28.5 C
Bengaluru
Monday, January 20, 2020

ಮಕ್ಕಳ ಬಯಕೆ, ಪಾಲಕರ ಕರ್ತವ್ಯ

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಮನುಷ್ಯನು ಇಂದ್ರಿಯ ಆಸಕ್ತಿಗಳನ್ನು ಒಂದೇ ವಿಷಯದಲ್ಲಿ ತೊಡಗಿಸಿದಲ್ಲಿ ಅದರಲ್ಲಿ ಆಸಕ್ತಿ ಬೆಳೆಯುತ್ತದೆ. ಆಸಕ್ತಿಯಿಂದ ಆಸೆ ಮೊಳಕೆಯೊಡೆಯುತ್ತದೆ. ಆಸೆ ಕಾಮನೆಗಳು ಈಡೇರದಿದ್ದಲ್ಲಿ ಕೋಪ ಉದ್ಭವಿಸುತ್ತದೆ. ಕೋಪದಿಂದ ಮನಸ್ಸು ಸಮ್ಮೋಹನಕ್ಕೆ ಒಳಗಾಗುತ್ತದೆ. ಇದು ಬುದ್ಧಿ ನಾಶಕ್ಕೆ ಎಡೆಮಾಡಿಕೊಡುತ್ತದೆ. ಬುದ್ಧಿ ನಾಶಗೊಂಡಾಗ ಸಮಸ್ತವೂ ನಾಶಗೊಳ್ಳುತ್ತದೆ.

ಇದು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಬರುವ ಮಾನಸಿಕ ಸ್ಥಿತಿಯ ವಿಶ್ಲೇಷಣೆ.

ವೈಜ್ಞಾನಿಕವಾಗಿಯೂ ಒಪ್ಪಿಕೊಳ್ಳಬಹುದಾದಂತಹ ಸಾರ್ವಕಾಲಿಕ ಸಿದ್ಧಾಂತ ಇದಾಗಿದೆ.

ಇದನ್ನು ಎರಡು ವಿಭಾಗವಾಗಿ ನೋಡಬಹುದು.

01  ಮಕ್ಕಳು ಆಕರ್ಷಣೆಯ ಪ್ರಕ್ರಿಯೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಇದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡಾಗ, ಅದಕ್ಕೆ ತಕ್ಕ ಹಾಗೆಯೇ ಅವರಿಗೆ ಸಹಾಯ ಒದಗಿಸಲು ಸಾಧ್ಯವಾಗುತ್ತದೆ.

02 ಇದೇ ಪ್ರಕ್ರಿಯೆ ಪಾಲಕರು ಮಕ್ಕಳಿಗೆ ತಿಳಿಹೇಳುವ ಭರದಲ್ಲಿ ತಮ್ಮ ಮಾನಸಿಕ ಸ್ಥಿತಿಯನ್ನು ಯಾವ ಹಂತಕ್ಕೆ ಕೊಂಡೂಯ್ದಿದ್ದಾರೆ ಎಂದು ತಮ್ಮನ್ನು ತಾವು ವಿಶ್ಲೇಷಿಸಿ ಕೊಳ್ಳಬೇಕು. ಆಗ ಮಾತ್ರ ಮಾರ್ಗ ಕಂಡುಕೊಂಡು ಮಕ್ಕಳಿಗೆ ಒದಗಿಸಲು ಸಾಧ್ಯ.

ಉದಾಹರಣೆಗೆ ಕೇವಲ ಮಾನಸಿಕ ಮಟ್ಟದಲ್ಲಿ ಇಂತಹ ಆಸೆಆಕಾಂಕ್ಷೆಗಳು, ಇಂದ್ರಿಯ ಆಸಕ್ತಿಗಳು , ಪದೇ ಪದೇ ಅದೇ ಚಿಂತನೆಯಲ್ಲಿ ತೊಡಗಿಕೊಂಡಿದ್ದು ಗಮನಕ್ಕೆ ಬಂದಲ್ಲಿ ಅದರ ಕಡೆಗಿರುವ ಗಮನವನ್ನು ಪರಿವರ್ತನೆ ಮಾಡಬೇಕು. ಗಮನವನ್ನು ಬೇರೆ ವಿಷಯಕ್ಕೆ ತಿರುಗಿಸಿ ಬೇರೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು, ಸ್ಥಳ ಬದಲಾವಣೆ ಮಾಡುವುದು, ಪರಿಸರವನ್ನು ಬದಲಾಯಿಸುವುದು ಇತ್ಯಾದಿಗಳಿಂದ ಇಂದ್ರಿಯಗಳಿಗೆ ಸಿಗುತ್ತಿರುವ ಪ್ರಚೋದನೆ ಕಮ್ಮಿಯಾಗುತ್ತದೆ. ಇದರಿಂದ ಬಹಳ ಹೆಚ್ಚಿನ ಪರಿಣಾಮ ದೊರೆಯುತ್ತದೆ.

ಮಾನಸಿಕ ಮಟ್ಟವನ್ನು ಮೀರಿ, ಪದೇಪದೇ ಸಂಪರ್ಕ ಮತ್ತು ಓಡಾಟಗಳಲ್ಲಿ ಸಿಲುಕಿಕೊಂಡು ಸಮಯ ಹರಣ ಮಾಡುತ್ತಿದ್ದಲ್ಲಿ ಪೋಷಕರ ಪ್ರಯತ್ನದ ತೀವ್ರತೆ ಹೆಚ್ಚಬೇಕು. ಪ್ರತಿ ಮಕ್ಕಳಲ್ಲಿ ಜೀವನಕ್ಕೆ ಒಂದು ಗುರಿ ಇರುತ್ತದೆ. ಆದರೆ ಆ ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದೆ ಅದನ್ನು ಪಡೆಯುವ ದಾರಿ ಕಾಣದೆ ಇಂತಹ ಬೇರೆ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಮಕ್ಕಳಿಗೆ ತಮ್ಮ ಗುರಿ ಕನಸಿನ ಬಗ್ಗೆ ಸ್ಪಷ್ಟತೆ ಒದಗಿಸಿಕೊಡಲು ಪೋಷಕರು ವಿವೇಚನೆಯಿಂದ ಪ್ರಯತ್ನಿಸಬೇಕಾತ್ತದೆ.

ಈಗಿನ ಮಕ್ಕಳು ತಂತ್ರಜ್ಞಾನದ ಜತೆಗೆ ಹುಟ್ಟಿಬೆಳೆದವರು. ವಿಶ್ವದ ಪರಿಕಲ್ಪನೆ ಅವರಲ್ಲಿ ಭಿನ್ನವಾಗಿರುತ್ತದೆ. ಸರಿ-ತಪ್ಪುಗಳ ಸಿದ್ಧಾಂತ ಅವರಿಗೆ ಬೇರೆಯೇ ಅನಿಸುತ್ತದೆ. ಇತ್ತೀಚೆಗೆ ಮಕ್ಕಳಲ್ಲಿ ಕೌಟುಂಬಿಕ, ಸಾಮೂಹಿಕ, ವಿಚಾರಗಳಿಗಿಂತ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಾಮುಖ್ಯ ಅತಿಯಾಗಿದೆ. ತನ್ನನ್ನು ಒಪ್ಪಿಕೊಳ್ಳುವ, ಅಭಿಮಾನ ವ್ಯಕ್ತಪಡಿಸುವ, ತನ್ನ ಆಚಾರ-ವಿಚಾರಗಳಿಗೆ ಸ್ವಾತಂತ್ರ್ಯದ ವಾತಾವರಣ ಹುಡುಕುವ ಹಪಹಪಿ ಹೆಚ್ಚುತ್ತಿದೆ.

ಇಂದಿನ ತಂತ್ರಜ್ಞಾನಗಳು ಇಂತಹ ಸ್ವಭಾವವನ್ನು ವೈಭವೀಕರಿಸಲು ಸಹಾಯ ನೀಡುತ್ತಿವೆ.

ಯಾವುದೇ ಸಮಸ್ಯೆಯನ್ನು ಸರಿಪಡಿಸಬೇಕಾದರೆ ಅದರ ಮೂಲ ಕಂಡುಕೊಳ್ಳಬೇಕು.

01 ವಯೋಸಹಜವಾಗಿ ಬರುವಂತಹ ಕೆಲವು ಆಕರ್ಷಣೆಗಳು ಸಮಯ ಸರಿದಂತೆ ಹಿರಿಯರ ಮಾರ್ಗದರ್ಶನದಲ್ಲಿ ಸರಿಯಾಗಿ ಬಿಡುತ್ತವೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಸೂಕ್ತವಾದ ಮಾಗದರ್ಶನ ಅಗತ್ಯ.

02 ಸಹವಾಸ ದೋಷದಿಂದ ಉಂಟಾಗುವ ಸಮಸ್ಯೆಯಾಗಿದ್ದಲ್ಲಿ ನಿಧಾನವಾಗಿ ಮಕ್ಕಳನ್ನು ಬೇರೆಯ ಸಕಾರಾತ್ಮಕ ವಾತಾವರಣಗಳಿಗೆ ಒಳಪಡಿಸಿದಾಗ ನಿಧಾನವಾಗಿ ಪರಿವರ್ತನೆ ಸಾಧ್ಯ. ಯೋಗ, ಧ್ಯಾನ, ಆಟ, ನೃತ್ಯ ಇತ್ಯಾದಿ ಚಟುವಟಿಕೆಗಳು ಸಹಾಯಕವಾಗಬಲ್ಲದು. ಏಕೆಂದರೆ ಪಾಲಕರ ಮಾರ್ಗದರ್ಶನ ಪ್ರೀತಿ ಕಾಳಜಿಗಿಂತ ಸಮವಯಸ್ಕರ ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಶಾಂತಿ ಸಹನೆ ಸಮಾಧಾನದಿಂದ ಪರಿಸ್ಥಿತಿಯನ್ನು ನಿಭಾಯಿಸುವದು ಸೂಕ್ತ.

03 ಸ್ವಾರ್ಥಪರತೆಯಿಂದ ಬೇರೊಬ್ಬ ವ್ಯಕ್ತಿ ನಿಮ್ಮ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಲ್ಲಿ ಹೆಚ್ಚಿನ ಕೌಶಲ, ತಂತ್ರಗಾರಿಕೆ ಅಗತ್ಯವಿರುತ್ತದೆ. ದ್ವೇಷದಿಂದಲೋ, ಲಾಲಸೆಯಿಂದಲೋ ಮಕ್ಕಳ ಮನಸ್ಸನ್ನು ಮರಳುಗೊಳಿಸಿ ತಮ್ಮ ಸ್ವಾರ್ಥಕ್ಕಾಗಿ ಕಾರ್ಯಸಾಧನೆಗಾಗಿ ಉಪಯೋಗಿಸಿಕೊಳ್ಳುವ ಪ್ರವೃತ್ತಿಯು ಕಂಡುಬರುತ್ತದೆ.ಇಂತಹ ಸಂದರ್ಭದಲ್ಲಿ ತ್ವರಿತವಾಗಿ ಎಚ್ಚೆತ್ತುಕೊಳ್ಳುವುದು ಮುಖ್ಯ. ಪರಿಸ್ಥಿತಿಯನ್ನು ಸೂಕ್ತವಾಗಿ ಅರ್ಥಮಾಡಿಕೊಂಡು ಸಾಮ ದಾನ ಭೇದ ದಂಡ ಇತ್ಯಾದಿ ವಿಧಾನಗಳಿಂದ ಮಕ್ಕಳನ್ನು ರಕ್ಷಿಸುವ ಅನಿವಾರ್ಯತೆ ಅಗತ್ಯ ಇರುತ್ತದೆ. ಮಕ್ಕಳ ಮನಸ್ಥಿತಿಯನ್ನು ಸೂಕ್ತ ದೃಷ್ಟಿಕೋನದಿಂದ ನೋಡುವ ಮತ್ತು ಮಕ್ಕಳ ಮನಸ್ಸಿಗೆ ತಲುಪುವ ವಿಧಾನವನ್ನು ತಿಳಿದ ತಜ್ಞರನ್ನು ಕಾಣಬೇಕು.

04 ಭಾವನಾತ್ಮಕ ದಾಳಿಗೆ ತುತ್ತಾಗಿದ್ದ ಸಂದರ್ಭಗಳಲ್ಲಿ ಮಕ್ಕಳಿಗೆ ಇನ್ನೂ ಹೆಚ್ಚಿನ ರಕ್ಷಣೆ ಅಗತ್ಯವಿರುತ್ತದೆ.ಮಕ್ಕಳು ತಾಯಿ-ತಂದೆಯ ಪಕ್ಷದಲ್ಲಿ ಇದ್ದಲ್ಲಿ ತಿಳಿವಳಿಕೆ ಹೇಳುವುದು ಮಾತುಕತೆ ಸುಲಭವಾಗುತ್ತದೆ. ಕೆಲವೊಮ್ಮೆ ಮಕ್ಕಳ ಮನಸ್ಸಿನಲ್ಲಿ ತೀವ್ರವಾದ ಸೆಳೆತ ಇದ್ದಾಗ ಅವುಗಳನ್ನು ತಕ್ಷಣದಲ್ಲಿಯೇ ನಿರ್ವಹಿಸುವುದು ಕಷ್ಟವಾಗಬಹುದು.

ಮಕ್ಕಳ ಜತೆಯಲ್ಲಿ ನಿಧಾನವಾಗಿಯಾದರೂ, ಆತ್ಮೀಯತೆಯನ್ನು ಬೆಳೆಸಿಕೊಳ್ಳಬೇಕು. ತನ್ನ ಮಾನಸಿಕ ಸಂಘರ್ಷ ತುಮುಲಗಳನ್ನು ಆಕರ್ಷಣೆಗಳನ್ನು ಹೇಳಿಕೊಂಡಲ್ಲಿ ತಾಯಿ-ತಂದೆಯ ಕೋಪಕ್ಕೆ, ತಾತ್ಸಾರಕ್ಕೆ, ಪ್ರತಿರೋಧಕ್ಕೆ ಒಳಗಾಗುವ ಭಯವಿದ್ದಲ್ಲಿ ಮಕ್ಕಳು ಖಂಡಿತವಾಗಿಯೂ ಮನಸ್ಸು ಬಿಚ್ಚಿ ಮಾತನಾಡಲಾರರು.

ಸಾಮಾನ್ಯ ಮಾರ್ಗದರ್ಶನಗಳು

ಕಾಮಾದಿ ಬಯಕೆಗಳು ಎಲ್ಲರಲ್ಲಿಯೂ ಸಹಜವಾಗಿಯೇ ಇರುವ ಸ್ಥಿತಿ. ತನ್ನನ್ನು ಪ್ರೀತಿಸುವ ಮೆಚ್ಚಿಕೊಳ್ಳುವ ತನ್ನ ಪ್ರೀತಿಯನ್ನು ಸ್ವೀಕರಿಸುವ ವ್ಯಕ್ತಿಯ ಆಗತ್ಯ ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ. ಶಾಂತಿ ಸಮಾಧಾನ- ವಿವೇಕದಿಂದ ಸ್ವತಹ ಪೋಷಕರೇ ಮಕ್ಕಳನ್ನು ರಕ್ಷಿಸದಿದ್ದರೆ ಮಕ್ಕಳ ಮುಂದಿನ ಗತಿಯೇನು.

ನಮ್ಮ ಮಕ್ಕಳು ನಮ್ಮ ಮುಂದುವರೆದ ಭಾಗವೇ ಹೊರತು ನಮ್ಮ ಅಗತ್ಯ ನಿರೀಕ್ಷೆಗೆ ತಕ್ಕಂತೆ ಯಾವುದೋ ಕಾರ್ಖಾನೆಯಲ್ಲಿ ಸೃಷ್ಟಿಸಲ್ಪಟ್ಟ ಗೊಂಬೆಗಳಲ್ಲ. ಸಕಾರಾತ್ಮಕ ಪ್ರಯತ್ನ, ಸಹನೆ, ಶ್ರದ್ಧೆ, ವಿವೇಕದಿಂದ ಮಕ್ಕಳನ್ನು ಪರಿವರ್ತಿಸುವ ಜವಾಬ್ದಾರಿ ಅಂತಿಮವಾಗಿ ಪಾಲಕರ ಪಾಲಿಗೇ ಬರುತ್ತದೆ.

ಬಿಳಿ ಗೋಡೆ- ಕಪ್ಪು ಚುಕ್ಕೆ

ಮನಸ್ಸಿನ ಸ್ವಭಾವಕ್ಕೆ ಉದಾಹರಣೆ ನೋಡಿ: ಬಿಳಿಯ ಗೋಡೆಯನ್ನು ಕಲ್ಪಿಸಿಕೊಳ್ಳಿ ಎಂದರೆ ಸುಲಭವಾಗಿ ಕಲ್ಪಿಸಿಕೊಳ್ಳಬಹುದು. ಆದರೆ ಅದೇ ಗೋಡೆ ಕಪ್ಪುಚುಕ್ಕೆ ಇಲ್ಲದಂತೆ ಕಲ್ಪಿಸಿಕೊಳ್ಳಿ ಎಂದಲ್ಲಿ ಮೊದಲು ಕಪ್ಪುಚುಕ್ಕೆ ಬರುತ್ತದೆ, ನಂತರ ಬಿಳಿಯಾಗುತ್ತದೆ. ಇದು ಮನಸ್ಸಿನ ಸ್ವಭಾವ. ಹಾಗಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡುವಾಗ ಇದನ್ನು ಮಾಡಬೇಡ ಅದನ್ನು ಮಾಡಬೇಡ ಎಂದು ಒತ್ತು ಕೊಡುವುದಕ್ಕಿಂತ ಮೊದಲು ಮಕ್ಕಳಿಗೆ ಇಷ್ಟವಾಗುವ ಗುರಿಯನ್ನು ಹಾಕಿ ಅದರ ಕಡೆ ಅವರ ಒಲವು ಗಮನ ಪ್ರಯತ್ನ ಹೆಚ್ಚುವಂತೆ ವಾತಾವರಣ ನಿರ್ವಿುಸಿ ಕೊಡಬೇಕು.

ಬಹಳಷ್ಟು ಪೋಷಕರಿಗೆ ಇದನ್ನು ಹೇಳಿದಾಗ ಮನಸ್ಸಿಗೆ ಬರುವ ಪ್ರಶ್ನೆ ಎಂದರೆ ನಮ್ಮ ಬಾಲ್ಯ ಹೀಗಿರಲಿಲ್ಲ ನಾವು ದೊಡ್ಡವರನ್ನು ಕೇಳುತ್ತಿದ್ದೆವು ಈಗಿನ ಮಕ್ಕಳಿಗೆ ಯಾಕೆ ಅರ್ಥವಾಗುವುದಿಲ್ಲ ಎಂದು ಬರುತ್ತದೆ. ಇದಕ್ಕೆ ಒಂದು ಸರಳವಾದ ಉತ್ತರವೆಂದರೆ ನಮ್ಮ ಬಾಲ್ಯದಲ್ಲಿ ನಮಗೆ ಸಿಗುತ್ತಿದ್ದ ವಾತಾವರಣ ಮತ್ತು ಮಾಹಿತಿ ನಮ್ಮ ದೃಷ್ಟಿಯಲ್ಲಿ ಪ್ರಪಂಚವೆಂದರೆ ಬಹಳ ಸೀಮಿತವಾಗಿತ್ತು.

(ಡಾ.ಸರಸ್ವತಿ ಅವರ ಸಂಪರ್ಕಕ್ಕೆ: 080 23518271/ 9845426049)

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...