ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಬೇಲೂರು: ಅಂತಾರಾಜ್ಯ ಕಳ್ಳರಿಂದ 51 ಕೆಜಿ ಶ್ರೀಗಂಧ ವಶಕ್ಕೆ ಪಡೆದಿರುವ ಬೇಲೂರು ವಲಯ ಅರಣ್ಯಾಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಶಿವಮೊಗ್ಗದ ಚಲುವ ಮತ್ತು ಮಣಿ ಬಂಧಿತರು. ಮತ್ತಿಬ್ಬರು ಆರೋಪಿಗಳಾದ ರವಿ ಹಾಗೂ ಕುಮಾರ್ ತಲೆಮರೆಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ತಾಲೂಕಿನ ಹಳೇಬೀಡು ವ್ಯಾಪ್ತಿಯ ಐದಳ್ಳ ಅರಣ್ಯ ಪ್ರದೇಶದಲ್ಲಿ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ನಾಲ್ವರೂ ಆರೋಪಿಗಳು ಓಡಲೆತ್ನಿಸಿದ್ದಾರೆ. ಆದರೆ, ಈ ಪೈಕಿ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿದೆ. ಶ್ರೀಗಂಧ ಹಾಗೂ ಮರ ಕಡಿಯಲು ಬಳಸುವ ಪರಿಕರಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಉಪ ವಲಯ ಅರಣ್ಯಾಧಿಕಾರಿಗಳಾದ ನಿಂಗೇಗೌಡ, ಸುಭಾಷ್‌ಚಂದ್ರ, ಸಂತೋಷ್‌ಕುಮಾರ್, ಸಿಬ್ಬಂದಿ ಸುರೇಶ್, ಜಯಣ್ಣ, ಅಣ್ಣಪ್ಪ, ಪ್ರಕಾಶ್, ನಾಗರಾಜ್, ತೀರ್ಥ, ಚಂದನ್ ಇದ್ದರು.

Leave a Reply

Your email address will not be published. Required fields are marked *