25.5 C
Bangalore
Monday, December 16, 2019

ಮುಂದುವರಿದ ಶೋಧ, ಮತ್ತೆ 4 ಶವ ಪತ್ತೆ

Latest News

ಜೆಡಿಎಸ್ ಕಾರ್ಯಕರ್ತರನ್ನು ಸೂರಜ್ ರೇವಣ್ಣ ಪ್ರಚೋದಿಸಿರುವ ಆಡಿಯೋ ಇದೆ, ಮಾಜಿ ಸಚಿವ ಎ.ಮಂಜು ಹೊಸ ಬಾಂಬ್

ಹಾಸನ: ಕೆಆರ್ ಪೇಟೆ ಉಪಚುನಾವಣೆ ಸಂದರ್ಭದಲ್ಲಿ ನಂಬಿಹಳ್ಳಿಯಲ್ಲಿ ನಡೆದ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಗಲಾಟೆ ಪ್ರಕರಣದ ವೇಳೆ , ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಸೂರಜ್...

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ ಮಾಡಿದ : ಸಾಮರಸ್ಯದ ಕಾರ್ಯಕ್ರಮ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ ಬಡಿಸುವ ಮೂಲಕ ಸಾಮರಸ್ಯಕ್ಕೆ ಮುನ್ನುಡಿ ಬರೆದರು....

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮಣ್ಣು ಪಾಲಾಗಿದ್ದವರ ಪೈಕಿ ಶನಿವಾರ ನಾಲ್ವರ ಮೃತದೇಹ ಪತ್ತೆಯಾಗಿದ್ದು, ಆ ಮೂಲಕ ಈ ವರೆಗೆ ಒಟ್ಟು 21 ಶವ ಪತ್ತೆ ಆದಂತಾಗಿದೆ.

- Advertisement -

ರಕ್ಷಣಾ ತಂಡದಿಂದ ಜಿಲ್ಲೆಯ 7 ಸ್ಥಳದಲ್ಲಿ ಶನಿವಾರ ಏಕಕಾಲಕ್ಕೆ ಶವಶೋಧ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ಆ ಪೈಕಿ ಉದಯಗಿರಿ, ಹೆಬ್ಬೆಟ್ಟಗೇರಿ, ಹಾಡಗೆರಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಜತೆಗೆ ಕಾಟಕೇರಿ, ಮುಕ್ಕೋಡ್ಲು, ಹಾದಗೇರಿ, ಕಾಲೂರು, ಜೋಡುಪಾಲ ಗ್ರಾಮದಲ್ಲಿಯೂ ಶೋಧ ಕಾರ್ಯಾಚರಣೆ ನಡೆಯಿತು. ಆ. 19ರಂದು ಭೂಕುಸಿತಕ್ಕೆ ಸಿಲುಕಿದ್ದ ಹೆಬ್ಬಟ್ಟಗೇರಿ ನಿವಾಸಿ ಚಂದ್ರಪ್ಪ ಪೂಜಾರಿ (58), ಆ. 22ರಂದು ನಾಪತ್ತೆಯಾಗಿದ್ದ ಮಕ್ಕಂದೂರು ಉದಯಗಿರಿ ನಿವಾಸಿ ಒ.ಕೆ. ಬಾಬು (56), ಆ. 21ರಂದು ಭೂಕುಸಿತಕ್ಕೆ ಸಿಲುಕಿದ್ದ

ಸೋಮವಾರಪೇಟೆ ತಾಲೂಕು ಹಾಡಗೆರಿ ನಿವಾಸಿ ಫ್ರಾನ್ಸಿ ಮಂತಾರೋ (47) ಶವ ಶನಿವಾರ ಪತ್ತೆಯಾಗಿವೆ. ಆ.17ರಂದು ಹಟ್ಟಿಹೊಳೆಯಲ್ಲಿ ಕಾಣೆಯಾಗಿದ್ದ ಫ್ರಾನ್ಸಿಸ್ ಅಲಿಯಾಸ್ ಅಪ್ಪುವಿನ ಶವ, ಅವರ ಮನೆ ಹಿಂಭಾಗದ 200 ಮೀ. ದೂರದಲ್ಲಿ ಮರಕ್ಕೆ ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಸಿಕ್ಕಿದೆ ಎಂದು ಅವರ ಸಹೋದರಿ ಪೌಲಿನಾ ವಿಜಯವಾಣಿಗೆ ತಿಳಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಡಿಕೇರಿಗೆ ಆಗಮಿಸಿದ್ದಾಗ, ಅಪ್ಪು ಕುಟುಂಬದವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ್ದ ಸಚಿವರು, ನೌಕಾದಳ ಕರೆಸಿ ಕಾಣೆಯಾಗಿರುವ 7 ಜನರನ್ನು ಹುಡುಕುವ ಕಾರ್ಯವನ್ನು ತುರ್ತಾಗಿ ಮಾಡಬೇಕೆಂದು ಆದೇಶಿಸಿದ್ದರು. ಆ ಮೇರೆಗೆ ನೌಕಾದಳದ ಎರಡು ಬೋಟ್​ಗಳು, ಗರುಡ ಫೋರ್ಸ್​ನ ಆರು ಜನರ ತಂಡ, ಎನ್​ಡಿಆರ್​ಎಫ್ ತಂಡ ಹಾಗೂ ಪೊಲೀಸರಿಂದ ಹರದೂರು ಹೊಳೆ, ಹಟ್ಟಿಹೊಳೆಯ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ನಡೆಯಿತು.

ಪರಿಹಾರ ಕೇಂದ್ರದಲ್ಲಿ ಸಾವು: ಕೊಡಗು ಭೂಕುಸಿತದಿಂದ ನಿರಾಶ್ರಿತರಾಗಿ ಸುಳ್ಯ ತಾಲೂಕಿನ ಅರಂತೋಡು ತೆಕ್ಕಿಲ ಸಭಾಭವನದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮಡಿಕೇರಿಯ 2ನೇ ಮೊನ್ನಂಗೇರಿ ನಿವಾಸಿ ಅಂಗಾರ(60) ಎಂಬುವರು ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ.

ಎಲ್ಲ ರದ್ದು

ಸಹಸ್ರಾರು ಗ್ರಾಮಸ್ಥರು ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿರá-ವುದರಿಂದ ಆ.15ರ ಬಳಿಕ ಕೊಡಗು ಜಿಲ್ಲೆಯಲ್ಲಿ ಯಾವುದೇ ಸಭೆ-ಸಮಾರಂಭ ನಡೆಯುತ್ತಿಲ್ಲ. ಪ್ರಕೃತಿ ಮುನಿಸಿಗೆ ಎಲ್ಲ ಕಾರ್ಯಕ್ರಮಗಳೂ ರದ್ದುಗೊಂಡಿದ್ದು, ಜಿಲ್ಲೆಯಲ್ಲಿ ನೆಲೆಸಿರುವ ಮಲೆಯಾಳಿಗಳು ಶನಿವಾರ ಓಣಂ ಆಚರಿಸುತ್ತಿಲ್ಲ. ಕೈಲ್ ಮುಹೂರ್ತ, ಗಣೇಶ ಚತುರ್ಥಿ, ನವರಾತ್ರಿಹಬ್ಬವೂ ಕಳೆಗುಂದುವಂತಾಗಿದೆ. ವಿವಿಧ ಸಮಾಜ, ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ಸಭೆ-ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ. ಒಂದೆರಡು ತಿಂಗಳ ಮಟ್ಟಿಗೆ ಯಾವುದೇ ಸಭೆ, ಸಮಾರಂಭ ನಿಗದಿ ಮಾಡಲು ಯಾರೂ ಸಿದ್ಧರಿಲ್ಲ.

ಅಬ್ಬಿಗಲ್ಲಿನಲ್ಲಿ ಮತ್ತೆ ಸ್ಪೋಟದ ಶಬ್ದ

ಕೊಪ್ಪ ತಾಲೂಕು ಕೊಗ್ರೆಯ ಅಬ್ಬಿಗಲ್ಲು ದೇವಸ್ಥಾನ ಬಳಿ ಶುಕ್ರವಾರ ರಾತ್ರಿ 11ರ ಸುಮಾರಿಗೆ ಮತ್ತೆ ಭಾರಿ ಶಬ್ದ ಕೇಳಿಬಂದಿದೆ. 5 ಕಿ.ಮೀ. ವ್ಯಾಪ್ತಿಯ ಊರುಗಳಾದ ಕೊಗ್ರೆಮನೆ, ಅಣಮಕ್ಕಿ, ನಾಯಕನಕಟ್ಟೆ, ಕಲ್ಲುಗುಡ್ಡೆಗಳಿಗೂ ಶಬ್ದ ಕೇಳಿಸಿದೆ ಎನ್ನಲಾಗಿದೆ. ಹಲವು ದಿನಗಳಿಂದ ಗುಡ್ಡದಲ್ಲಿ ಭಾರಿ ಸ್ಪೋಟದ ಸದ್ದು ಕೇಳಿಸುತ್ತಿದ್ದರಿಂದ ಭೂಗರ್ಭ ಶಾಸ್ತ್ರಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಅವರು ಭೂಮಿಯೊಳಗಿನ ಪ್ರಕ್ರಿಯೆಗಳಿಂದ ಶಬ್ದ ಬರುತ್ತಿದ್ದು, ಇದರಿಂದ ಯಾವುದೇ ತೊಂದರೆ ಇಲ್ಲ ಎಂದಿದ್ದರೂ ಭೂ ಕುಸಿತ ಹಾಗೂ ಪದೇಪದೆ ಶಬ್ದ ಕೇಳಿಸುತ್ತಿರುವುದರಿಂದ ಜನರು ಆತಂಕದಲ್ಲಿದ್ದಾರೆ.

ಸಂತ್ರಸ್ತರಿಗೆ ಆಹಾರ ಕಿಟ್

ಮಡಿಕೇರಿ: ಸಿಎಂ ತಿಳಿಸಿದಂತೆ ಸಂತ್ರಸ್ತರಿಗೆ 50 ಸಾವಿರ ಆಹಾರ ಕಿಟ್ ಉಚಿತವಾಗಿ ವಿತರಿಸಲು ಯೋಜಿಸಲಾಗಿದೆ. ಕಿಟ್ ಖಾಲಿಯಾದರೆ ಮತ್ತೆ ವಿತರಿಸಲಾಗುವುದು ಎಂದು ಆಹಾರ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. ಕಿಟ್​ನಲ್ಲಿ 10 ಕೆಜಿ ಅಕ್ಕಿ, ತಲಾ 1 ಕೆಜಿ ತೊಗರಿ ಬೇಳೆ, ಉಪ್ಪು, ಸಕ್ಕರೆ, 1 ಲೀ. ಅಡುಗೆ ಎಣ್ಣೆ, 5 ಲೀ. ಸೀಮೆಎಣ್ಣೆ ಇರುತ್ತದೆ. ಇದನ್ನು ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಎಲ್ಲ ಕುಟುಂಬಗಳಿಗೆ ನೀಡಲಾಗುತ್ತಿದೆ ಎಂದರು. ಅತಿವೃಷ್ಟಿ ಬಾಧಿತ ಜಿಲ್ಲೆಯ 34 ಗಾ.ಪಂ. ವ್ಯಾಪ್ತಿಯ ಪ್ರತಿ ಕುಟುಂಬಕ್ಕೆ 35 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ ನೀಡಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳನ್ನು ಹೊರತುಪಡಿಸಿ ಗ್ರಾಪಂಗಳ ಮೂಲಕವೂ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗುತ್ತಿರುವುದರಿಂದ ಪ್ರತಿ ಪಂಚಾಯಿತಿಗೆ 1 ಬ್ಯಾರಲ್​ನಂತೆ 220 ಲೀ. ಸೀಮೆಎಣ್ಣೆ ಪೂರೈಕೆ ಮಾಡಲಾಗುತ್ತಿದೆ ಎಂದರು.

ಸಾರಿಗೆ ಇಲಾಖೆ ಅಧಿಕಾರಿ-ನೌಕರರು ಸಿಎಂ ಪರಿಹಾರ ನಿಧಿಗೆ 12.80 ಕೋಟಿ ರೂ. ನೀಡಿದ್ದಾರೆಂದು ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಶಾಲಾ ಕೊಠಡಿಗಳ ದುರಸ್ತಿ ಹಾಗೂ ಮರು ನಿರ್ವಣಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 2.48 ಕೋಟಿ ರೂ. ಬಿಡುಗಡೆ ಮಾಡಿದೆ.

ರದ್ದಾಗಬೇಕಿದ್ದ ಮದುವೆ ಇಂದು

ಮಡಿಕೇರಿ ತಾಲೂಕು ಮಕ್ಕಂದೂರು ನಿವಾಸಿ ಮಂಜುಳಾ ಅವರ ವಿವಾಹ ವನ್ನು ರಜೀಶ್ ಜತೆ ಆ. 26 ರಂದು ಮಕ್ಕಂದೂರಿನ ವಿಎಸ್​ಎಸ್​ಎಲ್ ಹಾಲ್​ನಲ್ಲಿ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ ಪ್ರಕೃತಿ ವಿಕೋಪದಿಂದ ಮದುವೆ ರದ್ದು ಮಾಡಲು ಕುಟುಂಬ ಮುಂದಾಗಿತ್ತು. ಆಗ ನಗರದ ಲಯನ್ಸ್ ಕ್ಲಬ್, ಸೇವಾಭಾರತಿ ಸಂಸ್ಥೆ ಮದುವೆ ಜವಾಬ್ದಾರಿ ಹೊತ್ತುಕೊಂಡಿದ್ದು, ಶನಿವಾರ ಪರಿಹಾರ ಕೇಂದ್ರದಲ್ಲಿ ವಧು ಮಂಜುಳಾಗೆ ಮೆಹಂದಿ ಹಾಕಲಾಯಿತು. ಈ ಮದುವೆಗೆ ಸಚಿವ ಸಾ.ರಾ. ಮಹೇಶ್ ಅವರು ಸರ್ಕಾರದಿಂದ ಶುಕ್ರವಾರ 50,000 ರೂ. ಚೆಕ್ ನೀಡಿದ್ದಾರೆ. ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಆ. 26ರ ಬೆಳಗ್ಗೆ 10.30ಕ್ಕೆ ವಿವಾಹ ನಡೆಯಲಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಪ್ರತಿನಿಧಿಯಾಗಿ ಇಷ್ಟೊಂದು ತಾಳ್ಮೆ ಕಳೆದುಕೊಂಡರೆ ಹೇಗೆ? ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಕಾದು ಕುಳಿತಿದ್ದಾರೆ, ಸಭೆಗೆ ಬನ್ನಿ ಎಂದು ಹೇಳಿದ್ದಕ್ಕೆ ಅಷ್ಟೊಂದು ಕೋಪ ಮಾಡಿಕೊಳ್ಳಬೇಕಾಗಿರಲಿಲ್ಲ. ಅವರು ಮಾತನಾಡುವ ರೀತಿಯಲ್ಲಿ ನಾನು ಮಾತನಾಡಿದ್ದರೆ ಸರಿ ಆಗುತ್ತಿರಲಿಲ್ಲ.

| ಸಾ.ರಾ. ಮಹೇಶ್, ಉಸ್ತುವಾರಿ ಸಚಿವ

ಸಕಲೇಶಪುರ ಉಪವಿಭಾಗದಲ್ಲಿ ಬೆಳೆಹಾನಿ -ಭೂಕುಸಿತದಿಂದ ಭೂಮಿ ಕಳೆದುಕೊಂಡಿರುವ ಬಗ್ಗೆ ಅಧಿಕಾರಿಗಳು ಸಲ್ಲಿಸಿರುವ ಪ್ರಾಥಮಿಕ ವರದಿ ಪ್ರಕಾರ 300 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಮತ್ತೊಮ್ಮೆ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ರ್ಚಚಿಸಿ ನಷ್ಟದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೊಷಿಸುವಂತೆ ಕೋರಲಾಗುವುದು.

| ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ


ವಿಕೋಪದಲ್ಲೂ ರಾಜಕೀಯ

ಬೆಂಗಳೂರು: ಪ್ರಕೃತಿವಿಕೋಪಕ್ಕೀಡಾಗಿರುವ ಕೊಡಗು ವಿಚಾರದಲ್ಲಿ ರಾಜಕೀಯ ಕಿತ್ತಾಟದ ಕಿಚ್ಚು ದಿನೇದಿನೆ ಹೆಚ್ಚಾಗಿದೆ. ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡು ಅದರ ಕ್ರೆಡಿಟ್ ತಮ್ಮದಾಗಿಸಿ ಕೊಳ್ಳಲು ಮೂರೂ ರಾಜಕೀಯ ಪಕ್ಷಗಳ ನಾಯಕರು ಹಾತೊರೆಯುತ್ತಿರುವುದು ಒಂದೆಡೆಯಾದರೆ, ಈಗ ಆರೋಪ-ಪ್ರತ್ಯಾರೋಪ ಆರಂಭವಾಗಿದೆ.

ಕೇಂದ್ರ ಸರ್ಕಾರ ಕೇರಳಕ್ಕೆ 500 ಕೋಟಿ ರೂ. ಘೋಷಿಸಿದ್ದು, ರಾಜ್ಯಕ್ಕೆ ಪರಿಹಾರ ಘೋಷಿಸಿಲ್ಲ ಎಂಬ ಟೀಕೆಯನ್ನು ಕಾಂಗ್ರೆಸ್ ಮುಂಚೂಣಿ ನಾಯಕರು ಕಳೆದ 2 ದಿನಗಳಿಂದ ಆರಂಭಿಸಿದ್ದಾರೆ. ಟ್ವೀಟರ್ ಮೂಲಕವೂ ಅದೇ ವಾದ ತೆಗೆದಿದ್ದಾರೆ. ಜೆಡಿಎಸ್ ಕಡೆಯಿಂದ ಯಾರೂ ಈ ವಿಚಾರ ಪ್ರಸ್ತಾಪಿಸಿಲ್ಲ ಎಂಬುದು ವಿಶೇಷ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಕೇಂದ್ರ ಸಚಿವರಿಂದ ತರಾಟೆಗೊಳಗಾದ ಸಂದರ್ಭ ಅಸಮಾಧಾನ ಹೊರಹಾಕಿದ್ದು, ಈ ವೇಳೆ ಕೇಂದ್ರ ಮೊದಲು ಹಣ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದ್ದರು. ಕೊಡಗಿನಲ್ಲಿ ಸೇವಾಭಾರತಿ ಚಟುವಟಿಕೆಯನ್ನು ಕಾಂಗ್ರೆಸ್ ಮತ್ತು ಆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕಿರಿಕಿರಿ ಮಾಡುತ್ತಿದ್ದಾರೆಂಬುದು ಬಿಜೆಪಿ ನಾಯಕರ ವಾದ. ಸೇವಾಭಾರತಿ ನಡೆಸುತ್ತಿರುವ ಕ್ಯಾಂಪ್​ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ತಪ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವರು ಪ್ರಯತ್ನಿಸಿದ್ದರು. ಇಂಥ ಸಣ್ಣ ರಾಜಕೀಯವೇಕೆ ಮಾಡುತ್ತಾರೆ ಎಂದು ಗೊತ್ತಾಗುವುದಿಲ್ಲ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.

ಕೊಡಗಿನ ಸಂತ್ರಸ್ತರಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿ. ನಮ್ಮ ಸಚಿವರ ಮೇಲೆ ನಿಮ್ಮವರ ಡಾಮಿನೇಷನ್ ಏಕೆ?

| ಸಿದ್ದರಾಮಯ್ಯ ಮಾಜಿ ಸಿಎಂ 


ನಿರ್ಮಲಾ ಸ್ಪಷ್ಟೀಕರಣ

ಶುಕ್ರವಾರದ ಘಟನೆಗೆ ಸ್ಪಷ್ಟೀಕರಣ ಕಳಿಸಿರುವ ನಿರ್ಮಲಾ ಸೀತಾರಾಮನ್ ಅವರು ಸಚಿವ ಸಾ.ರಾ. ಮಹೇಶ್ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹೇಶ್ ಮಾಡಿದ ವೈಯಕ್ತಿಕ ಟೀಕೆ ರಾಜ್ಯಸಭೆ ಘನತೆಗೆ ಚ್ಯುತಿಯುಂಟು ಮಾಡಿದ್ದು, ಮಹೇಶ್​ಗೆ ರಾಜಕೀಯ ವ್ಯವಸ್ಥೆ ಬಗ್ಗೆ ತಿಳಿವಳಿಕೆ-ಗೌರವ ಇಲ್ಲ ಎಂದು ನಿರ್ಮಲಾ ಕಿಡಿಕಾರಿದ್ದಾರೆ. ಇನ್ನು ‘ಪರಿವಾರ’ ಪದ ಬಳಕೆ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂಬರ್ಥದಲ್ಲಿ ಪರಿವಾರ ಪದ ಬಳಸಲಾಗಿದೆ ಎಂದು ಸಚಿವೆ ಸ್ಪಷ್ಟೀಕರಣ ನೀಡಿದ್ದಾರೆ. ಮತ್ತೊಂದೆಡೆ ನಿರ್ಮಲಾ ಅವರಲ್ಲಿ ಸಾ.ರಾ. ಮಹೇಶ್ ಕ್ಷಮೆ ಕೋರಬೇಕೆಂದು ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...