ಹಗರಿಬೊಮ್ಮನಹಳ್ಳಿ: ತಾಲೂಕಿನ ಶೀಗೇನಹಳ್ಳಿ ಗ್ರಾಮದ ಬಯಲಾಟ ಕಲಾವಿದ ಚುಕ್ಕನಕಲ್ ರಾಮಣ್ಣ
ಅವರಿಗೆ ಅಕಾಡೆಮಿಯಿಂದ 2024-25ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ. ರಾಮಣ್ಣ ಕುಟುಂಬ ದೊಡ್ಡಾಟ ಕಲೆಯನ್ನು ಮೈಗೂಡಿಸಿಕೊಂಡು ಬಂದ ಕಾರಣ ಮನೆಯ ಹಿರಿಯರ ಪ್ರಭಾವದಿಂದ ಕಲೆ ಕರಗತ ಮಾಡಿಕೊಂಡಿದ್ದಾರೆ. ಮೊಟ್ಟ ಮೊದಲಿಗೆ ರಾಮಾಂಜನೇಯ ಯುದ್ಧ, ಯುದ್ಧಕಾಂಡ, ಶುಂಭ ನಿಶುಂಭ, ಮಹಿಷಾಸುರ ಮರ್ದಿನಿ, ಕುರುಕ್ಷೇತ್ರ, ಕನಕಾಂಗಿ ಕಲ್ಯಾಣಿ, ಇಂದ್ರಜಿತ್ ಕಾಳಗ, ಕಿರಾತಾರ್ಜುನ ಕಾಳಗ, ಲವಕುಶ, ವಿರಾಟ ಪರ್ವ, ದ್ರೋಣ ಪರ್ವ(ವೀರ ಅಭಿಮನ್ಯು), ಕರ್ಣಪರ್ವ, ಸಭಾಪರ್ವ, ದೇವೀಮಹಾತ್ಮೆ, ಮೈಲಾರಲಿಂಗೇಶ್ವರ ಮಹಾತ್ಮ, ಲಕ್ಷಿಣಿ ಸ್ವಯಂವರ, ಪ್ರಮೀಳಾ ದರ್ಬಾರು, ಮುಂತಾದ ಬಯಲಾಟಗಳ ಪ್ರದರ್ಶನ ನೀಡಿರುತ್ತಾರೆ. ಇವರ ಕಲಾ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.