ಪೂಂಚ್: ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ಭಾರತೀಯ ಯೋಧರು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಉಚಿತ ಪಡಿತರವನ್ನು ಹಂಚಿದರು.
ಸುಮಾರು 250 ಮಂದಿಗೆ ಯೋಧರು ರೇಷನ್ ವಿತರಿಸಿದರು. ಈ ವೇಳೆ ಸ್ಥಳೀಯರೊಬ್ಬರು ಮಾತನಾಡಿ, ಮನೆ ಬಾಗಿಲಿಗೆ ತೆರಳಿ ಯೋಧರು ಪಡಿತರವನ್ನು ಹಂಚಿದರು. ಅವಶ್ಯವಿದ್ದರೆ, ಇನ್ನು ಹೆಚ್ಚಿನ ರೇಷನ್ ನೀಡುವುದಾಗಿ ಹೇಳಿದರು. ನಮ್ಮ ನೆರವಿಗೆ ಧಾವಿಸಿದ ಯೋಧರಿಗೆ ಧನ್ಯವಾದಗಳು ಎಂದಿದ್ದಾರೆ.
ಎಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಿರುವುದರಿಂದ ರೇಷನ್ ಕೊಂಡುಕೊಳ್ಳುವುದು ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಸೇನೆ ಮುಂದೆ ಬಂದು ಅಕ್ಕಿ ಮತ್ತು ಗೋಧಿಯನ್ನು ವಿತರಿಸಿದೆ. ಅವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ ಎಂದು ಮತ್ತೋರ್ವ ಸ್ಥಳೀಯ ಹೇಳಿದ್ದಾರೆ.
ಸದ್ಯ ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2301ಕ್ಕೇರಿದ್ದು, 156 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಒಟ್ಟು 56 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)
ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಸ್ವದೇಶಿಗರಿಂದಲೇ ಟೀಕಾ ಪ್ರಹಾರ: ಕರೊನಾ ಹೋರಾಟ ಕೈಚೆಲ್ಲಿ ಕುಳಿತ ಪಾಕ್
ಸೋಂಕು ಹರಡುವಿಕೆಗೆ ಯಾವುದೇ ಸಮುದಾಯವನ್ನು ಗುರಿ ಮಾಡುವುದು ಸರಿಯಲ್ಲ: ಸದ್ಗುರು