ಕಿಂಗ್ ಚಾರ್ಲ್ಸ್: ಮೂರನೇ ಚಾರ್ಲ್ಸ್ ಎಂಬ ಅಭಿದಾನ

ಲಂಡನ್: ರಾಣಿ 2ನೇ ಎಲಿಜಬೆತ್ ಮರಣದ ಹಿನ್ನೆಲೆಯಲ್ಲಿ ಅವರ ಹಿರಿಯ ಪುತ್ರ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ಬ್ರಿಟನ್ ರಾಜನಾಗಿ ಶನಿವಾರ ಸಿಂಹಾಸನಾರೂಢರಾದರು. ಇವರಿಗೆ ‘ಕಿಂಗ್ 3ನೇ ಚಾರ್ಲ್ಸ್’ ಎಂಬ ಅಭಿದಾನವನ್ನು ಔಪಚಾರಿಕವಾಗಿ ಘೋಷಣೆ ಮಾಡಲಾಯಿತು. ಲಂಡನ್​ನ ಸೇಂಟ್ ಜೇಮ್ಸ್ ಅರಮನೆಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ 73 ವರ್ಷದ ಚಾರ್ಲ್ಸ್ ಅಧಿಕೃತವಾಗಿ ನೂತನ ರಾಜನಾಗಿ ಪ್ರತಿಜ್ಞೆ ಸ್ವೀಕರಿಸಿದರು. ಚಾರ್ಲ್ಸ್​ರನ್ನು ರಾಜನೆಂದು ಅಕ್ಸೆಷನ್ ಸಮಿತಿ ಸಭೆ ಘೋಷಿಸಿದ್ದನ್ನು ಟಿವಿಯಲ್ಲಿ ಇದೇ ಮೊದಲ ಬಾರಿಗೆ ನೇರಪ್ರಸಾರ ಮಾಡಲಾಯಿತು, ರಾಣಿಯ ಮರಣದ … Continue reading ಕಿಂಗ್ ಚಾರ್ಲ್ಸ್: ಮೂರನೇ ಚಾರ್ಲ್ಸ್ ಎಂಬ ಅಭಿದಾನ