ಕಂಪ್ಲಿ: ತಾಲೂಕಿನ ಉಪ್ಪಾರಹಳ್ಳಿ ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಸೌಲಭ್ಯ ಒದಗಿಸಬೇಕು ಎಂದು ಮೆಟ್ರಿ ಗ್ರಾಪಂ ಸದಸ್ಯ ಎಚ್.ಕುಮಾರಸ್ವಾಮಿ ಹೇಳಿದರು.
ಹೊಸಪೇಟೆಯ ಬಿಎಸ್‌ಎನ್‌ಎಲ್ ಉಪವಿಭಾಗೀಯ ಇಂಜಿನಿಯರ್ ನಾಗೇಂದ್ರಗೆ ಮನವಿ ಸಲ್ಲಿಸಿ ಮಾತನಾಡಿದರು.

ಉಪ್ಪಾರಹಳ್ಳಿ ಗ್ರಾಮಕ್ಕೆ ಟವರ್ ಸೌಲಭ್ಯ ಇಲ್ಲದಿದ್ದರಿಂದ ಗ್ರಾಮಸ್ಥರು ಮೊಬೈಲ್ ಆಧಾರಿತ ಸೇವೆಗಳಿಂದ ವಂಚಿತರಾಗಿದ್ದಾರೆ. ಸರ್ಕಾರದ ಯೋಜನೆ, ತುರ್ತು ಸಂಪರ್ಕ, ಬ್ಯಾಂಕಿನ ಸಂದೇಶಗಳು ತಲುಪುತ್ತಿಲ್ಲ. ಶಾಲಾ ಮಕ್ಕಳ ಆನ್‌ಲೈನ್ ಪಾಠ ಬೋಧನೆಗೆ ಅಡಚಣೆಯಾಗಿದೆ.
ಇದನ್ನೂ ಓದಿ: ಕೇಂದ್ರದಿಂದ ಬಿಎಸ್‌ಎನ್‌ಎಲ್ ಪುನರುಜ್ಜೀವನ -ಸಂಸದ ಜಿ.ಎಂ.ಸಿದ್ದೇಶ್ವರ ಮಾಹಿತಿ
ಗರ್ಭಿಣಿಯರ ಹೆರಿಗೆ ಸಂದರ್ಭದಲ್ಲಿ 108 ಕರೆ ಮಾಡಲು ಸಮಸ್ಯೆಯಾಗುತ್ತಿದೆ. ಮೊಬೈಲ್ ಟವರ್ ಹಾಕಿಕೊಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಮೊಬೈಲ್ ಟವರ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು. ಗ್ರಾಮಸ್ಥರಾದ ನೇಣ್ಕಿ ಗಿರೀಶ್, ಗಂಗಾಧರ, ಮಲ್ಲಿಕಾರ್ಜುನ ಇದ್ದರು.