ಸಿರವಾರ: ಬಿಎಸ್‌ಎಫ್‌ನಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮ ಹರವಿಗೆ ಮರಳಿದ ತಿಮ್ಮಪ್ಪ ಗುಜ್ಜಲ್ ಅವರನ್ನು ಭಾನುವಾರ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಿವೃತ್ತ ನೌಕರರ ಸಭೆ 12ರಂದು
ತಿಮ್ಮಪ್ಪ ಗುಜ್ಜಲ್ ಮಾತನಾಡಿ, ಮೂರೂವರೆ ದಶಕ ಭಾರತ ಮಾತೇ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ಯುವಕರು ದೇಶ ಸೇವೆ ಮಾಡುವುದಕ್ಕೆ ಮುಂದೆ ಬರಬೇಕು. ದುಶ್ಚಟಗಳಿಗೆ ಬಲಿಯಾಗದೆ ದೇಹವನ್ನು ಸದೃಢವಾಗಿ ಇಟ್ಟುಕೊಂಡು ಸೈನ್ಯಕ್ಕೆ ಸೇರಬೇಕು. ಪಾಲಕರು ಮಕ್ಕಳಿಗೆ ದೇಶಭಕ್ತಿ, ಸಂಸ್ಕಾರ ಕಲಿಸಬೇಕು ಎಂದರು.
ನೀರಮಾನ್ವಿಯಿಂದ ಹರವಿ ಗ್ರಾಮದವರೆಗೆ ಊರಿನ ಪ್ರಮುಖರು, ಯುವಕರು ನಿವೃತ್ತ ಯೋಧ ತಮಪ್ಪ ಗುಜ್ಜಲ್ ಅವರನ್ನು ತೆರೆದ ವಾಹನದಲ್ಲಿ ಅದ್ದೂರಿಯಾಗಿ ಮೆರವಣಿಗೆಯಲ್ಲಿ ಕರೆತಂದರು. ವೇದಿಕೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರಾಜ್ಯ ಬೇಡರ ಸಮಿತಿ ಅಧ್ಯಕ್ಷ ಅಂಬಣ್ಣ ನಾಯಕ ಗುಜ್ಜಲ, ಮಾಜಿ ಸೈನಿಕ ಜೆಲ್ಲಿ ಹನುಮಂತಪ್ಪ ನೀರಮಾನ್ವಿ, ಪ್ರಮುಖರಾದ ಜೆಲ್ಲಿ ಆಂಜನೇಯ ನೀರಮಾನ್ವಿ, ಡಾ.ಅಂಬಿಕಾ ಮಧುಸೂದನ್ ನಾಯಕ, ಬಸವರಾಜ ಮುಷ್ಟೂರು, ಜೆ.ಸಂಜೀವ, ಹನುಮಂತ ನಸಲಾಪೂರ್, ಶಿವರಾಜ ಕರಡಿಗುಡ್ಡ, ರಂಗನಗೌಡ ವೀರಾಪುರ, ಗೋಪಾಲ್ ಬೆಟ್ಟದೂರು, ಪರಿಮಳ ಕೃಷ್ಣಪ್ಪ, ದಿವ್ಯಾ ಹನುಮಂತ, ಲಕ್ಷ್ಮೀ ಜೆಲ್ಲಿ, ರತ್ನಮ್ಮ ಮಂಜುನಾಥ ಇತರರಿದ್ದರು.