ಅರ್ಜುನ್ ಸರ್ಜಾ ನನ್ನ ತೊಡೆ, ಹಿಪ್​ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು: ಶ್ರುತಿ ಹರಿಹರನ್​ ದೂರು

ಬೆಂಗಳೂರು: ಬಹುಭಾಷಾ ನಟ ಅರ್ಜುನ್​ ಸರ್ಜಾ ಜತೆ ಊಟಕ್ಕೆ ಹೋಗಿದ್ದಾಗ ನನ್ನ ತೊಡೆ, ಹಿಪ್​ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿರುವ ನಟಿ ಶ್ರುತಿ ಹರಿಹರನ್​ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಈ ಮೂಲಕ ಮೀ ಟೂ ಅಭಿಯಾನದಲ್ಲಿ ಅರ್ಜುನ್​ ಸರ್ಜಾ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ದಿನೇದಿನೆ ತಿರುವು ಪಡೆಯುತ್ತಿದ್ದು, ಸರ್ಜಾ ಹೋಟೆಲ್​ನಲ್ಲಿ ನನ್ನ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಮುಂಚೆ ಟ್ವಿಟರ್​ನಲ್ಲಿ ಮಾಡಿದ್ದ ಆರೋಪದಲ್ಲಿ ಅರ್ಜುನ್​ ಸರ್ಜಾ ನನ್ನನ್ನು ಪದೇಪದೆ ಡಿನ್ನರ್​ಗೆ ಕರೆಯುತ್ತಿದ್ದರು. ಆದರೆ, ನಾನು ಅದನ್ನು ನಿರಾಕರಿಸಿದ್ದೆ ಎಂದು ಶ್ರುತಿ ಆರೋಪ ಮಾಡಿದ್ದರು. ಆದರೆ, ಈಗ ಅವರ ಜತೆ ಊಟಕ್ಕೆ ಹೋಗಿದ್ದಾಗ ಅಸಭ್ಯವಾಗಿ ನಡೆದುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದರ ಕುರಿತು ಆರೋಪ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)