ಮೀ ಟೂ ಅನುಭವವಾದರೆ ಚಿತ್ರರಂಗವನ್ನು ಬಿಟ್ಟುಹೋಗಿ: ಹರ್ಷಿಕಾ ಪೂಣಚ್ಚ

ಬೆಂಗಳೂರು: ಪಬ್ಲಿಸಿಟಿಗಾಗಿ ಹೇಳಿಕೆ ಕೊಡುವುದನ್ನು ಬಿಡಿ. ನಿಮಗೆ ಆ ರೀತಿ ತೊಂದರೆಯಾದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

ನಾನು ಮೀ ಟೂ ಬಗ್ಗೆ ಮಾತಾಡಿದ್ದಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಬೆದರಿಕೆ ಕರೆಗಳಿಗೆ ನಾನು ಹೆದರುವುದಿಲ್ಲ. ನಾನು ನನ್ನ ಚಿತ್ರರಂಗದ ಪರ ಇದ್ದೇನೆ. ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕೆ 15 ವರ್ಷ ಕಷ್ಟಪಡಬೇಕು. ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ನನಗೂ ಬಾಲಿವುಡ್ ಸಿನಿಮಾಗೆ ಹೋದಾಗ ಈ ರೀತಿಯ ಅನುಭವವಾಗಿತ್ತು. ಆದರೆ ಅದರಿಂದ ನಾನು ಹೊರಗೆ ಬಂದೆ ಎಂದು ಹೇಳಿದರು.

ಎರಡು ಕೈ ಸೇರಿದರೆ ಚಪ್ಪಾಳೆಯಾಗುತ್ತದೆ. ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಆಗುವುದಿಲ್ಲ. ಪಬ್ಲಿಸಿಟಿಗಾಗಿ ಒಬ್ಬರ ಹೆಸರನ್ನು ಹಾಳುಮಾಡಬಾರದು. ನಾವು ಬೇಡ ಎಂದರೆ ಯಾರು ಚಿತ್ರರಂಗದಲ್ಲಿ ಬಲವಂತ ಮಾಡಲ್ಲ. ಕೆಲ ನಟಿಯರು ವಿದೇಶಕ್ಕೆ ಹೋಗಿ ಗಣ್ಯವ್ಯಕ್ತಿಗಳಿಂದ ಉಪಯೋಗ ಪಡೆದುಕೊಳ್ಳುತ್ತಾರೆ. ಸಿನಿಮಾನು ಬೇಕು, ಪ್ರಚಾರನೂ ಬೇಕು ನಂತರ ಸಿನಿಮಾ ಕೊಡುವವರ ಬಗ್ಗೆನೆ ಏಕೆ ಮಾತನಾಡುತ್ತೀರ ಎಂದು ಪ್ರಶ್ನಿಸಿದರು.

ಮೀಟೂನ ಪಬ್ಲಿಸಿಟಿ ಆಗಿ ಬಳಿಸಿಕೊಳ್ಳಬಾರದು. ಹೀಗೆ ಆದರೆ ನಿಜವಾಗಲೂ ಲೈಂಗಿಕ ದೌರ್ಜನ್ಯವಾದವರು ಹೇಳಿಕೊಳ್ಳಲು ಮುಂದೆ ಬರುವುದಿಲ್ಲ. ಕೆಲವರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಯಾವಾಗ ಘಟನೆ ಆಗಿರುತ್ತದೋ ಆಗಲೇ ಹೇಳಬೇಕು. ಎರಡು ವರ್ಷ, ಹತ್ತು ವರ್ಷ ಆದ ನಂತರ ಈ ಘಟನೆ ಬಗ್ಗೆ ಹೇಳುವುದಲ್ಲ. ನಾನು ಯಾರ ಪರವೂ ಅಲ್ಲ, ವಿರೋಧಿಯೂ ಅಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)