ಸಿನಿಮಾ

ವಾಹನ ಸಮೇತ ಮೂವರ ಬಂಧನ

ರಬಕವಿ/ಬನಹಟ್ಟಿ: ವಾಹನವೊಂದರಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಆಕಳು ಹಾಗೂ ಕರುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ವಾಹನದ ಜತೆಗೆ 5 ದನಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಬನಹಟ್ಟಿ ಸಮೀಪ ಯಲ್ಲಟ್ಟಿ ಗ್ರಾಮದ ನಿರುಪಾಧೀಶ್ವರ ಮಠದ ಬಳಿ ವಾಹನ ತಡೆದು ತಪಾಸಣೆ ನಡೆಸಿದಾಗ ಗೋವುಗಳ ಅಕ್ರಮ ಸಾಗಣೆ ಪತ್ತೆಯಾಗಿದೆ.

ಅಥಣಿ ತಾಲೂಕಿನ ಮಸಗುಪ್ಪಿ ಗ್ರಾಮದ ರಾವಸಾಬ ಶಂಕರ ಹಾರೂಗೇರಿ, ಮಹಾರಾಷ್ಟ್ರದ ಕವಟೆ ಮಹಾಂಕಾಳ ತಾಲೂಕಿನ ಇಂಗನಗಾಂವದ ಸಾಗರ ಅರವಿಂದ ಲೊಂಡೆ ಹಾಗೂ ಅಶೋಕ ನಾಮದೇವ ಚೌಗಲೆ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಪರವಾನಗಿ ಪಡೆಯದೆ ಮಾಂಸದ ಉದ್ದೇಶಕ್ಕಾಗಿ ಸಾಗಣೆ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ರಾಘವೇಂದ್ರ ಖೋತ ತನಿಖೆ ಮುಂದುವರಿಸಿದ್ದಾರೆ. ಫೋಟೋ

Latest Posts

ಲೈಫ್‌ಸ್ಟೈಲ್