ದಾಂಡೇಲಿ: ಬಹುತೇಕ ದಾಂಡೇಲಿ ಹಾಗೂ ಸುತ್ತಮುತ್ತ ಚಿತ್ರೀಕರಣಗೊಂಡ ಮತ್ತು ಬಹುಪಾಲು ದಾಂಡೇಲಿ ಕಲಾವಿದರೆ ನಟಿಸಿರುವ ‘ಅರಿಂದಮ್ ಚಲನಚಿತ್ರ ಹಳಿಯಾಳದ ಶ್ರೀ ಬಸವೇಶ್ವರ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆಯಾಯಿತು.

ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಹಾಗೂ ಕಸಾಪ ತಾಲೂಕು ಅಧ್ಯಕ್ಷೆ ಸುಮಂಗಲಾ ಅಂಗಡಿ ಮೊದಲ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಧಾರವಾಡದ ಮೂಲದ ಕಲ್ಕಿ ಅಗಸ್ಱ ಅವರ ನೇತೃತ್ವದಲ್ಲಿ ಅರಿಂದಮ್ ಚಿತ್ರ ರಾಜ್ಯವ್ಯಾಪಿ ಬಡುಗಡೆಯಾಗಿದೆ. ಸ್ಥಳೀಯ ಕಲಾವಿದರ ಪ್ರತಿಭೆ ಹೊರಬರಲು ಉತ್ತಮ ವೇದಿಕೆಯನ್ನು ಚಿತ್ರತಂಡ ಒದಗಿಸಿಕೊಟ್ಟಿದೆ ಎಂದರು.
ಶ್ರೀಮಂತ ಮದರಿ, ಎಸ್.ಎಸ್. ಕರೇಕರ, ದೇವೇಂದ್ರ ನವಲೆ, ಶಂಕ್ರಯ್ಯ ಹಿರೇಮಠ, ಯಲ್ಲಪ್ಪ ಬಡಿಗೇರ, ಪ್ರವೀಣಕುಮಾರ ಸುಲಾಖೆ, ರಜಪೂತ, ಸರ್ಫರಾಜ್ ಶೇಖ, ರಾಘವೇಂದ್ರ ಪಾತರೋಟಿ ಇದ್ದರು.