ಇಂದು ಹೃದಯಾಘಾತದಿಂದ ಮೃತಪಟ್ಟ ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ನಿಧನಕ್ಕೆ ಅವರ ಮಾವ, ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಫೇಸ್ಬುಕ್ನಲ್ಲಿ ಕಪ್ಪುಬಣ್ಣದ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.
ತಂಗಿಯ ಮಕ್ಕಳಾದ ಚಿರಂಜೀವಿ ಮತ್ತು ಧ್ರುವ ಇಬ್ಬರೂ ನನ್ನ ನೆಚ್ಚಿನ ಹುಡುಗರು ಎಂದು ಅರ್ಜುನ್ ಸರ್ಜಾ ಯಾವಾಗಲೂ ಹೇಳುತ್ತಿದ್ದರು. ಇವರಿಬ್ಬರಿಗೂ ಅಷ್ಟೇ ಮಾವ ಅರ್ಜುನ್ ಸರ್ಜಾ ಒಂಥರಾ ಗಾಡ್ಫಾದರ್ ಇದ್ದಂತೆ. ಅರ್ಜುನ್ ಸರ್ಜಾ ಅವರು ಮೇ 29ರಂದು ಹಳೇ ಫೋಟೋವೊಂದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ತಾವು, ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರೊಂದಿಗೆ ಇರುವ ಸೆಲ್ಫಿ ಫೋಟೋವನ್ನು ಅಪ್ಲೋಡ್ ಮಾಡಿ, ಸರ್ಜಾ ಫ್ಯಾಮಿಲಿ ಎಂದು ಕ್ಯಾಪ್ಷನ್ ಬರೆದಿದ್ದರು. ಇದನ್ನೂ ಓದಿ: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವು
ಆದರೆ ಇಂದು ಏಕಾಏಕಿ ಆ ಕುಟುಂಬದ ಒಂದು ಕುಡಿ ಇನ್ನಿಲ್ಲದಂತಾಗಿದೆ. ಅರ್ಜುನ್ ಸರ್ಜಾ ಚೆನ್ನೈನಿಂದ ಈಗಾಗಲೇ ಹೊರಟಿದ್ದಾರೆ. ಚಿರಂಜೀವಿ ಮೃತಪಟ್ಟ ಬಳಿಕ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಫೇಸ್ಬುಕ್ನ ಪ್ರೊಫೈಲ್ ಹಾಗೂ ಕವರ್ ಫೋಟೋಗಳಿಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್ ಸರ್ಜಾ ಸಿಟ್ಟು…