More

    VIDEO| ಭಾರಿ ಹಿಮಮಳೆ ನಡುವೆ ಚಿಕಿತ್ಸೆಗಾಗಿ ಗರ್ಭಿಣಿಯನ್ನು ಹೊತ್ತು ಸಾಗಿದ ಯೋಧರ ಶೌರ್ಯ, ಮಾನವೀಯತೆ ಮೆಚ್ಚಿದ ಪ್ರಧಾನಿ

    ನವದೆಹಲಿ: ಸೇನಾ ದಿನವಾದ ಇಂದು ಸೈನಿಕರ ಶೌರ್ಯ ಹಾಗೂ ಮಾನವೀಯ ಕಾರ್ಯವೊಂದನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರು ಧೀರ ಯೋಧರನ್ನು ಟ್ವಿಟರ್​ ಮೂಲಕ ಕೊಂಡಾಡಿದ್ದಾರೆ.

    ಕಾಶ್ಮೀರ ಕಣಿವೆಯಲ್ಲಿ ಗರ್ಭಿಣಿ ಮಹಿಳೆ ಶಮಿಮಾ ಅವರಿಗೆ ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದಾಗ. 100 ಯೋಧರು ಮತ್ತು 30 ನಾಗರಿಕರು ಆಕೆಯನ್ನು ಸ್ಟ್ರೆಚರ್​ ಮೇಲೆ ಹಾಕಿಕೊಂಡು ನಾಲ್ಕ ಗಂಟೆಗಳ ಕಾಲ ಭಾರಿ ಹಿಮ ಮಳೆಯ ನಡುವೆಯೂ ಹೊತ್ತುಕೊಂಡು ಸಾಗಿದ ವಿಡಿಯೋವನ್ನು ನಿನ್ನೆ ಚಿನಾರ್​ ಕಾರ್ಪ್ಸ್​ ಇಂಡಿಯನ್​ ಆರ್ಮಿ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿತ್ತು. ಅಲ್ಲದೇ, ಯೋಧರ ಕಾರ್ಯದಿಂದ ಶಮಿಮಾ ಮತ್ತು ಆಕೆಯ ಮಗು ಗುಣವಾಗಿದೆ ಎಂದು ತಿಳಿಸಿತ್ತು.

    ಈ ವಿಡಿಯೋ ಪ್ರಧಾನಿ ಮೋದಿ ಅವರು ಗಮನ ಸೆಳೆದಿದ್ದು, ಸೇನಾ ದಿನವಾದ ಇಂದು ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿ, ಶೌರ್ಯ ಮತ್ತು ವೃತ್ತಿಪರತೆಗೆ ನಮ್ಮ ಸೇನೆ ಹೆಸರುವಾಸಿಯಾಗಿದೆ. ಅಲ್ಲದೆ, ನಮ್ಮ ಸೇನೆ ಮಾನವೀಯತೆ ಸ್ಪಿರಿಟ್​ ಅನ್ನು ಗೌರವಿಸುತ್ತದೆ. ಜನರಿಗೆ ಸಹಾಯದ ಅಗತ್ಯವಿದ್ದಾಗ ನಮ್ಮ ಸೇನೆ ಎದ್ದುಬಂದು ಎಲ್ಲವನ್ನು ಸಾಧ್ಯವಾಗಿಸುತ್ತದೆ. ನಮ್ಮ ಸೇನೆ ನಮ್ಮ ಹೆಮ್ಮೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇಷ್ಟೇಅಲ್ಲ, ಶಮಿಮಾ ಮತ್ತು ಆಕೆಯ ಮಗುವಿನ ಒಳ್ಳೆಯ ಆರೋಗ್ಯಕ್ಕೆ ಪ್ರಾರ್ಥಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

    ಇನ್ನು ಯೋಧರ ಶೌರ್ಯ ಮತ್ತು ಮಾನವೀಯತೆ ಸಾರುವ ವಿಡಿಯೋವನ್ನು 84 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 6 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿ ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಯೋಧರ ಸಾಹಸ ಕಾರ್ಯಕ್ಕೆ ನೆಟ್ಟಿಗರೆಲ್ಲರೂ ಸೆಲ್ಯೂಟ್​ ಹೊಡೆದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts