More

  ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ

  ಹಿರೇಕೆರೂರ: ಪಟ್ಟಣದ ಸರ್ವಜ್ಞ ವೃತ್ತದ ಬಳಿಯ ಲಾಜ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

  ಪಟ್ಟಣದ ಮುಗಳಳ್ಳಿ ಪ್ಲಾಟ್‌ನ ಹಾಲಪ್ಪ (ರಘು) ಚಂದ್ರಪ್ಪ ತಳವಾರ (29) ಹಾಗೂ ಚಿಕ್ಕೋಡಿ ತಾಲೂಕಿನ ಮಾಂಜ್ರಿ ಗ್ರಾಮದ ಹಾಲಿ ಪಟ್ಟಣದ ತಂಬಾಕದ ನಗರದ ನಿವಾಸಿ ಅನಿತಾ ಒಂದುರೇ (35) ಬಂಧಿತ ಆರೋಪಿಗಳು.

  ರಘು ತಳವಾರ ಹಾಗೂ ಅನಿತಾ ಒಂದುರೇ ಎಂಬುವವರು ಒಬ್ಬ ಮಹಿಳೆಯನ್ನು ಕರೆತಂದು, ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts