ಅಗ್ನಿಪಥದಲ್ಲಿ ಜಾತಿ-ಧರ್ಮ: ಸೇನೆ-ಸರ್ಕಾರ ಹೇಳಿದ್ದೇನು?

1 Min Read

ನವದೆಹಲಿ: ದೇಶದಲ್ಲಿ ಸರ್ಕಾರ ಇತ್ತೀಚೆಗೆ ಹೊರತಂದಿರುವ ಅಗ್ನಿಪಥ ಯೋಜನೆಗೆ ತೀವ್ರ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ದೇಶದ ಜನತೆಗೆ ಗೊತ್ತಿರುವಂಥ ವಿಚಾರವೇ. ಇದೀಗ ಇದರಲ್ಲಿ ಜಾತಿ-ಧರ್ಮವನ್ನೂ ಹೊಸದಾಗಿ ಸೇರಿಸಲಾಗಿದೆ ಎಂಬ ವಿಚಾರವೊಂದನ್ನು ಉಲ್ಲೇಖಿಸಿರುವುದು ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ.

ಅಗ್ನಿವೀರರಾಗಿ ಬರುವವರಿಗೆ ನೇಮಕಾತಿ ಸಂದರ್ಭ ಜಾತಿ-ಧರ್ಮವನ್ನೂ ಕೇಳಲಾಗುತ್ತಿದೆ ಎಂದು ಆಮ್​ ಆದ್ಮಿ ಪಕ್ಷದ ಸಂಜಯ್ ಸಿಂಗ್ ಇಂದು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸೇನೆ ಮಾತ್ರವಲ್ಲದೆ, ರಕ್ಷಣಾ ಸಚಿವರು ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಆಪ್​ ಆರೋಪವನ್ನು ಅಲ್ಲಗಳೆದಿರುವ ಸೇನೆ, ಸೇನೆಯ ನೇಮಕಾತಿಯಲ್ಲಿ ಈಗ ಜಾತಿ-ಧರ್ಮವನ್ನೂ ಕೇಳಲಾಗುತ್ತಿದೆ ಎಂದು ಆರೋಪ ಬಂದಿದೆ. ಆದರೆ ಇದು ಹೊಸದಾಗಿ ಸೇರಿಸಿದ್ದಲ್ಲ, ಅಭ್ಯರ್ಥಿಗಳು ಜಾತಿ ಪ್ರಮಾಣಪತ್ರ ಸಲ್ಲಿಸುವ ಮತ್ತು ಬೇಕಿದ್ದರೆ ಧರ್ಮವನ್ನೂ ಉಲ್ಲೇಖಿಸುವ ಅವಕಾಶ ಮೊದಲಿನಿಂದಲೂ ಇದೆ ಎಂದು ಸ್ಪಷ್ಟನೆ ನೀಡಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ವ್ಯವಸ್ಥೆಯೇ ಈಗಲೂ ಮುಂದುವರಿದಿದೆ. ಯಾವುದೇ ಬದಲಾವಣೆ ಮಾಡಿಲ್ಲ, ಹಳೆಯ ಪದ್ಧತಿಯನ್ನೇ ಅನುಸರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅಗ್ನಿಪಥದಲ್ಲಿ ಜಾತಿ-ಧರ್ಮ: ಸೇನೆ-ಸರ್ಕಾರ ಹೇಳಿದ್ದೇನು?

ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

Share This Article