More

    ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ನಿಯಂತ್ರಿಸಲು ಯೋಧರ ನಿಯೋಜನೆ? ನಿಜಾಂಶ ಇಲ್ಲಿದೆ ನೋಡಿ..

    ದಿಸ್ಪುರ: ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸೇನೆಯ ಯೋಧರನ್ನು ನಿಯೋಜನೆ ಮಾಡುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯೊಂದು ಹರಿದಾಡಿತ್ತು. ಅದು ನಿಜವೇ? ನಿಜಕ್ಕೂ ಸಿಎಂ ಇಂತದ್ದೊಂದು ನಿರ್ಧಾರ ತೆಗೆದುಕೊಂಡರೆ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ಜನಸಂಖ್ಯೆ ನಿಯಂತ್ರಣದ ಬಗ್ಗೆ ಹಿಮಂತ್ ಬಿಸ್ವಾ ಅವರು ಮಾತನಾಡಿರುವುದು ಸತ್ಯ. ಜುಲೈ 19ರಂದು ಈ ಬಗ್ಗೆ ಅವರು ಮಾತನಾಡಿದ್ದಾರೆ. ಮುಸ್ಲಿಂ ಧರ್ಮದವರು ಹೆಚ್ಚಿರುವ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಿದೆ. ಆ ಕಾರಣ ಅಂತಹ ಪ್ರದೇಶಗಳಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಒಂದು ಸಾವಿರ ಯುವಕರನ್ನು ನೇಮಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

    ಈ ಸಾವಿರ ಯುವಕರ ಗುಂಪಿಗೆ ಪಾಪುಲ್ಯೇಷನ್ ಆರ್ಮಿ ಎನ್ನುವ ಹೆಸರಿನಿಂದ ಕರೆಯುವುದಾಗಿ ಅವರು ತಿಳಿಸಿದ್ದಾರೆ. ಈ ಹೇಳಿಕೆಯನ್ನು ಸ್ವಲ್ಪ ತಿರುಚಿ, ಮುಸ್ಲಿಂ ಜನಸಂಖ್ಯೆ ನಿಯಂತ್ರಣಕ್ಕೆ ಸೇನೆ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ಎಂದು ಬಿತ್ತರಿಸಲಾಗಿದೆ ಎಂದು ತಿಳಿಸಲಾಗಿದೆ. ಇಂಡಿಯಾ ಟುಡೇ ಟೀಂ ಈ ಫ್ಯಾಕ್ಟ್​ ಚೆಕ್ ಮಾಡಿದೆ. (ಏಜೆನ್ಸೀಸ್)

    ಈಶಾನ್ಯ ಭಾರತದವರಾಗಿ ಪದಕ ಗೆದ್ದರೆ ಮಾತ್ರ ಭಾರತೀಯರಾಗುತ್ತೀರಿ, ಇಲ್ಲವಾದರೆ ನಿಮ್ಮ ಹೆಸರೇ ಬೇರೆ!

    ಮೀರಾಬಾಯಿ ಸ್ಫೂರ್ತಿ: ವೇಟ್​ ಲಿಫ್ಟ್ ಮಾಡಿದ ಪುಟಾಣಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಾನು

    ಮಗಳ ಲವರ್​ ಜತೆ ತಾಯಿಯ ಅಕ್ರಮ ಸಂಬಂಧ! ಈ ರಹಸ್ಯ ಭೇದಿಸಲು ಹೋದವನ ಬರ್ಬರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts