ಕರಾಚಿ: ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಆಟಗಾರ ಅರ್ಷದ್ ನದೀಮ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್ ಗೆ ಹಲವು ಉಡುಗೊರೆಗಳು ಬರುತ್ತಿವೆ. ಆದ್ರೆ, ಎಲ್ಲಾ ಗಿಫ್ಟ್ ಗಳ ನಡುವೆ ಇದೀಗ ನದೀಮ್ ಗೆ ವಿಶೇಷ ಉಡುಗೊರೆಯೊಂದು ಸಖತ್ ಸುದ್ದಿಯಲ್ಲಿದೆ.
ಚಿನ್ನದ ಪದಕ ವಿಜೇತನಾಗಿರುವ ಅರ್ಷದ್ ನದೀಮ್ ಅವರ ಮಾವಎಮ್ಮೆಯನ್ನು ಉಡುಗೊರೆಯಾಗಿ ನೀಡಲಿದ್ದಾರೆ. ನದೀಮ್‌ನ ಮಾವನಿಗೆ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದಾರೆ ಎಂದು ನಾವು ನಿಮಗೆ ಹೇಳೋಣ. ಅವರ ಕಿರಿಯ ಮಗಳನ್ನು ನದೀಮ್ ಮದುವೆಯಾಗಿದ್ದಾರೆ.
ಒಲಂಪಿಕ್ ಗೇಮ್ಸ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ಅವರಿಗೆ ನಗದು ಬಹುಮಾನ ಮತ್ತು ಇತರ ಅಮೂಲ್ಯ ಪ್ರಶಸ್ತಿಗಳನ್ನು ಪಾಕಿಸ್ತಾನ ನೀಡಿರಬಹುದು, ಆದರೆ ಅವರ ಮಾವ, ಅವರ ಗ್ರಾಮೀಣ ಸಂಪ್ರದಾಯಕ್ಕೆ ಅನುಗುಣವಾಗಿ, ಎಮ್ಮೆಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. ನದೀಮ್‌ನ ಮಾವ ಮೊಹಮ್ಮದ್ ನವಾಜ್ ಭಾನುವಾರ ನದೀಮ್‌ನ ಹಳ್ಳಿಯಲ್ಲಿ ಸ್ಥಳೀಯ ಮಾಧ್ಯಮಕ್ಕೆ ಈ ಕುರಿತಾಗಿ ತಳಿಸಿದ್ದಾರೆ.
ನನ್ನ ಕಿರಿಮಗಳನ್ನು ನದೀಮ್ಗೆ ಮದುವೆ ಮಾಡಿ ಕೊಡಲಾಗಿದೆ. ಮನೆಯಲ್ಲಿ ಮತ್ತು ಹೊಲಗಳಲ್ಲಿ ನಿರಂತರವಾಗಿ ಜಾವೆಲಿನ್ ಎಸೆತವನ್ನು ಅಭ್ಯಾಸ ಮಾಡುತ್ತಿದ್ದರು. ಇಂದು ಆವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ತಮ್ಮ ಗ್ರಾಮದಲ್ಲಿ ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ‘ಅತ್ಯಂತ ಮೌಲ್ಯಯುತ’ ಮತ್ತು ‘ಗೌರವಾನ್ವಿತ’ ಎಂದು ಪರಿಗಣಿಸಲಾಗಿದೆ. ಪ್ಯಾರಿಸ್‌ನಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನದೀಮ್ 92.97 ಮೀಟರ್ ಎಸೆದು ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಅವರಿಗೆ ಎಮ್ಮೆಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
ಐಶ್ವರ್ಯಾ ರೈಗೆ ವಿಚ್ಛೇದನ ಘೋಷಿಸಿದ ಅಭಿಷೇಕ್! ಅಸಲಿ ಸತ್ಯ ಹೊರಬಿತ್ತು…
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಸಾಲೆ ಟೀ ಕುಡಿದ್ರೆ ಕೊಲೆಸ್ಟ್ರಾಲ್, ಬಿಪಿ, ಬೊಜ್ಜಿಗೆ ಸಿಗುತ್ತೆ ಪರಿಹಾರ