ವಿಜಯಪುರ : ಖ್ಯಾತ ಚಿತ್ರಕಲಾವಿದ ಸೋಮಶೇಖರ ಸಾಲಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ಸೆ. 28ರಿಂದ 30ರವರೆಗೆ ನಡೆಯಲಿದೆ.
ಸೆ. 28ರಂದು ಬೆಳಗ್ಗೆ 10-30 ಗಂಟೆಗೆ ಚಿತ್ರಕಲಾ ಪ್ರದರ್ಶನವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಅತಿಥಿಗಳಾಗಿ ವಿಶ್ರಾಂತ ಉಪನ್ಯಾಸಕ ಪ್ರೊ. ಎಂ.ಐ. ಕುಮಟಗಿ, ಡಾ. ಜೆ.ಎಸ್. ಹಿರೇಮಠ ಆಗಮಿಸಲಿದ್ದಾರೆ.
ಹಿರಿಯ ಕಲಾವಿದ ಪಿ.ಎಸ್. ಕಡೇಮನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸೋಮಶೇಖರ ಸಾಲಿ ಪ್ರತಿಷ್ಠಾನದ ಪ್ರ. ಕಾರ್ಯದರ್ಶಿ ವಿದ್ಯಾಧರ ಸಾಲಿ, ಕಾರ್ಯದರ್ಶಿ ರಮೇಶ ಚವ್ಹಾಣ ತಿಳಿಸಿದ್ದಾರೆ.