More

  ಕಡವೆ ಮಾಂಸ ಸಾಗಿಸುತ್ತಿದ್ದ ಆರೋಪಿಗಳ ಬಂಧನ

  ಹನೂರು: ತಾಲೂಕಿನ ವಡಕೆಹಳ್ಳದ ಬಳಿ ಸೋಮವಾರ ಕಡವೆ ಮಾಂಸವನ್ನು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 6 ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

  ತಾಲೂಕಿನ ಅಂಬಿಕಾಪುರ ಗ್ರಾಮದ ಕುಮಾರಸ್ವಾಮಿ, ಅಪ್ಪು, ಬಸಪ್ಪನದೊಡ್ಡಿಯ ಇರ್ಫಾನ್ ಬೇಗ್, ವಹೀದ್, ಕಾಂಚಳ್ಳಿ ಗ್ರಾಮದ ಯಶವಂತ್ ಹಾಗೂ ಕುರುಬರದೊಡ್ಡಿಯ ಸೈಯದ್ ಆರೀಸ್ ಬಂಧಿತ ಆರೋಪಿಗಳು.

  ಆರೋಪಿಗಳು ಕಡವೆ ಬೇಟೆಯಾಡಿ ಅದರ ಮಾಂಸವನ್ನು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಮಹಾಶಿವರಾತ್ರಿ ಜಾತ್ರಾ ಹಿನ್ನೆಲೆಯಲ್ಲಿ ವಡಕೆಹಳ್ಳದ ಬಳಿ ಗಸ್ತಿನಲ್ಲಿದ್ದ ಸಿಬ್ಬಂದಿ ವಾಹನವನ್ನು ತಡೆದು ಪರಿಶೀಲಿಸಿದಾಗ ಕಡವೆ ಮಾಂಸ ಪತ್ತೆಯಾಗಿದೆ. ಮಾಂಸವನ್ನು ವಶಪಡಿಸಿಕೊಂಡ ಸಿಬ್ಬಂದಿ, ಆರೋಪಿಯನ್ನು ಬಂಧಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಬಳಿಕ ಎಸಿಎಫ್ ಚಂದ್ರಶೇಖರ ಪಾಟೀಲ್ ಹಾಗೂ ಆರ್‌ಎಫ್‌ಒ ಶಾಂತರಾಜು ಎಸ್.ಚವ್ಹಾಣ್ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.

  ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ರಾಮು, ಸಿಬ್ಬಂದಿ ರಕ್ಷಿತ್, ಕಲ್ಮೇಶ್, ವೀರೇಶ್ ಹಾಗೂ ಅಭಿಷೇಕ ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts