More

    ಮೂವರು ಮನೆಗಳ್ಳರ ಬಂಧನ

    ಮೈಸೂರು: ಮನೆ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಮೂವರು ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 8 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

    ಬಿಎಂಶ್ರೀ ನಗರದ ಮಧು(20), ಕಿರಣ್ ಅಲಿಯಾಸ್ ಪುಲಿ (21) ಹಾಗೂ ವಿಜಯ್ ಅಲಿಯಾಸ್ ಬ್ಯಾಗ್(20) ಬಂಧಿತರು. ಬಿಎಂಶ್ರೀ ನಗರದ ಗ್ಯಾಸ್ ಗೋಡೌನ್‌ನ ಬಳಿ ಇರುವ ಟೀ ಅಂಗಡಿ ಬಳಿ ಆರೋಪಿಗಳ ಚಲನ, ವಲನಗಳ ಬಗ್ಗೆ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

    ಜ.4ರಂದು ಕಳಸ್ತವಾಡಿಯ ಮನೆ ಸೇರಿದಂತೆ ವಿವಿಧೆಡೆ ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಬಳಿ ಇದ್ದ ಆಭರಣ ಹಾಗೂ ಮುತ್ತೂಟ್ ಫೈನಾನ್ಸ್, ಅಟ್ಟಿಕಾ ಗೋಲ್ಡ್ ಕಂಪನಿಗಳಿಗೆ ಮಾರಾಟ ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಗಲಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರೆನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts