ಅರಟಾಳ: ಅಡುಗೆ ಅನಿಲ ಸಿಲಿಂಡರ್ ವಿತರಣೆ

ಅರಟಾಳ: ಅಡುಗೆ ಅನಿಲ ಬಳಸಿ, ಪರಿಸರ ಮತ್ತು ಅರಣ್ಯ ಸಂರಕ್ಷಣೆ ಮಾಡಿ ಎಂದು ಪಿಕೆಪಿಎಸ್ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದ್ದಾರೆ. ಗ್ರಾಮದ 50 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಿಸಿ ಮಾತನಾಡಿದರು. ಬಸವರಾಜ ರೋಡಗಿ, ಪಿಕೆಪಿಎಸ್ ಕಾರ್ಯದರ್ಶಿ ಪರಮಾನಂದ ಖ್ಯಾಡಿ, ಸಂಜಯ ಘಾಟಗೆ, ರಾಜು ಸಾಳುಂಕೆ, ಶ್ರೀಶೈಲ ಪೂಜಾರಿ ಇದ್ದರು.