ನೀಟ್ ಪರದಾಟ: ಪರೀಕ್ಷೆ ತಪ್ಪಿಸಿದ ರೈಲು ವಿಳಂಬ, ಸರಣಿ ಎಡವಟ್ಟಿಗೆ ನೂರಾರು ವಿದ್ಯಾರ್ಥಿಗಳ ಕನಸು ನುಚ್ಚುನೂರು

Latest News

ಎಚ್​ಎಎಲ್ ನ ಎಚ್​ಟಿಟಿ 40ನಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥರ ಹಾರಾಟ

ಬೆಂಗಳೂರು: ಎಚ್​ಎಎಲ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಎಚ್​ಟಿಟಿ 40 ಪ್ರಾಥಮಿಕ ತರಬೇತಿ ವಿಮಾನದಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥ (ಎಸಿಎಂ) ಆರ್​ಕೆಎಸ್ ಬದುರಿಯಾ ಮೊದಲ ಬಾರಿಗೆ ಹಾರಾಟ...

ಬ್ಯಾಂಕ್ ಕಟ್ಟಿದ ಹಣದಲ್ಲೇ ನಕಲಿ ನೋಟುಗಳು!

ಬೆಂಗಳೂರು: ನಕಲಿ ನೋಟು ತಡೆಗೆ ಅಮಾನೀಕರಣ ಮತ್ತು ಆಧುನಿಕ ಮಿಷನ್​ಗಳನ್ನು ಬ್ಯಾಂಕ್​ಗಳಿಗೆ ಪೂರೈಕೆ ಮಾಡಲಾಗಿದೆ. ಆದರೂ ಬ್ಯಾಂಕ್ ಅಧಿಕಾರಿಗಳ ಕಣ್ತಪ್ಪಿ ನಕಲಿ ನೋಟುಗಳು ಆರ್​ಬಿಐ...

ದಾಳಿ ಮಾಡಿದ ಮೊಸಳೆಯ ಬಿಗಿಹಿಡಿತದಿಂದ ಪಾರಾಗಲು ಅರಣ್ಯ ಅಧಿಕಾರಿ ಕಂಡುಕೊಂಡ ದಾರಿ ಬಲು ರೋಚಕ!

ಕೈರ್ನ್ಸ್: ಆಸ್ಟ್ರೇಲಿಯಾದ ಅರಣ್ಯ ಅಧಿಕಾರಿಯೊಬ್ಬರು ಮೊಸಳೆ ದಾಳಿಯಿಂದ ಪಾರಾಗಿರುವ ಘಟನೆ ಭಾನುವಾರ ವರದಿಯಾಗಿದೆ. ಅವರು ಹೇಗೆ ಪಾರಾದರು ಎಂಬುದನ್ನು ತಿಳಿಯುವ ಹಂಬಲವಿದ್ದರೆ ಮುಂದೆ...

ನಕಲಿ ಕೀ ಬಳಸಿ ಕಾರು ಕದ್ದ ಮೆಕಾನಿಕ್ ಸೆರೆ: ತಮಿಳುನಾಡಿನಲ್ಲಿ ಬಂಧಿಸಿದ ಪೊಲೀಸರು

ಬೆಂಗಳೂರು: ನಕಲಿ ಕೀ ಬಳಸಿ ಕಾರು ಕದ್ದ ಕಳ್ಳನನ್ನು ಸಿಸಿ ಕ್ಯಾಮರಾ ದೃಶ್ಯದ ಸುಳಿವಿನ ಆಧಾರದಲ್ಲಿ ಶ್ರೀರಾಂಪುರ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ತಮಿಳುನಾಡು ಚಂದದರಿಪೇಟ್ ನಿವಾಸಿ...

ಗುತ್ತಿಗೆ ಅವಧಿ ಮುಗಿದಿದ್ದರೂ ಸೇವೆ: ದೆಹಲಿ ಮೂಲದ ಕಂಪನಿಯಿಂದ ಕಾವೇರಿ ವೆಬ್​ಸೈಟ್ ನಿರ್ವಹಣೆ

ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ ವೆಬ್​ಸೈಟ್ ತಿರುಚಿದ ಪ್ರಕರಣದ ಬೆನ್ನಲ್ಲೆ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ಕಾವೇರಿ ತಂತ್ರಾಂಶದ ಮುಖಾಂತರ ನೋಂದಣಿ...

ಬೆಂಗಳೂರು: ತಡವಾದ ರೈಲು, ಪರೀಕ್ಷಾ ಕೇಂದ್ರಗಳ ಬದಲಾವಣೆ, ಸಿಬ್ಬಂದಿ ಕಿರಿಕಿರಿಯಂತಹ ಎಡವಟ್ಟು, ಗೊಂದಲಗಳಿಂದಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಬರೆಯುವ ಅವಕಾಶ ಕಳೆದುಕೊಂಡ ನೂರಾರು ವಿದ್ಯಾರ್ಥಿಗಳ ಕನಸು ನುಚ್ಚುನೂರಾಗಿದೆ.

ಭಾನುವಾರ ಬೆಂಗಳೂರಿನಲ್ಲಿ ನಡೆದ ಪರೀಕ್ಷೆ ಎದುರಿಸಲು ಉತ್ತರ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಶನಿವಾರ ಹಂಪಿ ಎಕ್ಸ್​ಪ್ರೆಸ್ ರೈಲಿನಿಂದ ಹೊರಟಿದ್ದರು. ಪೂರ್ವ ನಿಗದಿಯಂತೆ ಈ ರೈಲು ಶನಿವಾರ ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಗುಂತಕಲ್-ಅನಂತಪುರ ಮಾರ್ಗವಾಗಿ ಸಂಚರಿಸಿ ಭಾನುವಾರ ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪಬೇಕಿತ್ತು. ಆದರೆ, ಆ ಮಾರ್ಗದಲ್ಲಿನ ಹಳಿ ದುರಸ್ತಿಯಿದ್ದ ಕಾರಣ ಚಿತ್ರದುರ್ಗ, ಕಡೂರು ಮಾರ್ಗವಾಗಿ ಬಂದ ರೈಲು ಮಧ್ಯಾಹ್ನ 2.30ಕ್ಕೆ ಬೆಂಗಳೂರು ತಲುಪಿದೆ. ಹೀಗಾಗಿ ಗದಗ, ಹುಬ್ಬಳ್ಳಿ, ಕೊಪ್ಪಳ ಸೇರಿ ಉತ್ತರ ಕರ್ನಾಟಕ ವಿವಿಧ ಭಾಗಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡರು.

ಪರೀಕ್ಷಾ ಸಿಬ್ಬಂದಿ ಕಿರಿಕಿರಿ: ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಆರ್ವಿು ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಒಂದೆರಡು ನಿಮಿಷ ತಡವಾಗಿ ಬಂದ 3 ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಎಷ್ಟೇ ಕೇಳಿ ಕೊಂಡರೂ ಪರೀಕ್ಷೆ ಬರೆಯಲು ಬಿಡಲಿಲ್ಲ.

ಮತ್ತೊಂದು ಅವಕಾಶಕ್ಕೆ ಆಗ್ರಹ: ರೈಲು ತಡವಾಗಿ ತಲುಪಿದ ಪರಿಣಾಮ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ರೈಲ್ವೆ ಇಲಾಖೆ ಪರವಾಗಿ ಕೇಂದ್ರ ಸರ್ಕಾರ ಹೊಣೆ ಹೊತ್ತು, ಮರು ಪರೀಕ್ಷೆ ನಡೆಸಿ ಲೋಪವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಡಿಬೇಡಿದ ವಿದ್ಯಾರ್ಥಿಗಳು: ಮಾಮೂಲಿ ಯಂತೆ ಬೆಳಗ್ಗೆ 7 ಗಂಟೆಗೆ ತಲುಪಬೇಕಿದ್ದ ರೈಲು 2 ಗಂಟೆ ವಿಳಂಬವಾಗಿ ತಲುಪಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದರು. ಆದರೆ, ಕ್ರಾಸಿಂಗ್ ಹೆಚ್ಚಾಗಿದ್ದ ಕಾರಣ ಮಾರ್ಗ ಮಧ್ಯದಲ್ಲಿಯೇ 40 ನಿಮಿಷದಿಂದ 1 ಗಂಟೆವರೆಗೆ ರೈಲು ನಿಲ್ಲುವಂತಾಗಿತ್ತು. ಅದರಲ್ಲೂ ಕಡೂರು- ಅರಸೀಕೆರೆ ಮಾರ್ಗದಲ್ಲಿ 1 ಗಂಟೆ ರೈಲು ನಿಂತಿತ್ತು.

ರೈಲ್ವೆ ಇಲಾಖೆ ನಿರ್ಲಕ್ಷ್ಯಂದ ನನ್ನ ಮಗನ ಭವಿಷ್ಯ ಹಾಳಾಗುತ್ತಿದ್ದು, ಕೂಡಲೆ ಪರೀಕ್ಷಾ ಪ್ರಾಧಿಕಾರ ರೈಲ್ವೆ ಇಲಾಖೆಯಿಂದ ಮಾಹಿತಿ ಪಡೆದು ಅನ್ಯಾಯವಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಮಾಡಬೇಕು.

| ವೆಂಕಟರೆಡ್ಡಿ ಪಾಲಕರು

ಪ್ರಧಾನಿ ಹಾಗೂ ರೈಲ್ವೆ ಸಚಿವರು ಕೂಡಲೇ ಮಧ್ಯಪ್ರವೇಶಿಸಿ, ರೈಲು ತಡವಾಗಿ ಬಂದಿದ್ದರಿಂದ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಮಾಡಿಕೊಡಲು ಸೂಕ್ತ ಕ್ರಮಕೈಗೊಳ್ಳಬೇಕು.

| ಎಚ್.ಡಿ. ಕುಮಾರಸ್ವಾಮಿ ಸಿಎಂ

ಮಾರ್ಗ ಬದಲಾವಣೆ ಮಾಹಿತಿ ನೀಡಲಾಗಿತ್ತು

ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಮಾರ್ಗ ಬದಲಾದ್ದರಿಂದ ಸಂಚಾರ ವಿಳಂಬವಾಗಿದೆ. ನಿಗದಿತ ಮಾರ್ಗದ ಪ್ರಕಾರ ಈ ರೈಲು ಬಳ್ಳಾರಿ-ಗುಂತಕಲ್- ಧರ್ವವರಂ- ಪೆನುಕೊಂಡ-ಯಲಹಂಕ ಮಾರ್ಗದ ಮೂಲಕ ಬೆಂಗಳೂರಿಗೆ ಬರುತ್ತದೆ. ಈ ಮಾರ್ಗದ ಗುಂತಕಲ್-ಕಲ್ಲೂರು ನಡುವಿನ ಜೋಡಿ ಹಳಿಯ ಇಂಟರ್ ಲಾಕ್ ಕಾಮಗಾರಿ ನಡೆಯುತ್ತಿರುವುದರಿಂದ ಮಾರ್ಗ ಬದಲಾವಣೆ ಮಾಡಲಾಗಿದೆ. ಆದ್ದರಿಂದ ರೈಲು ಬಳ್ಳಾರಿ-ರಾಯದುರ್ಗ- ಚಿಕ್ಕಜಾಜೂರು- ಅರಸಿಕೆರೆ- ತುಮಕೂರು ಮಾರ್ಗವಾಗಿ ಬೆಂಗಳೂರು ಸೇರಿದೆ. ಮಾರ್ಗ ಬದಲಾವಣೆಯಿಂದ ರೈಲಿನ ಸಂಚಾರ 120 ಕಿ.ಮೀ. ಹೆಚ್ಚಾಗಿದೆ. ಅದರ ಜತೆಗೆ ಮೇ 4ರಂದು ಮೈಸೂರು-ಹುಬ್ಬಳ್ಳಿ ಹಂಪಿ ಎಕ್ಸ್​ಪ್ರೆಸ್ ರೈಲು ಹುಬ್ಬಳ್ಳಿಗೆ ಬರುವುದು 2.55 ಗಂಟೆ ವಿಳಂಬವಾಗಿದೆ. ಅದರ ಪರಿಣಾಮ ಸಂಜೆ 6.20ಕ್ಕೆ ಹುಬ್ಬಳ್ಳಿಯಿಂದ ಹೊರಡಬೇಕಿದ್ದ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್​ಪ್ರೆಸ್ ರೈಲು ರಾತ್ರಿ 8.20ಕ್ಕೆ ಎರಡು ತಾಸು ವಿಳಂಬವಾಗಿ ಹೊರಟಿತ್ತು. ಅದಕ್ಕೂ ಮುನ್ನ ರೈಲು ಹೊರಡುವ ಸಮಯದ ಬದಲಾವಣೆ ಹಾಗೂ ಹಾಗೂ ಮಾರ್ಗ ಬದಲಾವಣೆ ಕುರಿತಂತೆ ಮುಂಗಡ ಟಿಕೆಟ್ ಬುಕಿಂಗ್ ಮಾಡಿದ್ದ ಪ್ರಯಾಣಿಕರ ಮೊಬೈಲ್​ಗಳಿಗೆ ಸಂದೇಶ ಕಳುಹಿಸಲಾಗಿತ್ತು ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಪರೀಕ್ಷಾ ಕೇಂದ್ರಗಳೇ ಬದಲು!

ರೈಲು ತಡವಾಗಿದ್ದು ಒಂದೆಡೆಯಾದರೆ ಪರೀಕ್ಷಾ ಕೇಂದ್ರಗಳೇ ಬದಲಾಗಿದ್ದು ಮತ್ತೊಂದು ಎಡವಟ್ಟು. ಸಿಬ್ಬಂದಿ ಬೇಜವಾಬ್ದಾರಿತನದಿಂದಾಗಿ ಯಲಹಂಕದ ಆವಲಹಳ್ಳಿ ಕೇಂದ್ರದ ವಿದ್ಯಾರ್ಥಿಗಳನ್ನು ಕೊನೇ ಕ್ಷಣದಲ್ಲಿ ಕೂಡ್ಲುಗೇಟ್ ಬಳಿಯ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು ಕೇಂದ್ರಕ್ಕೆ ಬದಲಾಯಿಸಲಾಗಿತ್ತು. ಅದೇ ರೀತಿ ಕಲಬುರಗಿಯ ಎಸ್​ಬಿಆರ್​ಪಿಯು ಕಾಲೇಜಿನ ಎರಡು ಕೇಂದ್ರಗಳನ್ನು ದಿಢೀರ್ ಬದಲು ಮಾಡಿ ಸೇಂಟ್ ಗ್ಸೇವಿಯರ್ ಮತ್ತು ನೂತನ್ ವಿದ್ಯಾಲಯಕ್ಕೆ ವರ್ಗಾಯಿಸಲಾಗಿತ್ತು. ಮೈಸೂರಿನ ಕೇಂದ್ರೀಯ ವಿದ್ಯಾಲಯ ಪರೀಕ್ಷಾ ಕೇಂದ್ರವನ್ನು ಅದೇ ಶಾಲೆಯ ಹೊಸ ಪರೀಕ್ಷಾ ಕೇಂದ್ರಕ್ಕೆ ಬದಲಾಯಿಸಲಾಗಿತ್ತು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮೊದಲೇ ಮಾಹಿತಿ ನೀಡಿಲ್ಲವಾದ್ದರಿಂದ ಪರೀಕ್ಷಾ ಕೇಂದ್ರ ಹುಡುಕಲು ಬೆವರು ಹರಿಸಬೇಕಾಯಿತು.

ಪ್ರಧಾನಿಗೇ ಗದರಿದ ಸಿದ್ದು

ನೀಟ್ ಎಕ್ಸಾಂನಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧವೇ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಹಂಪಿ ಎಕ್ಸ್​ಪ್ರೆಸ್ ತಡವಾಗಿ ಆಗಮಿಸುತ್ತಿದೆ ಎಂಬ ಸುದ್ದಿ ಬಿತ್ತರವಾದ ಕೂಡಲೇ ಟ್ವೀಟ್ ಮಾಡಿದ ಸಿದ್ದರಾಮಯ್ಯ, ‘ಇತರರ ಸಾಧನೆಗೂ ಶ್ರೇಯ ಪಡೆದುಕೊಳ್ಳುವ ನೀವು, ನಿಮ್ಮ ಸಂಪುಟದ ಸಚಿವರೊಬ್ಬರ ಅಸಾಮರ್ಥ್ಯಕ್ಕೂ ಹೊಣೆ ಹೊರುತ್ತೀರಾ? ರೈಲು ತಡವಾಗಿ ಆಗಮಿಸಿದ್ದರಿಂದ ನೂರಾರು ವಿದ್ಯಾರ್ಥಿಗಳಿಗೆ ನೀಟ್ ಬರೆಯಲು ಸಮಸ್ಯೆಯಾಗುವ ಸಾಧ್ಯತೆಯಿದೆ. ಮುಂದಿನ ಕೆಲವು ದಿನಗಳಾದರೂ ಸರಿಯಾಗಿ ಕೆಲಸ ಮಾಡಲು ಪಿಯೂಷ್ ಗೋಯೆಲ್​ಗೆ ಹೇಳಿ. ಮುಂದೆ ನಾವು ಸರಿಮಾಡುತ್ತೇವೆ. ಮರುಪರೀಕ್ಷೆಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳು, ಪಾಲಕರ ಉದಾಸೀನವೂ ಕಾರಣ

ನೀಟ್ ಪರೀಕ್ಷೆಯಿಂದ ವಂ0ಚಿತರಾಗಿದ್ದಕ್ಕೆ ರೈಲ್ವೆ ಇಲಾಖೆಯನ್ನು ದೂರುತ್ತಿರುವ ವಿದ್ಯಾರ್ಥಿ, ಪಾಲಕರಿಗಿದು ಎಚ್ಚರಿಕೆ ಪಾಠ. ತಿಂಗಳು ಮೊದಲೇ ಪರೀಕ್ಷೆ ದಿನಾಂಕ ತಿಳಿದಿದ್ದರೂ ಮೊದಲೇ ಸಿದ್ಧರಾಗಿ ಒಂದು ದಿನ ಮೊದಲೇ ವ್ಯವಸ್ಥೆ ಮಾಡಿಕೊಂಡು ಪರೀಕ್ಷೆ ಬರೆದರೆ ಇಂತಹ ಎಡವಟ್ಟುಗಳಾಗುವುದಿಲ್ಲ. ಈ ಹಿಂದೆಯೂ ಇದೇ ರೀತಿ ರೈಲು ವಿಳಂಬವಾಗಿ ಪರೀಕ್ಷೆ ತಪ್ಪಿಸಿಕೊಂಡ ಪ್ರಕರಣ ಕಣ್ಮುಂದೆ ಇವೆ. ಇನ್ನಾದರೂ ವಿದ್ಯಾರ್ಥಿಗಳು, ಪಾಲಕರು ಎಚ್ಚೆತ್ತುಕೊಳ್ಳಬೇಕು.

- Advertisement -

Stay connected

278,503FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....