22.8 C
Bengaluru
Saturday, January 18, 2020

ಅಂತರತಮ ನೀ ಗುರು, ಹೇ ಆತ್ಮತಮೋಹಾರಿ!

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಅಳುವ ಕಡಲೊಳೂ ತೇಲಿ ಬರುತಲಿದೆ /

ನಗೆಯ ಹಾಯಿ ದೋಣಿ; ಬಾಳ ಗಂಗೆಯ ಮಹಾಪೂರದೊಳೂ/

ಸಾವಿನೊಂದು ವೇಣಿ  (ಎಂ ಗೋಪಾಲಕೃಷ್ಣ ಅಡಿಗ)

ಅರ್ಜುನನ ಮೊಮ್ಮಗ, ಅಭಿಮನ್ಯು-ಉತ್ತರೆಯರ ಮಗ ಪರೀಕ್ಷಿತ ಮಹಾರಾಜ ಒಮ್ಮೆ ಬೇಟೆಯಾಡಲು ಅಡವಿಗೆ ತೆರಳಿದ್ದ. ಅನೇಕ ಮೃಗಪಕ್ಷಿಗಳನ್ನು ಬೇಟೆಯಾಡಿ ದರೂ ರಾಜನಿಗೆ ಸಮಾಧಾನವಿಲ್ಲ. ಕಾರಣ ಒಂದು ಜಿಂಕೆ ರಾಜನ ಬಾಣದ ಗುರಿಗೆ ಸಿಲುಕದೆ ಸತಾಯಿಸುತ್ತಿತ್ತು. ಜಿಂಕೆಯನ್ನೇ ಬೆನ್ನಟ್ಟುತ್ತ ರಾಜ ತನ್ನ ಗುಂಪನ್ನು ಬಿಟ್ಟು ದೂರದೂರ ಸಾಗಿದ. ಅಸಹನೆ ಕಾಡಿತು, ಶಬ್ಧವೇದಿ ವಿದ್ಯೆ ಬಲ್ಲ ಅರ್ಜುನನ ಮೊಮ್ಮಗನಾದ ನನಗೆ ಒಂದು ಜಿಂಕೆಯನ್ನೂ ಕೊಲ್ಲಲಾಗದಿದ್ದರೆ ಎಂಥ ಅವಮಾನ ಎಂಬ ಹತಾಶೆ ಮನವನ್ನು ಚುಚ್ಚಲಾರಂಭಿಸಿತು. ಆಗ ಕಾಣಿಸಿದ್ದು ಒಂದು ಋಷ್ಯಾಶ್ರಮ. ಅಲ್ಲಿಗೆ ತೆರಳಿದ ಪರೀಕ್ಷಿತ, ‘ಜಿಂಕೆ ಆಶ್ರಮದ ದಿಕ್ಕಿನಲ್ಲೇ ಓಡಿಬಂತು. ನೀವು ಕಂಡಿರಾ’ ಎಂದು ವಿಚಾರಿಸಿದ. ದುರದೃಷ್ಟ, ಆಶ್ರಮದಲ್ಲಿ ಧ್ಯಾನಸ್ಥರಾಗಿದ್ದ ಶಮೀಕ ಮಹರ್ಷಿ ಮೌನವ್ರತದಲ್ಲಿದ್ದರು. ಹಾಗಾಗಿ ಅವರು ಮೌನ, ಧ್ಯಾನ ಮುರಿಯಲಿಲ್ಲ. ಪರೀಕ್ಷಿತನಿಗೋ ಅಸಹನೆ, ನಾಲ್ಕೈದುಬಾರಿ ಕೇಳಿದರೂ ಮುನಿ ಉತ್ತರಿಸಲಿಲ್ಲ, ತನ್ನನ್ನು ಉಪಚರಿಸಲಿಲ್ಲ ಎಂದು ಮತ್ತಷ್ಟು ವ್ಯಗ್ರನಾದ. ಅಲ್ಲಿಯೇ ಹತ್ತಿರ ಬಿದ್ದಿದ್ದ ಸತ್ತ ಹಾವಿನ ಕಳೆಬರವನ್ನು ಮುನಿಯ ಕೊರಳಿಗೆ ಹಾಕಿ ಸಿಡುಕಿನಿಂದ ಹೊರಟುಹೋದ.

ಅದಾದ ಕೆಲಹೊತ್ತಿನಲ್ಲೇ ಆಶ್ರಮಕ್ಕೆ ಬಂದ ಶಮೀಕ ಮುನಿಯ ಪುತ್ರ ಶೃಂಗಿ, ತಂದೆ ಕೊರಳಲ್ಲಿದ್ದ ಸತ್ತ ಹಾವನ್ನು ಕಂಡು ಕೆಂಡಾಮಂಡಲವಾದ. ‘ಇಂಥ ಅಕಾರ್ಯ ಮಾಡಿದವನು ವಾರದೊಪ್ಪತ್ತಿನೊಳಗೆ ಹಾವು ಕಚ್ಚಿ ಸಾಯಲಿ’ ಎಂದು ಶಪಿಸಿಯೇ ಬಿಟ್ಟ. ರಾಜನಿಗೆ ವಿಚಾರ ತಿಳಿಯಿತು. ಛೇ ಎಂಥ ಅಪಚಾರ ಎಸಗಿ ಶಾಪಕ್ಕೆ ಗುರಿಯಾದೆ ಎಂದು ನೊಂದುಕೊಂಡ. ಇತ್ತ ರಾಜನನ್ನು ಹೇಗಾದರೂ ಬದುಕಿಸಲೇಬೇಕು, ಶಾಪ ಫಲಿಸಬಾರದು ಎಂದು ಪಣತೊಟ್ಟ ಮಂತ್ರಿಗಳು ದೊಡ್ಡ ಸ್ತಂಭವೊಂದರ ಮೇಲೆ ಅರಮನೆ ಕಟ್ಟಿ ಅದರೊಳಗೆ ರಾಜನನ್ನು ಬಚ್ಚಿಟ್ಟರು. ಅರಮನೆಯೊಳಗೆ ಅಪ್ಪಣೆಯಿಲ್ಲದೆ ಮನುಷ್ಯರಿರಲಿ, ಯಾವ ಪ್ರಾಣಿಯೂ ಹೋಗದಂತೆ ಕಾವಲು ಕಾದರು. ಆದರೆ, ಶಾಪ ಫಲಿಸಲೇಬೇಕಿತ್ತು. ಸರ್ಪರಾಜ ತಕ್ಷಕ ಪರೀಕ್ಷಿತನನ್ನು ಬಲಿಪಡೆಯಲು ಕಾಯುತ್ತಿದ್ದ. ತನ್ನ ಮೂಲಸ್ವರೂಪದಲ್ಲಿ ರಾಜನನ್ನು ತಲುಪುವುದು ಅಸಾಧ್ಯ ಎಂದು ಖಚಿತವಾದಾಗ ಅರಮನೆ ಸೇವಕರು ಒಯ್ಯುತ್ತಿದ್ದ ಹಣ್ಣಿನ ಬುಟ್ಟಿಯಲ್ಲಿ ಕ್ರಿಮಿಯ ರೂಪದಲ್ಲಿ ಸೇರಿಕೊಂಡು ಹಣ್ಣೊಂದನ್ನು ಕಚ್ಚಿದ. ದುರ್ದೈವವಶಾತ್ ಪರೀಕ್ಷಿತನೂ ಅದೇ ಹಣ್ಣು ತಿನ್ನಲು ಎತ್ತಿಕೊಂಡಾಗ ಕ್ರಿಮಿರೂಪದ ತಕ್ಷಕ ಮೂಲರೂಪ ತಾಳಿ ಕಚ್ಚಿದ. ಅಲ್ಲಿಗೆ ಶೃಂಗಿಯ ಶಾಪ ಫಲಿಸಿತ್ತು.

ಈ ಗಾಳಿಯ ಬೆನ್ನ ಮೇಲೆ/ ಮೂರ್ತಿಯೊಂದ ಕೆತ್ತಬೇಕು ಅದಕೆ ಎಲ್ಲ ಸಾಧನ/

ಈ ದೇಹಾ ಈ ವಿದ್ಯಾ/ ಜನನ ಮರಣ ವೇದನಾ (ವಿ.ಜಿ. ಭಟ್ಟ)

ವಿಧಿಯ ವಿರುದ್ಧ ಹೋಗಿ ಗೆದ್ದವರು ಯಾರೂ ಇಲ್ಲ. ಮನುಷ್ಯ ಸಂಕಲ್ಪ ಎಷ್ಟೇ ದೊಡ್ಡದಿದ್ದರೂ, ಅದಕ್ಕೂ ಮಿಗಿಲಾದದ್ದು ದೈವನಿಯಮ. ಒಳಿತಾದಾಗ ನನ್ನಿಂದಲೇ ಎಂದು ಬೀಗುವುದು, ಕೆಡುಕು ಘಟಿಸಿದಾಗ ಅನ್ಯರನ್ನು ದೂರುವುದು ಮನುಷ್ಯ ಸ್ವಭಾವ. ಮಹಾಭಾರತ ಯುದ್ಧ ನಡೆದ ಮೇಲೂ ‘ಇಷ್ಟೆಲ್ಲ ಸಾವು-ನೋವುಗಳಿಗೆ ನಾನೇ ಕಾರಣ. ನನ್ನ ರಾಜ್ಯದಾಸೆಯಿಂದ ಸ್ಮಶಾನಸದೃಶ ಭೂಪ್ರದೇಶವನ್ನು ಆಳುವಂತಾಯಿತು’ ಎಂದು ಯುಧಿಷ್ಠಿರ ನೊಂದುಕೊಂಡಿದ್ದ. ಆಗ ಭೀಷ್ಮ ಪಿತಾಮಹ ಕಥೆಯೊಂದನ್ನು ಉದಾಹರಿಸುವ ಮೂಲಕ ಧರ್ಮರಾಯನ ವ್ಯಾಕುಲತೆಯನ್ನು ಪರಿಹರಿಸುತ್ತಾರೆ. ಅರಣ್ಯದಲ್ಲಿ ತಪೋನಿಷ್ಠೆಯಿಂದ ಸಾತ್ವಿಕ ಜೀವನ ನಡೆಸುತ್ತಿದ್ದ ಗೌತಮಿಯ 6 ವರ್ಷದ ಪುತ್ರ ಹಾವು ಕಚ್ಚಿ ಸತ್ತುಹೋಗುತ್ತಾನೆ. ಕಾಡಿನಲ್ಲಿ ಆ ಹಾವನ್ನು ಹಿಡಿಯುವ ವ್ಯಾಧನೊಬ್ಬ ‘ಅಮಾಯಕ ಬಾಲಕನನ್ನು ಕಚ್ಚಿಕೊಂಡ ಈ ಸರ್ಪ ವಧೆಗೆ ಅರ್ಹ, ಸಾಯಿಸಲು ಅನುಮತಿ ಕೊಡು’ ಎಂದು ಗೌತಮಿ ಬಳಿ ಕೇಳುತ್ತಾನೆ. ‘ನನ್ನ ಮಗನ ಹಣೆಯಲ್ಲಿ ಹಾವು ಕಚ್ಚಿ ಸಾಯುವುದು ಬರೆದಿದ್ದರೆ, ಅದಕ್ಕೆ ಸೇಡು ತೀರಿಸಿಕೊಳ್ಳಲು ನನಗೆ ಯಾವ ಅಧಿಕಾರವಿದೆ? ಅಷ್ಟಕ್ಕೂ ದಂಡನೆ ವಿಧಿಸುವುದು ರಾಜನಿಗಿರುವ ಅಧಿಕಾರ’ ಎಂದು ಗೌತಮಿ ಮರುನುಡಿಯುತ್ತಾಳೆ. ‘ಆ ಬಾಲಕನ ವಿಧಿಯಲ್ಲಿ ಅಂಥ ಸಾವೇ ಬರೆದಿತ್ತು. ನಾನು ನಿಮಿತ್ತ ಮಾತ್ರ, ನಾನು ಕಚ್ಚದೇ ಹೋಗಿದ್ದರೂ, ಬೇರೊಂದು ಹಾವು ಕಚ್ಚಿ ಬಾಲಕ ಸಾಯುತ್ತಿದ್ದ, ನನ್ನನ್ನು ಕೊಲ್ಲಬೇಡ ಬಿಟ್ಟುಬಿಡು’ ಎಂದು ಆ ಸರ್ಪವೂ ವಾದಿಸುತ್ತದೆ. ಈ ಜಿಜ್ಞಾಸೆಯಲ್ಲಿ ಯಾರು ಸರಿ, ಯಾರು ತಪ್ಪು ಎಂದು ನಿರ್ಷRಸಲು ಸ್ವತಃ ಯಮಧರ್ಮನಿಗೂ ಸಾಧ್ಯವಾಗುವುದಿಲ್ಲ. ಮಹಾಭಾರತ ಯುದ್ಧದ ಸಾವು-ನೋವುಗಳಿಗೂ ಯá-ಧಿಷ್ಠಿರ ನಿಮಿತ್ತನೇ ಹೊರತು ನೇರ ಹೊಣೆಯಲ್ಲ ಎಂದು ಭೀಷ್ಮರು ಈ ರೀತಿ ವಿಶ್ಲೇಷಿಸುತ್ತಾರೆ.

ನೀನೇನು ತುಳಿದೆಯೋ, ಏನೇನು ಬೆಳೆದೆಯೋ/ ಏನೆಲ್ಲ ಕೂಡಿಸಿ ಕೂಡಿಸಿ ಕಳೆದೆಯೊ

ಯಾರು ಎಲ್ಲ ಲೆಕ್ಕವ ಬರೆದು ಇಟ್ಟವರು?

ಏನಯ್ಯ, ಕಾಲಪುರುಷ / ನಿನ್ನ ಮುಖದರುಶನವ ನೊಮ್ಮೆ ದಯಪಾಲಿಸಯ್ಯ (ಚನ್ನವೀರ ಕಣವಿ)

ಜೀವನದ ಹಾದಿಯಲ್ಲಿ ಗೊಂದಲಗಳು ಸಾವಿರ. ಯಾವುದು ಸರಿ? ಯಾವುದು ತಪ್ಪು? ಇತ್ಯಾದಿ ಪ್ರಶ್ನೆಗಳು ನಿರಂತರ. ಅನೇಕ ಬಾರಿ ನಮ್ಮ ಸಹಜ ಪ್ರವೃತ್ತಿ ಬೇರೆ ಯವರ ದೃಷ್ಟಿಯಲ್ಲಿ ವಿಪರೀತವಾಗಿರುತ್ತದೆ. ಜಗತ್ತಿನ ಸೃಷ್ಟಿಯಲ್ಲಿ ನೋಡುವವರ ದೃಷ್ಟಿಗೆ ಅನುಗುಣವಾಗಿ ಎಲ್ಲವೂ ವಿಭಿನ್ನ, ವಿಶಿಷ್ಟ.

ಮೇಲೊಂದು ಗರುಡ ಹಾರುತಿಹುದು / ಕೆಳಗದರ ನೆರಳು ಓಡುತಿಹುದು

ಅದಕೊ ಅದರಿಚ್ಛೆ ಹಾದಿ / ಇದಕು ಹರಿದತ್ತ ಬೀದಿ (ಪುತಿನ)

ಬದುಕೆಂದರೆ ಹಾಗೆ. ಲೌಕಿಕ ಜಗತ್ತಿನಲ್ಲಿ ಎಲ್ಲವನ್ನೂ ಚಿಂತನೆ, ಆಲೋಚನೆಯಿಂದ ಯೋಜನಾಬದ್ಧವಾಗಿ ಮಾಡಬಹುದು. ಆದರೆ, ಸಾವನ್ನು ಮಾತ್ರ ನಮ್ಮಿಚ್ಛೆಯಂತೆ ನಿರ್ಧರಿಸುವುದು ಸಾಧ್ಯವಿಲ್ಲ.

ಎನಗೊಂದು ಮಾತು ಹೇಳದೆ ಹೋದ ಹಂಸ/ ತನುವಿನೊಳಗೆ ಅನುದಿನ ವಿದ್ದು/ ಜ್ವಾಲಾಧರವೆಂಬೊ ಮಾಳಿಗೆ ಮನೆಯಲ್ಲಿ/ ಈಹೋದು ಒಂಭತ್ತು ಬಾಗಿಲ (ಪುರಂದರದಾಸರು)

ದೇಹದೊಳಗೆ ಇಷ್ಟು ಕಾಲ ವಾಸಿಸಿದ ಜೀವ, ಹೋಗುವ ಹೊತ್ತಲ್ಲಿ ಒಂದು ಮಾತು ಹೇಳಿಹೋಗಬಾರದಿತ್ತೇ ಎಂದು ದಾಸರು ಪ್ರಶ್ನಿಸುತ್ತಾರೆ. ಗಾಳಿ ಬೀಸಿ ಮರದ ಎಲೆಗಳು ಹಾರಿಹೋಗುವಾಗ ತಾಯಿ ಬೇರಿಗೆ, ಆಧರಿಸಿದ ಮರಕ್ಕೆ ಆ ಎಲೆಗಳು ಹೇಳಿಹೋಗುವುವೇ? ಕಾಲ ಬಂದಾಗ ಯಾರ ಅಪ್ಪಣೆಗೂ ಕಾಯದೆ ಹೋಗುವುದು ಜೀವದ ನಿಯಮ. ಅದೇ ವಿಧಿ ಎಂದು ದಾಸರು ಸಮರ್ಥನೆಯನ್ನೂ ಒದಗಿಸುತ್ತಾರೆ. ಹಾಗಾದರೆ, ಇರುವ ಜೀವಿತ ಕಾಲದಲ್ಲಿ ಜೀವನವನ್ನು ಸಾರ್ಥಕವಾಗಿಸಿಕೊಳ್ಳುವುದು ಹೇಗೆ? ಅದಕ್ಕೂ ಯೋಗಿಗಳ ಬಳಿ, ಸಿದ್ಧಸಾಧಕರ ಬಳಿ ಉತ್ತರವಿದೆ. ಸಿದ್ಧಪುರುಷರೊಬ್ಬರ ಮನೆಗೆ ಇಳಿಸಂಜೆ ಹೊತ್ತಿನಲ್ಲಿ ಶಿಷ್ಯನೊಬ್ಬ ಬಂದು ಬಾಗಿಲು ಬಡಿಯುತ್ತಾನೆ. ‘ಯಾರದು’ ಎಂದು ಒಳಗಿನಿಂದ ಪ್ರಶ್ನೆ ಬರುತ್ತದೆ. ‘ಗುರುಗಳೇ ನಾನು’ ಎಂದು ಶಿಷ್ಯ ನುಡಿಯುತ್ತಾನೆ. ಆದರೆ, ಎಷ್ಟು ಹೊತ್ತಾದರೂ, ಮತ್ತೆಷ್ಟು ಬಾಗಿಲು ಬಡಿದರೂ ತೆರೆಯುವುದೇ ಇಲ್ಲ.

ಬೇಸರದಿಂದ ಹಿಂದಿರುಗುವಾಗ ಮತ್ತೊಬ್ಬ ಹಿರಿಯ ಶಿಷ್ಯ ಎದುರಿಗೆ ಸಿಗುತ್ತಾನೆ. ಈತ ಬೇಸರದಿಂದ ಹೀಗಾಯಿತು ಎಂದು ಹೇಳಿಕೊಂಡಾಗ ಹಿರಿಯ ಶಿಷ್ಯ ಸಮಾಧಾನ ಮಾಡಿ ಮತ್ತೆ ಗುರುವಿನ ಮನೆಗೆ ಕರೆತರುತ್ತಾನೆ. ಈ ಬಾರಿ ಬಾಗಿಲು ಬಡಿದಾಗ ಮತ್ತೆ ಯಾರೆಂಬ ಪ್ರಶ್ನೆ ಬರುತ್ತದೆ. ಈ ಸಂದರ್ಭದಲ್ಲಿ ಹಿರಿಯ ಶಿಷ್ಯ ‘ನೀವು’ ಎಂದು ಉತ್ತರಿಸುತ್ತಾನೆ. ಕೂಡಲೇ ಬಾಗಿಲು ತೆರೆಯುತ್ತದೆ. ಅದರರ್ಥ ದೈವತ್ವಕ್ಕಿರಲಿ, ಗುರುತತ್ವಕ್ಕಿರಲಿ ಆತ್ಮ ಸಮರ್ಪಣೆ ಎಂದರೆ ನಾನೆಂಬ ಭಾವವನ್ನು ಸಂಪೂರ್ಣವಾಗಿ ಇಲ್ಲ ವಾಗಿಸಿಕೊಳ್ಳುವುದು. ಪ್ರೇಮದ ಹಾದಿಯಲ್ಲಿ ಜೋಡಿ ರಸ್ತೆ ಗಳಿರುವುದಿಲ್ಲ, ಒಂದೇ ರಸ್ತೆ. ದೇಹ ಎಷ್ಟಿದ್ದರೂ, ಆತ್ಮ ಒಂದೇ ಎಂಬ ಏಕತ್ವ ಅದು ಎಂದು ರಾಜಿಂದರ್ ಸಿಂಗ್ ವಿಶ್ಲೇಷಿಸುತ್ತಾರೆ.

ಹಾಗಿದ್ದರೆ, ದೈವ ಸಾಕ್ಷಾತ್ಕಾರ ಹೇಗೆ? ದೇವರನ್ನು ತಿಳಿಯುವುದು ಹೇಗೆ? ನಮ್ಮನ್ನು ನಾವು ಅರಿಯುವುದು ಹೇಗೆ? ಒಬ್ಬಾತ ಪ್ರತೀ ದಿನ ದೇವರಿಗೆ ಪ್ರಾರ್ಥಿಸುವ ಸಂದರ್ಭದಲ್ಲಿ, ‘ದೇವರೇ, ನನ್ನೊಂದಿಗೆ ಮಾತನಾಡು’ ಎಂದು ಮೊರೆಯಿಡುತ್ತಿದ್ದ. ಅದೊಂದು ದಿನ ಆತ ಪ್ರಾರ್ಥಿಸುವ ಸಂದರ್ಭದಲ್ಲಿ ಮರದ ಮೇಲಿದ್ದ ಪಕ್ಷಿ ಚಿಲಿಪಿಲಿಗುಟ್ಟಿ ಹಾಡುತ್ತಿತ್ತು. ಆದರೆ, ಆತ ಕೇಳಿಸಿಕೊಳ್ಳಲೇ ಇಲ್ಲ. ‘ದೇವರೇ ನನ್ನೊಂದಿಗೆ ಮಾತನಾಡು’ ಎಂದು ಬೇಡುತ್ತಲೇ ಇದ್ದ. ಆಗ ಏಕಾ ಏಕಿ ಗುಡುಗು, ಮಿಂಚುಗಳು ಆಗಸದಲ್ಲಿ ಕಾಣಿಸಿಕೊಂಡವು. ಆತ ಗಮನಿಸಲೇ ಇಲ್ಲ. ‘ದೇವರೇ ನಿನ್ನನ್ನು ನೋಡಬೇಕು, ದರ್ಶನ ನೀಡು’ ಎಂದು ಆತ ಪ್ರಾರ್ಥಿಸುತ್ತಿರುವಾಗ ಆಕಾಶದಲ್ಲಿ ನಕ್ಷತ್ರವೊಂದು ಪ್ರಜ್ವಲಿಸುತ್ತಿತ್ತು. ಆದರೆ, ಆತನ ದೃಷ್ಟಿ ಬೇರೆಲ್ಲೋ ಇತ್ತು.

ದೇಗುಲಕ್ಕೆ ಹೋಗುವಾಗ ಆತ ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದ. ‘ದೇವರೇ ನನ್ನನ್ನು ರ್ಸ³ಸು, ನೀನು ನನ್ನೊಂದಿಗಿರುವುದು ನನಗೆ ತಿಳಿಯಬೇಕು’ ಎಂದು ಹೇಳುತ್ತಿರುವಾಗಲೇ ಚಿಟ್ಟೆಯೊಂದು ಹಾರಿಬಂದು ಆತನ ಭುಜದ ಮೇಲೆ ಕುಳಿತಿತು. ಆದರೆ, ಆತ ಭುಜ ಕೊಡವಿಕೊಂಡು ಮುಂದೆ ಸಾಗಿದ. ಎಷ್ಟು ಬೇಡಿದರೂ ದೇವರು ಪ್ರತ್ಯಕ್ಷನಾಗುತ್ತಿಲ್ಲ ಎಂಬ ಹತಾಶೆಯಿಂದ ಆತ ‘ದೇವರೇ, ನನಗೆ ಸಹಾಯ ಮಾಡು’ ಎಂದು ಮೊರೆಯಿಡುತ್ತಿದ್ದ. ಆ ದಿನವೇ ಆತನಿಗೆ ಗೆಳೆಯನಿಂದ ಪತ್ರವೊಂದು ಬಂದಿತ್ತು. ‘ದೇವರನ್ನು ಕಾಣುವುದು ಹೇಗೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ’ ಎಂದು ಸ್ನೇಹಿತ ಬರೆದಿದ್ದ. ಆದರೆ, ಈತ ಪತ್ರವನ್ನು ಓದದೆಯೇ ಹರಿದುಹಾಕಿದ.

‘ದೇವರೇ ಕೊನೆಯದಾಗಿ ಬೇಡುತ್ತಿದ್ದೇನೆ. ಇದೇ ಕೊನೆ. ಹೇಗಾದರೂ ನನ್ನೊಂದಿಗೆ ಸಂಭಾಷಿಸು’ ಎಂದು ಆತ ಬೇಡುತ್ತಲೇ ಇದ್ದ. ಕೊನೆಗೂ ದೇವರು ಆತನ ಕನಸಿನಲ್ಲಿ ಕಾಣಿಸಿಕೊಂಡು ಹೇಳಿದ. ‘ಮಗೂ, ಸದಾಕಾಲ ನಾನು ನಿನ್ನೊಂದಿಗೆ ಸಂಭಾಷಿಸುತ್ತಲೇ ಇದ್ದೆ. ಆದರೆ, ನೀನು ನಿರೀಕ್ಷಿಸಿದ ರೂಪದಲ್ಲಿ ನಾನು ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ನಿನ್ನ ಅರಿವಿಗೆ ಬರಲಿಲ್ಲ’. ದೇವರು ಸದಾ ಕಾಲ ನಮ್ಮೊಂದಿಗೇ ಇರುತ್ತಾನೆ. ಆದರೆ, ನಾವು ಅರಿತುಕೊಳ್ಳಬೇಕಷ್ಟೇ

ಆವ ರೂಪದೊಳು ಬಂದರು ಸರಿಯೇ/ ಆವವೇಷದೊಳು ನಿಂದರು ಸರಿಯೇ

ನೇಸರುದಯದೊಳು ಬಹೆಯಾ ಬಾ / ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ

(ಕುವೆಂಪು)

ತಾತ್ವಿಕ ನೆಲೆಗಟ್ಟಿನಲ್ಲಿ ಲೋಕದ, ಬದುಕಿನ ವ್ಯಾಖ್ಯಾನ ಬೇರೆ. ಆದರೆ, ಲೋಕ ರೂಢಿಯಂತೆ ಎಲ್ಲರೊಳಗೊಂದಾಗಿ ಬದುಕುವ ಸಂದರ್ಭದಲ್ಲಿ ನಮ್ಮ ಬದುಕಿನ ರೀತಿ ನಾವು ಬದುಕುವ ರೀತಿಯಿಂದಲೇ ನಿರ್ಧಾರವಾಗುತ್ತದೆ. ಹೇಗೆ, ಯಾವ ರೀತಿ ಬದುಕಬೇಕೆನ್ನುವುದು ನಮ್ಮ ಆಸೆಗೆ, ಅವಕಾಶಕ್ಕೆ, ಆಲೋಚನೆಗೆ ಬಿಟ್ಟಿದ್ದು. ಒಳಿತಿ ನಿಂದ ಒಳಿತು, ಕೆಡುಕಿನಿಂದ ಕೆಡುಕು. ಆಯ್ಕೆ ನಮ್ಮದು, ಉಳಿದಿದ್ದು ವಿಧಿಲಿಖಿತ..

ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ

ಆಡಿಸಿದೆ, ಕಾಡಿಸಿದೆ, ಅಳಿಸಿ ನಗುತಿದೆ. (ಚಿ.ಉದಯಶಂಕರ್)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...