ದುರಹಂಕಾರ ಕೆಟ್ಟದ್ದು, ಪಾಂಡ್ಯಗೆ ಫ್ಯಾನ್ಸ್ ಕ್ಲಾಸ್

ನವದೆಹಲಿ: ಟೀಮ್ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಹಾರ್ದಿಕ್ ಪಾಂಡ್ಯ ಚೇಷ್ಟೆಯಿಂದ ಮಾಡಿದ ಟ್ವೀಟ್ ಅವರಿಗೆ ತಿರುಗುಬಾಣವಾಗಿದೆ. ಹಾರ್ದಿಕ್ ಪಾಂಡ್ಯರ ಟ್ವೀಟ್, ಜಹೀರ್​ಗೆ ಅಗೌರವ ತೋರುವಂಥದ್ದು ಎಂದು ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ. ‘ಹ್ಯಾಪಿ ಬರ್ತ್​ಡೇ ಜಾಕ್, ನೀವು ಕೂಡ ನನ್ನಂತೆ ಚೆಂಡನ್ನು ಮೈದಾನದಿಂದ ಆಚೆ ಹಾಕುತ್ತೀರಿ ಎಂದು ನಂಬಿದ್ದೇನೆ’ ಎಂದು ಬರೆದು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಜಹೀರ್​ರ ಎಸೆತವನ್ನು ತಾವು ಸಿಕ್ಸರ್​ಗಟ್ಟಿದ್ದ ವಿಡಿಯೋವನ್ನು ಹಾರ್ದಿಕ್ ಹಾಕಿದ್ದರು. ಇದಕ್ಕೆ ಅಭಿಮಾನಿಗಳು ಆಕ್ರೋಶದಿಂದ ಟ್ವೀಟ್ ಮಾಡಿದ್ದು, ‘ಸಹೋದರ, ನಿನ್ನ ದುರಹಂಕಾರವೇ ನಿನ್ನನ್ನು ಪಾತಾಳಕ್ಕೆ ಇಳಿಸುತ್ತದೆ. ಆದಷ್ಟು ವಿನಮ್ರನಾಗಿ ಇರು. ಮೂರ್ಖನಂತೆ ವರ್ತನೆ ಬೇಡ’ ಎಂದು ಒಬ್ಬರು ಬರೆದಿದ್ದಾರೆ. ‘ಪ್ರಖ್ಯಾತಿ-ಹಣ ಎಷ್ಟೇ ಇರಬಹುದು. ಆದರೆ, ಅದರಿಂದ ಮೌಲ್ಯವನ್ನು ಸಂಪಾದನೆ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಪಾಂಡ್ಯ ಉತ್ತಮ ಉದಾಹರಣೆ’, ‘ದೇವರು ನಿನಗೆ ಎಲ್ಲವನ್ನೂ ಕೊಟ್ಟಿದ್ದಾನೆ, ಆದರೆ, ಮೌಲ್ಯವನ್ನು ನೀನು ಸಂಪಾದಿಸಬೇಕು’ ಇನ್ನೂ ಕೆಲವರು ಬರೆದಿದ್ದಾರೆ.

Leave a Reply

Your email address will not be published. Required fields are marked *