ಅಥಣಿ: ಸೈನ್ಯ ಸೇರಿದ ಯುವಕರಿಗೆ ಸತ್ಕಾರ

ಅಥಣಿ: ಸ್ಥಳೀಯ ಡಾಲ್ಪಿನ್ ಅಕಾಡೆಮಿಯ ಸೈನಿಕ ಪೂರ್ವಸಿದ್ಧತಾ ತರಬೇತಿ ಕೇಂದ್ರದಿಂದ ತಾಲೂಕಿನ ಐವರು ಯುವಕರು ಸೇನೆಗೆ ಭರ್ತಿಯಾಗಿದ್ದಾರೆ ಎಂದು ಅಕಾಡೆಮಿ ಸಂಚಾಲಕ ನಿವೃತ್ತ ಯೋಧ ಸಿದ್ದರಾಜ ಬೋರಾಡೆ ಹೇಳಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತೀಯ ಸೈನಿಕ ಸೇವೆಯಲ್ಲಿ ಜಿಲ್ಲೆಯ ಮತ್ತು ತಾಲೂಕಿನ ಕೊಡುಗೆ ಅಪಾರವಾಗಿದೆ. ಅತೀ ಹೆಚ್ಚು ಸೈನಿಕರು ಅಥಣಿ ತಾಲೂಕಿನವರಿದ್ದು, ಅಕಾಡೆಮಿ ಮೂಲಕ ಗ್ರಾಮೀಣ ಮತ್ತು ಪಟ್ಟಣದ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ ಸೇನೆಗೆ ಸೇರುವಂತೆ ಪ್ರೇರಣೆ,ಮಾರ್ಗದರ್ಶನ ನೀಡುವ ಕೇಂದ್ರ ತೆರೆದಿದ್ದೇವೆ ಎಂದರು.

ಫೆಬ್ರವರಿಯಲ್ಲಿ ಬೆಳಗಾವಿ ಮರಾಠಾ ಲೈಟ್ ಇನ್‌ಫೆಂಟ್ರಿ ತರಬೇತಿ ಪರೀಕ್ಷೆಯಲ್ಲಿ ಉತ್ತೀಣರಾಗಿರುವ ಮದಬಾವಿಯ ಸಾಗರ ಭಂಡಾರೆ, ಮೋಳೆ ಗ್ರಾಮದ ನಾಗರಾಜ ವಾಗಮೋಡೆ, ಶಿವಾನಂದ ಕಣೂರೆ, ಆದಿನಾಥ ನಿಲಕರ ಮತ್ತು ಗೂಗವಾಡದ ಸೋಮಯ್ಯ ಹಿರೇಮಠ ಸೇನೆಗೆ ಭರ್ತಿಯಾಗಿದ್ದಾರೆ ಎಂದು ತಿಳಿಸಿದರು. ಸೈನ್ಯಕ್ಕೆ ಸೇರಿದ ಯುವಕರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *