More

  ಕಾಡು ಹಂದಿ ಬೇಟೆಗಾರರ ಬಂಧನ

  ಶಿರಸಿ: ತಾಲೂಕಿನ ಬನವಾಸಿ ವಲಯ ದಾಸನಕೊಪ್ಪ ಶಾಖೆಯ ಅಂಡಗಿ ಅರಣ್ಯ ವ್ಯಾಪ್ತಿಯಲ್ಲಿ ಕಾಡುಹಂದಿ ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ.
  ಇಲ್ಲಿಯ ಸಂತೊಳ್ಳಿಯ ಬಸವರಾಜ ಯಲ್ಲಪ್ಪ ಚನ್ನಯ್ಯ ಹಾಗೂ ಉಮೇಶ ಚನ್ನಪ್ಪ ಚಿನ್ನಯ್ಯ ಬಂಧಿತರಾಗಿದ್ದಾರೆ. ಮಾಂಸ ತಯಾರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಂಡು ಇಬ್ಬರೂ ಕಾಡಿನಲ್ಲಿ ಪರಾರಿಯಾಗಿದ್ದರು. ಡಿಎಫ್ ಒ ಡಾ. ಅಜ್ಜಯ್ಯ ಜೆ. ಆರ್. ನೇತೃತ್ವದ ತಂಡ ರಹಸ್ಯ ಕಾರ್ಯಚರಣೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ.ಎನ್., ವಲಯ ಅರಣ್ಯಾಧಿಕಾರಿ ವರದ ರಂಗನಾಥ ಜಿ. ಹೆಚ್, ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ್, ಗಸ್ತು ಅರಣ್ಯ ಪಾಲಕರಾದ ದಯಾನಂದ ಬೋರ್ಕರ್, ಸಿದ್ದಪ್ಪ ನಾವಿ, ಅರಣ್ಯ ವೀಕ್ಷಕರಾದ ಚಂದ್ರು ಗೌಡ, ಗಿರೀಶ ಕುರುಬರ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  https://www.vijayavani.net/blood-mixed-water-belonging-to-kokti-kere
  See also  ಸಮಾಜಕ್ಕೆ ಮಾದರಿಯಾಗಲಿ ಮಠಾಧೀಶರ ನಿಸ್ವಾರ್ಥ ಸೇವೆ: ಶಾಸಕ ಎಂ.ಎಸ್.ಸೋಮಲಿಂಗಪ್ಪ ಆಶಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts