ಮುತ್ತುಮಾರಿಯಮ್ಮ ಕರಗ ಮಹೋತ್ಸವ

ಅರಸೀಕೆರೆ: ಪಟ್ಟಣದಲ್ಲಿ ಮುತ್ತು ಮಾರಿಯಮ್ಮ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಕರಗ ಮಹೋತ್ಸವಕ್ಕೆ ಕಂತೇನಹಳ್ಳಿ ಸಮೀಪವಿರುವ ಶನಿದೇವರ ಗದ್ದುಗೆ ಬಳಿ ಚಾಲನೆ ನೀಡಲಾಯಿತು. ಬಳಿಕ ಉತ್ಸವವು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಹಾಸನ ರಸ್ತೆಯಲ್ಲಿರುವ ದೇಗುಲ ತಲುಪಿತು.

ದೇವಿಯ ಕರಗಗಳನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ಖಡ್ಗ ಸೇರಿಬಗೆಬಗೆಯ ಆಯುಧಗಳನ್ನು ಹಿಡಿದಿದ್ದ ತಂಡ ದೇವಿಯ ಮುಂದೆ ಹೆಜ್ಜೆ ಹಾಕಿದರೆ, ಸುಡುಬಿಸಿಲನ್ನೂ ಲೆಕ್ಕಿಸದೆ ಬರಿಗಾಲಿನಲ್ಲಿ ಮಕ್ಕಳು, ಮಹಿಳೆಯರು ಹಿಂದೆ ಸಾಗಿದರು.

ಬೆನ್ನಿಗೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡಿದ್ದ ಯುವಕರು ಆಟೋ, ಟ್ರ್ಯಾಕ್ಟರ್ ಎಳೆಯುತ್ತಿದ್ದ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿತು. ಉತ್ಸವದಲ್ಲಿ ಪಾಲ್ಗೊಳ್ಳಲು ನಗರ ಸೇರಿ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ನಗರಸಭಾ ಸದಸ್ಯೆ ಅಭಿರಾಮಿ, ಪುರಸಭಾ ಮಾಜಿ ಸದಸ್ಯ ಶಿವನ್‌ರಾಜ್, ಮುಖಂಡರಾದ ಅಣ್ಣಾದೊರೈ, ರಾಜನ್, ರಾಜು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *