮಂಡಳಿಗಳ ಮೂಲಕ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ನಿಗಾ ವಹಿಸಿದೆ.

| ಆರ್.ತುಳಸಿಕುಮಾರ್ ಬೆಂಗಳೂರು

ಕರ್ನಾಟಕ ಪ್ರಗತಿಪರ ರಾಜ್ಯವಾಗಿ ರೂಪಗೊಳ್ಳಲು ಕೈಗಾರಿಕೆಗಳ ಕೊಡುಗೆ ಸಾಕಷ್ಟಿದೆ. ಇದರಿಂದ ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದು, ಜನರ ಜೀವನ ಭದ್ರತೆಗೆ ಆಧಾರ ಒದಗಿಸಿದೆ. ಔದ್ಯಮಿಕ ಸೇರಿದಂತೆ ವಿವಿಧ ವಲಯಗಳಲ್ಲಿನ ಕಾರ್ವಿುಕರಿಗೆ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಆಸರೆಯಾಗಿವೆ.

ಸಂಘಟಿತ ವಲಯದ ಕಾರ್ವಿುಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಗಳು ಕೈಗೆಟುಕಿವೆ; ಅವುಗಳಿಂದ ಜೀವನಾಧಾರಕ್ಕೆ ಊರುಗೋಲಾಗಿದೆ. ಆದರೆ, ಅಸಂಘಟಿತ ವಲಯದ ಕಾರ್ವಿುಕರಿಗೆ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ, ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿಯೇ ಸರ್ಕಾರ ಕಾರ್ವಿುಕ ಇಲಾಖೆಯ ವಿವಿಧ ಮಂಡಳಿಗಳ ಮೂಲಕ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ನಿಗಾ ವಹಿಸಿದೆ. ಇತ್ತೀಚಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅಸಂಘಟಿತ ಕಾರ್ವಿುಕರ ವೃತ್ತಿ ಆಧಾರಿತ ಪಟ್ಟಿಯಲ್ಲಿ 379 ವೃತ್ತಿಗಳನ್ನು ಒಳಪಡಿಸಲಾಗಿದೆ. ಇಂತಹವರು ಇ-ಶ್ರಮ್ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಂಡಲ್ಲಿ ಕಾರ್ಡ್ ನೀಡಿದ ಬಳಿಕ ಹಲವು ಯೋಜನೆಗಳನ್ನು ಪಡೆಯಬಹುದಾಗಿದೆ.

ಶ್ರಮಿಕ್ ಸಂಜೀವಿನಿಗೆ ಬೇಡಿಕೆ

ಕಾರ್ವಿುಕ ಇಲಾಖೆಯು ಕಾರ್ವಿುಕರ ಕಲ್ಯಾಣ ಮಂಡಳಿ, ಅಸಂಘಟಿತ ಕಾರ್ವಿುಕರ ಸಾಮಾಜಿಕ ಭದ್ರತಾ ಮಂಡಳಿ, ಕಾರ್ವಿುಕ ಆಯುಕ್ತಾಲಯ ಮೂಲಕ ಯೋಜನೆಗಳ ಜಾರಿಗೆ ಕಾಳಜಿ ವಹಿಸಿದೆ. ರಾಜ್ಯದಲ್ಲಿ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ವಿುಕರು ಮತ್ತು ಅವರ ಕುಟುಂಬ ವರ್ಗದವರಿಗೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿರುವ ಸಂಚಾರಿ ಕ್ಲಿನಿಕ್ ‘ಶ್ರಮಿಕ್ ಸಂಜೀವಿನಿ’ ಸೇವೆ ಯಶಸ್ವಿಯತ್ತ ಹೆಜ್ಜೆ ಇಟ್ಟಿದೆ. ಈ-ಶ್ರಮ್ ಕಾರ್ಡ್ ಹೊಂದಿರುವವರ ಮನೆ ಬಾಗಿಲಿಗೆ ತೆರಳುವ ಕ್ಲಿನಿಕ್ ವಾಹನಗಳು ಕಾರ್ವಿುಕರ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ, ಜನಜಾಗೃತಿ ಮೂಡಿಸುತ್ತಿವೆ. ವಿಶೇಷವಾಗಿ ಕಟ್ಟಡ ಕಾರ್ವಿುಕರ ಪ್ರತಿಭಾವಂತ ಮಕ್ಕಳ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವಲ್ಲಿ ಮಂಡಳಿ ಹೆಜ್ಜೆ ಇಟ್ಟಿದೆ. ಇದು ಬಡ ವರ್ಗದ ಮಕ್ಕಳು ವೈದ್ಯರು, ಇಂಜಿನಿಯರ್​ಗಳಾಗಲು ಅವಕಾಶ ಮಾಡಿಕೊಟ್ಟಿದೆ.

ಕಾರ್ವಿುಕರ ಕಷ್ಟಕ್ಕೆ ಸ್ಪಂದಿಸಿದ ಅದಾಲತ್

ಕಳೆದ ವರ್ಷ ಜಾರಿಗೆ ತರಲಾದ ‘ಕಾರ್ವಿುಕರ ಅದಾಲತ್’ ಶ್ರಮಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಮುಖ ವೇದಿಕೆಯಾಯಿತು. 3 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ರಾಜ್ಯಾದ್ಯಂತ ವಿಲೇವಾರಿ ಮಾಡಲಾಗಿದೆ. ವರ್ಷಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಮೂರು ಹಂತಗಳಲ್ಲಿ ಜಾರಿ ಮಾಡಿದ ಪರಿಣಾಮ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅನೇಕ ದೂರುಗಳು ನಿವಾರಣೆಯಾಗಿವೆ. ಇಂತಹ ಅದಾಲತ್ ಪ್ರತಿವರ್ಷ ನಡೆಸುವುದು ಇಂತಹ ಅದಾಲತ್ ನಡೆಸುವುದು ಉತ್ತಮ ಎಂಬ ಸಲಹೆ ಕಾರ್ವಿುಕ ವಲಯದಿಂದ ಕೇಳಿಬಂದಿದೆ.

ಕಾರ್ವಿುಕರ ಕಲ್ಯಾಣ ಮಂಡಳಿ ಯೋಜನೆಗಳು

ಕಾರ್ವಿುಕರ ಕಲ್ಯಾಣ ಮಂಡಳಿ ಮೂಲಕ ಕಾರ್ವಿುಕರು ಹಾಗೂ ಅವರ ಕುಟುಂಬ ಸದಸ್ಯರ ಕಲ್ಯಾಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ವಾರ್ಷಿಕ ಕಾರ್ಯಕ್ರಮಗಳಾಗಿದ್ದು, ಧನಸಹಾಯವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಆರ್​ಟಿಜಿಎಸ್ ಮೂಲಕ ಜಮೆ ಮಾಡುತ್ತಿರುವುದರಿಂದ ಸಕಾಲದಲ್ಲಿ ನೆರವು ದೊರೆಯುತ್ತಿದೆ.

ವೈದ್ಯಕೀಯ ನೆರವು: ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಕಸಿ, ಕ್ಯಾನ್ಸರ್ ಸೇರಿದಂತೆ ಪ್ರಮುಖ ಕಾಯಿಲೆಗಳಿಗೆ ಗರಿಷ್ಠ 25,000 ರೂ. ವರೆಗೆ ಹಾಗೂ ಆರೋಗ್ಯ ತಪಾಸಣೆಗೆ 1000 ರೂ. ವರೆಗೆ ನೆರವು.

ಅಪಘಾತ ಧನಸಹಾಯ: ಕೆಲಸದ ಸ್ಥಳದಲ್ಲಿ ಅಪಘಾತವಾದಲ್ಲಿ ಗರಿಷ್ಠ 10,000 ರೂ. ವರೆಗೆ ನೆರವು ನೀಡಲಾಗುತ್ತದೆ.

ಹೆರಿಗೆ ಭತ್ಯೆ ಸೌಲಭ್ಯ: ಮಹಿಳಾ ಕಾರ್ವಿುಕರಿಗೆ ಮೊದಲ 2 ಮಕ್ಕಳಿಗೆ ಹೆರಿಗೆ ಭತ್ಯೆ ತಲಾ 10,000 ರೂ.

ಅಂತ್ಯಸಂಸ್ಕಾರಕ್ಕೆ ನೆರವು: ಮೃತರ ಕುಟುಂಬದ ಅವಲಂಬಿತರು ಕಾರ್ವಿುಕ ಮೃತಪಟ್ಟ 6 ತಿಂಗಳೊಳಗೆ ಅರ್ಜಿ ಸಲ್ಲಿಸಿದಲ್ಲಿ 10,000 ರೂ. ನೆರವು ನೀಡಲಾಗುತ್ತದೆ.

ಆರೋಗ್ಯ ತಪಾಸಣೆ ಶಿಬಿರಕ್ಕೆ ನೆರವು: ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ಟ್ರೇಡ್ ಯೂನಿಯನ್​ಗಳು ಆಯೋಜಿಸುವ ವೈದ್ಯಕೀಯ ತಪಾಸಣೆ ಶಿಬಿರಕ್ಕೆ 1,00,000 ರೂ. ಧನಸಹಾಯ ಒದಗಿಸಲಾಗುತ್ತದೆ.

ಕ್ರೀಡಾಕೂಟಕ್ಕೆ ಧನಸಹಾಯ: ನೋಂದಾಯಿತ ಕಾರ್ವಿುಕ ಸಂಘಟನೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ವಾರ್ಷಿಕ ಕ್ರೀಡಾಕೂಟಕ್ಕಾಗಿ 1,00,000 ರೂ. ಧನಸಹಾಯ ನೀಡಲಾಗುತ್ತದೆ.

ಕಾರ್ವಿುಕರ ಮಕ್ಕಳಿಗೆ ಶೈಕ್ಷಣಿಕ ಪೋ›ತ್ಸಾಹಧನ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 6,000 ರೂ., ಪಿಯುಸಿ/ಡಿಪ್ಲೊಮಾ/ಐಟಿಐ/ಟಿಸಿಎಚ್ ಶಿಕ್ಷಣಕ್ಕಾಗಿ 8,000 ರೂ., ಪದವಿ ಶಿಕ್ಷಣಕ್ಕಾಗಿ 10,000 ರೂ., ಸ್ನಾತಕೋತ್ತರ ಶಿಕ್ಷಣಕ್ಕಾಗಿ 12,000 ರೂ., ಇಂಜಿನಿಯರಿಂಗ್/ವೈದ್ಯಕೀಯ ಶಿಕ್ಷಣಕ್ಕಾಗಿ 20,000 ರೂ.

ಇ-ಶ್ರಮ್ ಸಹಾಯ ಹೇಗೆ?

ಇ-ಶ್ರಮ್ ಪೋರ್ಟಲ್: www.eshram.gov.in ; ಕಾರ್ವಿುಕರ ಸಹಾಯವಾಣಿ: 155214 ; ಇ-ಶ್ರಮ್ ಸಹಾಯವಾಣಿ: 14434; ದೂರು ಸಲ್ಲಿಕೆ ವೆಬ್​ಸೈಟ್: www.gms.eshram.gov.in ; ಸೇವಾ ಕೇಂದ್ರದ ಮಾಹಿತಿಗೆ: https://findmycsc.nic.in

ಗರ್ಭವತಿಯರ ಪತ್ತೆಗಾಗಿ ಶಾಲಾ ಮಕ್ಕಳಿಗೂ ಋತುಮತಿ ಕಾರ್ಡ್!

Latest Posts

ಲೈಫ್‌ಸ್ಟೈಲ್