ಮುಂಬೈ: ನಟ ಅರ್ಜುನ್ ರಾಂಪಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ. ತಮ್ಮ ಎಕ್ಸ್ ಖಾತೆ (ಹಿಂದಿನ ಟ್ವಿಟರ್) ಹ್ಯಾಕ್ ಆಗಿದೆ ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ತಮ್ಮ ಎಕ್ಸ್ ಖಾತೆಯಿಂದ ಬರುವ ಯಾವುದೇ ಟ್ವೀಟ್ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಎಚ್ಚರಿಸಿದ್ದಾರೆ.
ಇದನ್ನು ಓದಿ: ಅವಶ್ಯಕತೆ ಇದ್ದರಷ್ಟೆ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸುತ್ತೇನೆ; ಐಶ್ವರ್ಯಾ ರೈ ಬಚ್ಚನ್
ಇದು ಒಳ್ಳೆಯ ಸುದ್ದಿಯಲ್ಲ. ನನ್ನ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಯಾವುದೇ ಸಂದೇಶ ಅಥವಾ ಟ್ವೀಟ್‌ಗೆ ಪ್ರತ್ಯುತ್ತರಿಸಬೇಡಿ ಎಂದು ನಟ ಅರ್ಜುನ್ ರಾಂಪಾಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಹಂಚಿಕೊಂಡಿದ್ದು, ಫ್ಯಾನ್ಸ್ಗೆ ಜಾಗರೂಕರಾಗಿರಿ ಎಂದು ಸೂಚಿಸಿದ್ದಾರೆ.
ಅಭಿಮಾನಿಗಳ ಜತೆಗೆ, ಗೇಬ್ರಿಯೆಲಾ ಡಿಮೆಟ್ರಿಡ್ಸ್ ಕೂಡ ಪೋಸ್ಟ್ಗೆ ಆಶ್ಚರ್ಯಕರ ಎಮೋಜಿಯನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಸಂದೇಶಕ್ಕೆ ಒಬ್ಬರು ನೀವು ಹಣವನ್ನುಯಾಕೆ ಕೇಳುತ್ತಿದ್ದೀರಿ ಎಂದು ತಮಾಷೆ ಮಾಡಿದ್ದಾರೆ. ಕೆಲವರು ನಟನಿಗೆ ಜಾಗರೂಕರಾಗಿರುವಂತೆ ಹೇಳಿ ಕಾಮೆಂಟ್ ಮಾಡಿದ್ದಾರೆ.
ಸೆಲಿಬ್ರಿಟಿಗಳ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳು ಹ್ಯಾಕ್ ಆಗುವುದು ಇದೇ ಮೊದಲೆನಲ್ಲ. ಈ ಮೊದಲು ಅಮಿತಾಬ್ ಬಚ್ಚನ್ ಅವರ ಎಕ್ಸ್ ಅಕೌಂಟ್ ಕೂಡ ಹ್ಯಾಕ್ ಆಗಿದೆ.ಇವರಲ್ಲದೆ, ದೀಪಿಕಾ ಪಡುಕೋಣೆ, ಕರಣ್ ಜೋಹರ್ ಮತ್ತು ನೋರಾ ಫತೇಹಿ ಅವರ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ನಟ ಅರ್ಜುನ್ ರಾಂಪಾಲ್ ಕೊನೆಯದಾಗಿ ‘ಕ್ರ್ಯಾಕ್ – ಜೀತೇಗಾ ಟು ಜೀಗಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. (ಏಜೆನ್ಸೀಸ್)