ಮುಂಬೈ: ಮೊನ್ನೆ (ಏಪ್ರಿಲ್ 22) ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 13 ರನ್ಗಳಿಂದ ಸೋಲುಂಡಿತು. ಟೂರ್ನಿಯ ದುಬಾರಿ ಆಟಗಾರ ಹಾಗೂ ಹಂಗಾಮಿ ನಾಯಕ ಸ್ಯಾಮ್ ಕರನ್ (55 ರನ್, 29 ಎಸೆತ, 5 ಬೌಂಡರಿ, 4 ಸಿಕ್ಸರ್) ಸ್ಪೋಟಕ ಅರ್ಧಶತಕ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ (29ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-16ರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 13 ರನ್ಗಳಿಂದ ಮಣಿಸಿತು.
ಇಡೀ ಪಂದ್ಯದಲ್ಲಿ ಅರ್ಷದೀಪ್ ತಮ್ಮ ಬೌಲಿಂಗ್ನಿಂದ ಎಲ್ಲರ ಗಮನ ಸೆಳೆದರು. ಬ್ಯಾಕ್ ಟು ಬ್ಯಾಕ್ ಎರಡು ಎಸೆತದಲ್ಲಿ ಬೋಲ್ಡ್ ಮಾಡಿದ್ದಲ್ಲದೆ, ಎರಡು ಬಾರಿಯು ವಿಕೆಟ್ ಅನ್ನು ಮುರಿದು ಹಾಕಿದರು.
ವೇಗದ ಎಸೆತಕ್ಕೆ ಸಾಕ್ಷಿ
ಕೊನೆಯ ಓವರ್ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ 16 ರನ್ ಅವಶ್ಯಕತೆ ಇತ್ತು. ಈ ವೇಳೆ ಅರ್ಷದೀಪ್ ಬೌಲಿಂಗ್ಗೆ ಇಳಿದಿದ್ದರು. ಮೊನೆಚಾದ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್, ಮುಂಬೈ ತಂಡದ ತಿಲಕ್ ವರ್ಮಾ ಮತ್ತು ನೆಹಾಲ್ ವಧೀರಾರನ್ನು ಬ್ಯಾಕ್ ಟು ಬ್ಯಾಕ್ ಪೆವಲಿಯನ್ಗೆ ಅಟ್ಟಿದರು. ಎರಡೂ ವಿಕೆಟ್ ಕೂಡ ಬೋಲ್ಡ್ ಆಗಿದ್ದು ಗಮನಾರ್ಹ. ಎರಡೂ ವಿಕೆಟ್ ಮುರಿದ್ದಿದ್ದು ಅಚ್ಚರಿಯೂ ಹೌದು ಮತ್ತು ಅರ್ಷದೀಪ್ ವೇಗದ ಎಸೆತಕ್ಕೆ ಸಾಕ್ಷಿಯಾಯಿತು. ಅಂತಿಮವಾಗಿ ಪಂಜಾಬ್ ತಂಡ ವಿಜಯೋತ್ಸವವನ್ನು ಆಚರಿಸಿತು.
Middle stump broken on two consecutive balls. This is the most wild thing I have seen on cricket field. pic.twitter.com/EG1nZaNifW
— Rohit.Bishnoi (@The_kafir_boy_2) April 22, 2023
ಲಕ್ಷಾಂತರ ಮೌಲ್ಯದ ಸ್ಟಂಪ್ಸ್
ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ, ಐಪಿಎಲ್ನಲ್ಲಿ ಬಳಸುವ ಸ್ಟಂಪ್ಗಳು ಸಾಮಾನ್ಯ ಸ್ಟಂಪ್ಗಳಲ್ಲ. ತುಂಬಾ ದುಬಾರಿಯಾಗಿವೆ. ಅವು ಎಲ್ಇಡಿ ಸ್ಟಂಪ್ಗಳು. ಒಂದು ವಿಕೆಟ್ ಮೌಲ್ಯ ಬರೋಬ್ಬರಿ 24 ಲಕ್ಷ ರೂ. ಇದೆ. ಎರಡು ವಿಕೆಟ್ ಮುರಿದಿದ್ದರಿಂದ ಒಟ್ಟು 48 ಲಕ್ಷ ರೂ. ನಷ್ಟವಾಗಿದೆ. ಝಿಂಗ್ ಚೆಂಡುಗಳು ಮತ್ತು ಮೈಕ್ರೊಫೋನ್ ವೈರಿಂಗ್ ಇರುವ ಎಲ್ಇಡಿಗಳು ತುಂಬಾ ದುಬಾರಿಯಾಗಿವೆ ಎಂದು ಸ್ವತಃ ಬಿಸಿಸಿಐ ತಿಳಿಸಿದೆ. ಎರಡು ಬಾರಿ ವಿಕೆಟ್ ಮುರಿದ ಅರ್ಷದೀಪ್ ನೋಡಿ ಕ್ರೀಡಾಭಿಮಾನಿಗಳು ವಾವ್ ಅರ್ಷದೀಪ್ ಎನ್ನುತ್ತಿದ್ದಾರೆ.
Stump breaker,
Game changer!Remember to switch to Stump Cam when Arshdeep Akram bowls 😄#MIvPBKS #IPLonJioCinema #IPL2023 #TATAIPL | @arshdeepsinghh pic.twitter.com/ZnpuNzeF7x
— JioCinema (@JioCinema) April 22, 2023
ಪಂದ್ಯದ ವಿಚಾರಕ್ಕೆ ಬರುವುದಾದರೆ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ 8 ವಿಕೆಟ್ಗೆ 214 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಕೊನೇ 6 ಓವರ್ಗಳಲ್ಲಿ 10 ಸಿಕ್ಸರ್, 8 ಬೌಂಡರಿ ಸಹಿತ ಪಂಜಾಬ್ 109 ರನ್ ಸಿಡಿಸಿತು. ಪ್ರತಿಯಾಗಿ ಮುಂಬೈ ತಂಡ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ (67 ರನ್, 43 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಸೂರ್ಯಕುಮಾರ್ ಯಾದವ್ (57 ರನ್, 26 ಎಸೆತ, 7 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಹೋರಾಟದ ಹೊರತಾಗಿಯೂ 6 ವಿಕೆಟ್ಗೆ 201 ರನ್ಗಳಿಗೆ ತೃಪ್ತಿಪಟ್ಟಿತು. (ಏಜೆನ್ಸೀಸ್)
ಚೊಚ್ಚಲ ಐಪಿಎಲ್ನ 3ನೇ ಪಂದ್ಯದಲ್ಲೇ ಕಳಪೆ ದಾಖಲೆ ಬರೆದ ಅರ್ಜುನ್ ತೆಂಡೂಲ್ಕರ್!