ಅಂಧರಿಗೆ ವಂಚಿಸುತ್ತಿದ್ದ ಕಣ್ಣಿಲ್ಲದ ಖದೀಮ ಸೆರೆ

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಅಂಧ ಶಿಕ್ಷಕನಿಂದ ಅಂಕಪಟ್ಟಿಗಳನ್ನು ಪಡೆದು ಆತನ ಹೆಸರಿನಲ್ಲಿಯೇ ವಂಚನೆಗೆ ಇಳಿದಿದ್ದ ಕಣ್ಣಿಲ್ಲದ ಖದೀಮ ನನ್ನು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಹಾಸನ ಮೂಲದ ಅಂಧ ರಾಧಾಕೃಷ್ಣ (25) ಬಂಧಿತ. ಆರೋಪಿಯು ಕಣ್ಣಿಲ್ಲದ ಐವರು ಯುವಕರಿಗೆ ವಿವಿಧ ಕೆಲಸಗಳ ಆಮಿಷವೊಡ್ಡಿ 1.50 ಲಕ್ಷ ರೂ. ಪಡೆದು ವಂಚಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ವಿಚಾರಣೆ ನಡೆಸಿದಾಗ ಅಸಲಿ ಕೃತ್ಯ ಗೊತ್ತಾಗಿದೆ.

ಕಂಪ್ಯೂಟರ್ ತರಬೇತಿಯಲ್ಲಿ ಪರಿಚಯ: ದಾಸರಹಳ್ಳಿ ಬಳಿಯ ಖಾಸಗಿ ಶಾಲೆಯೊಂದರಲ್ಲಿ ಅಂಧ ಅಭಿಮನ್ಯು ನಾಸ್ಕರ್ ಶಿಕ್ಷಕರಾಗಿದ್ದರು. ಇದೇ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿಗೆಂದು ಬಂದಿದ್ದ ರಾಧಾಕೃಷ್ಣನ ಪರಿಚಯವಾಗಿದ್ದು, ಫೋನ್​ನಲ್ಲಿ ಸಂಪರ್ಕದಲ್ಲಿದ್ದ.

ಕೆಲಸ ಕೊಡಿಸುತ್ತೇನೆ: ಅಭಿಮನ್ಯು ಕೆಲ ತಿಂಗಳ ಹಿಂದೆ ಶಿಕ್ಷಕ ಹುದ್ದೆ ತೊರೆದು ಬೇರೆ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರು. ರಾಧಾಕೃಷ್ಣನಿಗೆ ಫೋನ್ ಮಾಡಿ, ಯಾವುದಾದರೂ ಕೆಲಸ ಇದ್ದರೆ ತಿಳಿಸುವಂತೆ ಹೇಳಿದ್ದ. ಇದಾದ ಎರಡು ದಿನದ ಬಳಿಕ ಅಭಿಮನ್ಯುವಿಗೆ ಫೋನ್ ಮಾಡಿದ್ದ ಆರೋಪಿ ರಾಧಾಕೃಷ್ಣ, ‘ನನಗೆ ಹಲವು ಅಧಿಕಾರಿಗಳ ಪರಿಚಯವಿದೆ. ಎಲ್ಲಿಯೂ ಕೆಲಸ ಹುಡುಕಬೇಡ. ನಿನಗೆ ರೈಲ್ವೆ ಇಲಾಖೆಯಲ್ಲಿ ಅಂಗವಿಕಲರ ಕೋಟಾದಡಿ ಕೆಲಸ ಕೊಡಿಸುತ್ತೇನೆ. ಇದಕ್ಕೆ 2 ಲಕ್ಷ ರೂ. ಖರ್ಚಾಗುತ್ತದೆ’ ಎಂದು ತಿಳಿಸಿದ್ದ.

ಇದನ್ನು ನಂಬಿದ ಅಭಿಮನ್ಯು, ಜು.3ರಂದು ತನ್ನ ಅಂಕಪಟ್ಟಿ, ಆಧಾರ್​ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಕೊಟ್ಟಿದ್ದರು. ನಂತರ ಅಭಿಮನ್ಯುನನ್ನು ಪುಸಲಾಯಿಸಿ, ಆತನ ಎಟಿಎಂ ಕಾರ್ಡ್ ಮತ್ತು ಸಿಮ್ಾರ್ಡ್ ತೆಗೆದುಕೊಂಡಿದ್ದ. ಬಳಿಕ 90 ಸಾವಿರ ರೂ. ಡ್ರಾ ಮಾಡಿಕೊಂಡು, ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ.

Leave a Reply

Your email address will not be published. Required fields are marked *