22.8 C
Bengaluru
Saturday, January 18, 2020

ಹೃದಯಾಘಾತ ನಿಯಂತ್ರಣದ ಮಾರ್ಗೋಪಾಯಗಳು

Latest News

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ಹೃದಯಾಘಾತ ಬರಲು ಕಾರಣಗಳು ಎರಡು.

1) ನಿಯಂತ್ರಿಸಲಾಗದ ಕಾರಣ (non-modifiable risk factors)

2) ನಿಯಂತ್ರಿಸಬಲ್ಲ ಕಾರಣ (modifiable risk factors).

ಅವುಗಳಲ್ಲಿ ನಿಯಂತ್ರಿಸಬಲ್ಲ ಕಾರಣಗಳನ್ನು ತಿಳಿಯೋಣ.

1) ತಂಬಾಕು ಸೇವನೆ: ಸೇದುವ, ಬಾಯಿಯಲ್ಲಿ ಅಗಿಯುವ ರೀತಿಯಲ್ಲಿ ತಂಬಾಕು ಬಳಕೆ ಮಾರಣಾಂತಿಕ. ಹದಿಹರೆಯದಲ್ಲಿ ಪ್ರಾರಂಭಿಸಿದ ತಂಬಾಕು ಸೇವನೆ ಯೌವನಾವಸ್ಥೆಯಲ್ಲಿ ಪ್ರಾರಂಭಿಸಿದಕ್ಕಿಂತ ಹೆಚ್ಚು ಅಪಾಯಕಾರಿ. ಬೀಡಿ, ಸಿಗರೇಟ್ ಸೇದದೆ ಇದ್ದರೂ ಮನೆಯಲ್ಲಿರುವ ಜನರಿಗೆ ಮತ್ತು ಮಕ್ಕಳಿಗೆ ಅದರ ಹೊಗೆ ಅಪಾಯಕಾರಿ ಇದ್ದು, ಹೃದಯಾಘಾತವಾಗುವ ಸಂಭವ ಹೆಚ್ಚು (passive smoking).

ತಂಬಾಕು ಸೇವನೆಯಿಂದ ರಕ್ತನಾಳದ ಒಳಮೈಗೆ ಹಾನಿ ಆಗುವುದಲ್ಲದೆ ಕೊಲೆಸ್ಟ್ರಾಲ್ ಶೇಖರಣೆ ಹೆಚ್ಚಾಗಿ ರಕ್ತ ಹೆಪ್ಪುಗಟ್ಟುತ್ತದೆ. ತಂಬಾಕಿನಿಂದ ಹೃದಯ ಬಡಿತ ಹಾಗೂ ಬಿಪಿ ಕೂಡ ಹೆಚ್ಚುತ್ತದೆ. ಇತ್ತೀಚೆಗೆ ಸಿಗರೇಟ್ ಸೇವನೆಯಲ್ಲಿ ಯುವತಿಯರ ಸಂಖ್ಯೆ ಹೆಚ್ಚಾಗಿದ್ದು, ಇವರಲ್ಲಿ ಹೃದಯಾಘಾತದ ಸಂಭವ ಯುವಕರಿಗಿಂತ ಹೆಚ್ಚು. ಗರ್ಭಿಣಿಯರಿಗೆ ಮತ್ತು ಮಗುವಿಗೆ ಕೂಡ ಹಾನಿಕಾರಕ. ಆದರೆ ಸಿಗರೇಟ್ ಸೇವಿಸುವುದನ್ನು ಪೂರ್ತಿಯಾಗಿ ನಿಲ್ಲಿಸಿದಲ್ಲಿ ಕಾಲಾಂತರದಲ್ಲಿ ಹೃದಯಾಘಾತದ ಸಂಭವ ಸಿಗರೇಟ್ ಸೇವನೆ ಮಾಡದೆ ಇದ್ದವರಷ್ಟೇ ಕಡಿಮೆಯಾಗುತ್ತದೆ. ತಂಬಾಕಿನಿಂದ ನಪುಂಸಕತ್ವ (impotency), ಪಾರ್ಶ್ವವಾಯು ಬರುವ ಸಂಭವ ತೀವ್ರ ಹೆಚ್ಚು.

2) ಆಹಾರ: ಜಾಸ್ತಿ ಕೊಬ್ಬುಯುಕ್ತ ಆಹಾರದಿಂದ ಹೃದಯಾಘಾತವಾಗುವ ಸಂಭವ ಜಾಸ್ತಿ. ಶಾಕಾಹಾರಿಗಳು ಮಾಂಸಾಹಾರಿಗಳಿಗಿಂತ ಕಡಿಮೆ ಕೊಬ್ಬು ಸೇವನೆ ಮಾಡುತ್ತಾರೆ ಎಂಬ ಕಲ್ಪನೆ ತಪ್ಪು. ದಿನಕ್ಕೆ ಎರಡು ತರಹದ ಹಣ್ಣು, ಕಾಯಿಪಲ್ಯೆ ಮತ್ತು ಕಡಿಮೆ ಕೊಬ್ಬುಯುಕ್ತ ಪದಾರ್ಥದಿಂದ ಹೃದಯಾಘಾತದ ಪ್ರಮಾಣ ಶೇ. 30ರಷ್ಟು ಕಡಿಮೆ. ಮಾಂಸಾಹಾರಿಗಳಿಗೆ ಮೀನು ಅತಿ ಉತ್ತಮವಾದದು. ಕೆಂಪು ಮಾಂಸ (red meat) ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಒಮ್ಮೆ ಕಾಯಿಸಿದ ಎಣ್ಣೆಯನ್ನು ಮತ್ತೆ ಮತ್ತೆ ಉಪಯೋಗಿಸುವುದರಿಂದ ರಕ್ತದಲ್ಲಿಯ ಕೊಲೆಸ್ಟ್ರಾಲ್ ಪ್ರಮಾಣ ತೀವ್ರವಾಗಿ ಹೆಚ್ಚುತ್ತದೆ (transfat).

ಬೇಕರಿ ಪದಾರ್ಥಗಳ ಸೇವನೆ ನಿಯಂತ್ರಣದಲ್ಲಿಡಿ. ದಿನಕ್ಕೆ ಎರಡರಿಂದ ಮೂರು ಚಮಚ ತುಪ್ಪವನ್ನು ಉಪಯೋಗಿಸಬಹುದು. ಅಡುಗೆ ಮಾಡುವ ಎಣ್ಣೆಗಳಲ್ಲಿ ಕುಸುಬಿ, ಸೇಂಗಾ, ಎಳ್ಳು, ರಾಯಿಸ್​ಬ್ರಾನ್, ಸೂರ್ಯಕಾಂತಿ ಎಣ್ಣೆ ಉಪಯೋಗಕರ. ವಿವಿಧ ಎಣ್ಣೆಗಳ ಮಿಶ್ರಣಗಳನ್ನು ಸಹ ಉಪಯೋಗಿಸಬಹುದು. ಮೇಲಿಂದ ಮೇಲೆ ಅಡುಗೆ ಎಣ್ಣೆಗಳನ್ನು ಬದಲಾಯಿಸುವುದು ಉತ್ತಮ. ಕರಿದ ಪದಾರ್ಥ ಸೇವನೆ ಕಡಿಮೆ ಇರಲಿ. ಜಂಕ್​ಫುಡ್​ನಿಂದ ದೂರವಿರಿ.

3) ಬಿಪಿ: ಅಧಿಕ ರಕ್ತದ ಒತ್ತಡದಿಂದ ಹೃದಯಾಘಾತವು 2-3 ಪಟ್ಟು ಜಾಸ್ತಿ. ಬಿಪಿಯ ಲಕ್ಷಣಗಳು ಕಂಡುಬಾರದ್ದರಿಂದ ಇದಕ್ಕೆ ಮೌನ ಹಂತಕ (ಠಜ್ಝಿಛ್ಞಿಠಿ kಜ್ಝಿ್ಝ್ಟ ಎಂದೇ ಹೆಸರು. 25 ವರ್ಷ ಮೇಲ್ಪಟ್ಟವರು ಬಿಪಿಯನ್ನು ನಿಯತವಾಗಿ ಪರೀಕ್ಷಿಸಿಕೊಳ್ಳಿ. ಇದನ್ನು ಔಷಧಗಳಿಂದ ನಿಯಂತ್ರಣದಲ್ಲಿಡಬಹುದು. ಆದರೆ ಪೂರ್ತಿಯಾಗಿ ಗುಣಪಡಿಸಲಾಗದು. ಅದಕ್ಕೆಂದೇ ಒಮ್ಮೆ ಪ್ರಾರಂಭಿಸಿದ ಚಿಕಿತ್ಸೆಯನ್ನು ಜೀವನಪರ್ಯಂತ ತೆಗೆದುಕೊಳ್ಳಬೇಕಾಗಬಹುದು.

4) ಮಧುಮೇಹ: ಮಧುಮೇಹ ಇರುವವರಲ್ಲಿ ಹೃದಯಾಘಾತದ ಸಂಭವ ಸಾಮಾನ್ಯರಿಗಿಂತ ನಾಲ್ಕು ಪಟ್ಟು ಹೆಚ್ಚು. ನರದೌರ್ಬಲ್ಯದಿಂದ ತೀವ್ರ ಎದೆನೋವೂ ಕಂಡುಬರುವುದಿಲ್ಲ. ಇದರಿಂದಾಗಿ ಮರಣಾಂತಕ ಸಂಭವ ಹೆಚ್ಚು. ಮಧುಮೇಹ ನಿಯಂತ್ರಿಸಿಕೊಂಡಲ್ಲಿ, ಹೃದಯಾಘಾತದ ಲಕ್ಷಣ ಕಂಡಾಗ ತಕ್ಕ ಚಿಕಿತ್ಸೆಯಿಂದ ಗುಣಮುಖವಾಗುವ ಸಾಧ್ಯತೆ ಜಾಸ್ತಿ.

5) ವ್ಯಾಯಾಮ: ದೈಹಿಕ ಶ್ರಮದ ಲಾಭಗಳು ಅಪಾರ. ನಿಯತ ವ್ಯಾಯಾಮ ಅಗತ್ಯವಾಗಿದ್ದು, ತೀವ್ರ ನಡಿಗೆ, ಈಜು, ಸೈಕಲ್ ತುಳಿಯುವುದು, ಟೆನಿಸ್ ಮೊದಲಾದ ದೈಹಿಕ ಶ್ರಮಗಳು ಉಪಯುಕ್ತ. ತೀವ್ರ ನಡಿಗೆ ಸರಳ ವ್ಯಾಯಾಮವಾಗಿದ್ದು ಇದಕ್ಕೆ ಬೇಕಾದುದು ಎರಡೇ; 1) ಉತ್ತಮ ಪಾದರಕ್ಷೆ(shoes) 2) ಛಲ. ನಿತ್ಯ 30-45 ನಿಮಿಷಗಳಂತೆ ವಾರಕ್ಕೆ ಐದು ದಿನ ತೀವ್ರ ನಡಿಗೆ ಮಾಡಬೇಕು. ಯುವಕರು ಜಿಮ್​ಗೆ ಹೋಗುವುದು ಉತ್ತಮ.

40 ವರ್ಷ ಮೇಲ್ಪಟ್ಟವರು ವ್ಯಾಯಾಮ ಪ್ರಾರಂಭಿಸುವ ಮುನ್ನ ತಜ್ಞ ವೈದ್ಯರಿಂದ ಹೃದಯದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಸತತ 45 ನಿಮಿಷ ನಡಿಗೆ ಆಗದಿದ್ದಲ್ಲಿ ದಿನಕ್ಕೆ ಮೂರು ಬಾರಿ 10-15 ನಿಮಿಷ ನಡಿಗೆ ಮಾಡಬಹುದು.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...