25.1 C
Bangalore
Friday, December 6, 2019

ಅಡಕೆ ಮಾರುಕಟ್ಟೆಗೆ ಲಂಕಾ ಸ್ಫೋಟ ನಂಟು?

Latest News

ಮಲಗಿದ ಮೇಲೆ ಸಂಪೂರ್ಣ ಸುಖ ನಿದ್ದೆಗೆ ಇಲ್ಲಿವೆ ಕೆಲ ಟಿಪ್ಸ್​ಗಳು

ಸಂಪುರ್ಣ ಎಂಟು ತಾಸು ನಿದ್ದೆ..! - ನಿದ್ದೆ ಮಾಡಿದ ಮೇಲೆ ಮಧ್ಯೆ ಯಾವುದಕ್ಕೂ ಅಂದರೆ ಬಾತ್​ರೂಂಗೆ ಹೋಗಲು, ನೀರು ಕುಡಿಯಲು, ನಿಮ್ಮ ಮೊಬೈಲ್​ ಚೆಕ್​ ಮಾಡಲು...

ಗೊರಗುದ್ದಿ ಶಾಲೆ ಗೋಳು ಕೇಳೋರಿಲ್ಲ

|ಬೆಳ್ಳೆಪ್ಪ ಮ.ದಳವಾಯಿ ಕಡಬಿ ಸರ್ಕಾರ ಸರ್ವಶಿಕ್ಷಣ ಅಭಿಯಾನದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ.ಹಣ ಖರ್ಚು...

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸ್​ ಆಯುಕ್ತ ವಿಶ್ವನಾಥ್​ ಸಜ್ಜನರ್​

ಹೈದರಾಬಾದ್​: ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಮೃತದೇಹಕ್ಕೆ ಬೆಂಕಿಯಿಟ್ಟು ಕ್ರೂರತ್ವ ಮೆರೆದಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್​ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಎನ್​ಕೌಂಟರ್​ ಮೂಲಕ...

ಯಾಂತ್ರಿಕ ಜೀವನಕ್ಕೆ ಮಾರುಹೋಗಿದ್ದಾರೆ ಜನ

ಕನಕಪುರ: ಯಾಂತ್ರಿಕ ಜೀವನಕ್ಕೆ ಮಾರುಹೋಗಿರುವ ಇಂದಿನ ಜನತೆ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು. ಕೋಡಿಹಳ್ಳಿ ರಂಗಮಂದಿರದಲ್ಲಿ ಕನ್ನಡ...

ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್​ಕೌಂಟರ್​​ ಅನ್ನು ಸ್ವಾಗತಿಸಿದ ಗೋವಾ ಕಾಂಗ್ರೆಸ್​​

ಪಣಜಿ: ಹೈದರಾಬಾದ್​ನಲ್ಲಿ ಶುಕ್ರವಾರ ಮುಂಜಾನೆ ದಿಶಾ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​​ನಲ್ಲಿ ಕೊಲೆ ಮಾಡಿದ್ದನ್ನು ಗೋವಾ ಕಾಂಗ್ರೆಸ್​ ಮಹಿಳಾ...

<<ದ್ವೀಪರಾಷ್ಟ್ರದ ಪ್ರಮುಖ ರಫ್ತುದಾರನ ಬಂಧನ * ಪರಿಣಾಮ ಅಡಕೆ, ಕಾಳುಮೆಣಸು ಧಾರಣೆ ಏರಿಕೆ>>

ನಿಶಾಂತ್ ಬಿಲ್ಲಂಪದವು, ವಿಟ್ಲ
ಉತ್ತರ ಭಾರತದಲ್ಲಿ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡದ ಅಡಕೆಯ ಜತೆಗೆ ವಿದೇಶದ ಕಳಪೆ ಅಡಕೆ ಮಿಶ್ರಣ ಮಾಡುತ್ತಿದ್ದ ದಂಧೆಕೋರರಿಗೂ ಶ್ರೀಲಂಕಾ ಸ್ಫೋಟದ ರುವಾರಿಗಳಿಗೂ ಸಂಬಂಧ ಇರುವ ಅನುಮಾನ ದಟ್ಟವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹತ್ತು ದಿನದಲ್ಲೇ ಅಡಕೆ ಹಾಗೂ ಕಾಳುಮೆಣಸು ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯಾಗಿದೆ.
ಕಾಸರಗೋಡು- ದಕ್ಷಿಣ ಕನ್ನಡ ಭಾಗದಲ್ಲಿ ಕಳೆದ ಡಿಸೆಂಬರ್‌ನಿಂದ ಕಳಪೆ ಅಡಕೆ ಸದ್ದು ಮಾಡುತ್ತಿದ್ದು, ‘ವಿಜಯವಾಣಿ’ ಜ.20ರಂದು ವಿಶೇಷ ವರದಿ ಮಾಡಿತ್ತು. ವಿದೇಶಗಳಿಂದ ಆಮದು ಮಾಡಿಕೊಂಡು ಕೇರಳದ ಮೂಲಕ ಕಳಪೆ ಅಡಕೆ ರಾಜ್ಯ ಪ್ರವೇಶಿಸುತ್ತಿತ್ತು. ಹತ್ತಾರು ಲಾರಿಗಳು ಕಳ್ಳದಾರಿಗಳ ಮೂಲಕ ಜಿಲ್ಲೆ ಪ್ರವೇಶಿಸುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಲಾರಿಗಳ ಓಡಾಟ ಸ್ಥಗಿತವಾಗಿದೆ ಎಂಬ ಮಾಹಿತಿ ಲಭಿಸಿದೆ.
ದಕ್ಷಿಣ ಏಷ್ಯಾದ ಉಚಿತ ವ್ಯಾಪಾರ ಒಪ್ಪಂದವನ್ನು ಬಳಸಿಕೊಂಡು ಭಾರತಕ್ಕೆ ಶ್ರೀಲಂಕಾ ಮೂಲದ ರಫ್ತುದಾರರು ಕೇರಳ ಮೂಲದವರ ಜತೆ ಸೇರಿಕೊಂಡು ಅಡಕೆಯನ್ನು ಕಳುಹಿಸುತ್ತಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗುಣಮಟ್ಟದ ಅಡಕೆಗೆ ಕಳಪೆ ಅಡಕೆಯನ್ನು ಮಿಶ್ರಣ ಮಾಡಲಾಗುತ್ತಿದ್ದು, ಇದಕ್ಕೆ ಬಳಕೆಯಾಗುತ್ತಿರುವುದು ಬರ್ಮಾ ಮತ್ತು ಇಂಡೋನೇಷಿಯಾದ ಅಡಕೆ. ಇದನ್ನು ಶ್ರೀಲಂಕಾ ಮತ್ತು ನೇಪಾಳದ ಮೂಲಕ ಭಾರತಕ್ಕೆ ತರಲಾಗುತ್ತಿತ್ತು. ಶ್ರೀಲಂಕಾ ಸ್ಫೋಟ ಹಿನ್ನೆಲೆಯಲ್ಲಿ ಅಲ್ಲಿನ ರಫ್ತುದಾರರಿಗೆ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ಆಮದು ಮಾರ್ಗ ಬಂದ್ ಆಗಿರುವುದರಿಂದ ಸ್ಥಳೀಯವಾಗಿ ಅಡಕೆ ಧಾರಣೆ ಏರಿಕೆಯಾಗುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ಬಳಿಕ 10 ದಿನದಲ್ಲಿ ದ.ಕ. ಮಾರುಕಟ್ಟೆಯಲ್ಲಿ ಕಾಳುಮೆಣಸು ಧಾರಣೆ 15 ರೂ. ಹಾಗೂ ಅಡಕೆ ಧಾರಣೆ 3ರಿಂದ 5 ರೂ. ಏರಿಕೆ ದಾಖಲಿಸಿದೆ.

ವ್ಯಾಪಾರಿ ಪುತ್ರರೇ ಬಾಂಬರ್‌ಗಳು!: ಶ್ರೀಲಂಕಾದ ಮಸಾಲೆ ಪದಾರ್ಥಗಳ ವ್ಯಾಪಾರಿ ಮಹಮ್ಮದ್ ಯೂಸುಫ್ ಇಬ್ರಾಹಿಂ ಎಂಬಾತನ ಪುತ್ರರಾದ ಇಮ್ಸತ್ ಅಹಮದ್ ಇಬ್ರಾಹಿಂ ಮತ್ತು ಇಲ್ಹಾಂ ಅಹಮದ್ ಇಬ್ರಾಹಿಂ ಆತ್ಮಹತ್ಯಾ ಬಾಂಬರುಗಳು. ಶಾಂಗ್ರಿಲಾ ಮತ್ತು ಸಿನ್ನಮೋನ್ ಗ್ರಾೃಂಡ್ ಹೋಟೆಲ್‌ಗಳಲ್ಲಿ ಬಾಂಬ್ ಸ್ಫೋಟಿಸಿಕೊಂಡು ಇವರು ಮೃತಪಟ್ಟಿದ್ದಾರೆ. ಘಟನೆ ಬಳಿಕ ಇವರ ತಂದೆ ಇಬ್ರಾಹಿಂನನ್ನು ಲಂಕಾ ಪೊಲೀಸರು ಬಂಧಿಸಿದ್ದಾರೆ. ಇಡೀ ಕುಟುಂಬವನ್ನೇ ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಕಳಪೆ ಮಾರುಕಟ್ಟೆಯ ರುವಾರಿ?:  ಶ್ರೀಲಂಕಾದ ಕೊಲೊಂಬೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಇಶಾನಾ ಸ್ಪೈಸ್ ಎಕ್ಸ್‌ಪೋರ್ಟ್ಸ್’ ಸ್ಥಾಪಕ ಮೊಹಮ್ಮದ್ ಯೂಸುಫ್ ಇಬ್ರಾಹಿಂ. 1986ರಲ್ಲಿ ಆರಂಭಗೊಂಡಿರುವ ಈ ಸಂಸ್ಥೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕರಿಮೆಣಸು, ಅಡಕೆ, ಲವಂಗ, ಜಾಯಿಕಾಯಿ, ಪುನರ್ಪುಳಿ, ವೆನಿಲ್ಲಾ, ದಾಲ್ಚಿನ್ನಿ, ಹುಣುಸೆಹುಳಿ ಸಹಿತ ವಿವಿಧ ಮಸಾಲೆ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಇಡೀ ಶ್ರೀಲಂಕಾದ ಒಟ್ಟು ರಫ್ತು ಪ್ರಮಾಣದಲ್ಲಿ ಇಶಾನಾ ಕಂಪನಿಯ ಪಾಲು ಶೇ.35ಕ್ಕೂ ಅಧಿಕ ಎಂದು ಕಂಪನಿಯೇ ತನ್ನ ವೆಬ್‌ಸೈಟ್‌ನಲ್ಲಿ ದಾಖಲಿಸಿದೆ. ಶ್ರೀಲಂಕಾದ ಸಂಬಾರ ಪದಾರ್ಥ ಅತಿ ದೊಡ್ಡ ರಫ್ತುದಾರನಾಗಿ ಕಂಪನಿ 2006ರಲ್ಲಿ ಹೊರಹೊಮ್ಮಿತ್ತು. ಸ್ವಿಜರ್ಲೆಂಡ್, ಇಂಗ್ಲೆಂಡ್ ಮತ್ತು ಭಾರತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಥೆ ರಫ್ತು ಮಾಡುತ್ತಿದೆ. ಕಳಪೆ ಕರಿಮೆಣಸು ಮತ್ತು ಅಡಕೆ ರಫ್ತು ಮಾಡಿರುವಲ್ಲಿ ಈತನ ಪಾತ್ರ ಇದೆಯೇ ಎಂಬುದು ತನಿಖೆಯಲ್ಲಿ ಬಯಲಾಗಬೇಕಿದೆ.

ಕಳಪೆ ಮಿಶ್ರಣಕ್ಕಾಗಿ ಧಾರಣೆ ಏರಿಕೆ?: ವಿದೇಶಿ ಕಳಪೆ ಗುಣಮಟ್ಟದ ಅಡಕೆ ರಾಜ್ಯದ ಹಲವು ದಾಸ್ತಾನು ಕೇಂದ್ರಗಳಲ್ಲಿ ಸಂಗ್ರಹ ಇದ್ದು, ಇದಕ್ಕೆ ಮಿಶ್ರಣ ಮಾಡಲು ಬೇಕಾದಷ್ಟು ಉತ್ತಮ ಗುಣಮಟ್ಟದ ಕರಾವಳಿಯ ಅಡಕೆ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ, ಹೀಗಾಗಿ ಧಾರಣೆ ಹೆಚ್ಚಳ ಮಾಡಿರುವ ಸಾಧ್ಯತೆ ಇದೆ. ಹಾಗೆಂದು ಶ್ರೀಲಂಕಾದಿಂದ ಬರುತ್ತಿದ್ದ ಕಳಪೆ ಗುಣಮಟ್ಟದ ಅಡಕೆ ಸ್ಥಗಿತವಾಗಿರುವುದು ಧಾರಣೆ ಹೆಚ್ಚಳವಾಗುವಂತೆ ಮಾಡಿಲ್ಲ ಎನ್ನಲಾಗುವುದಿಲ್ಲ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.

ರಾಜ್ಯದ ಗಡಿಗಳು ಭದ್ರವಿಲ್ಲ!: ಅಡಕೆ ಬೆಳೆಯುವ ಪ್ರದೇಶದಿಂದ ಅಡಕೆ ಬಳಕೆದಾರರು ಇರುವಲ್ಲಿಗೆ ಲಾರಿಗಳಲ್ಲಿ ಹೋಗುವುದು ವಾಡಿಕೆ. ಆದರೆ ಕೇರಳ, ಅಸ್ಸಾಂ ಸೇರಿ ಹಲವು ಕಡೆಗಳಿಂದ ಕಳ್ಳ ದಾರಿಗಳ ಮೂಲಕ ಅಡಕೆ ಬೆಳೆಯುವ ಕರಾವಳಿಗೆ ಲೋಡ್‌ಗಟ್ಟಲೆ ಅಡಕೆ ಬರುತ್ತಿರುವುದನ್ನು ಪ್ರಶ್ನಿಸುವ ಗೋಜಿಗೆ ಅಧಿಕಾರಿಗಳು ಹೋಗುತ್ತಿಲ್ಲ, ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಜಕಾರಣಿಗಳಿಗೆ ನೀಡುವ ಭದ್ರತೆಯ ಅರ್ಧದಷ್ಟು ಗಡಿಗಳಲ್ಲಿ ಹಾಕಿ ತಪಾಸಣೆ ನಡೆಸಿದರೆ ಅಕ್ರಮ ಅಡಕೆ ಸಾಗಾಟವನ್ನು ತಡೆಯಬಹುದು ಎನ್ನುತ್ತಾರೆ ಬೆಳೆಗಾರರು.

ವಿದೇಶದ ಕಳಪೆ ಅಡಕೆ ಹಾಗೂ ಕಾಳುಮೆಣಸು ಸ್ಥಳೀಯ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಿದ್ದು, ಬಳಿಕ ಚುನಾವಣೆ ಘೋಷಣೆಯಾಗಿದ್ದರಿಂದ ಆ ಬಗ್ಗೆ ಮುಂದುವರಿಯಲಾಗಿಲ್ಲ. ಜೂನ್ ಮೊದಲ ವಾರ ಅಡಕೆ ಬೆಳೆಗಾರರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ವಿದೇಶಿ ಅಡಕೆ ಆಮದು ಕುರಿತು ಚರ್ಚೆ ನಡೆಸಲಾಗುವುದು. ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಅಡಕೆ ವ್ಯಾಪಾರಿಗಳ ಕುಟುಂಬ ಇದೆ ಎಂಬ ಮಾತು ಮಾರುಕಟ್ಟೆಯಲ್ಲಿ ಓಡಾಡುತ್ತಿರುವುದು ಹಾಗೂ ಗುಣಮಟ್ಟದ ಅಡಕೆ ಮಾರುಕಟ್ಟೆಗೆ ಬರುತ್ತಿರುವುದು ಧಾರಣೆ ಹೆಚ್ಚಳಕ್ಕೆ ಕಾರಣವಾಗಿದೆ.
– ಎಸ್.ಆರ್. ಸತೀಶ್ಚಂದ್ರ, ಅಧ್ಯಕ್ಷ, ಕ್ಯಾಂಪ್ಕೊ

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...