Kitchen Hacks: ಹಣ್ಣುಗಳು, ತರಕಾರಿಗಳು ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಇವುಗಳನ್ನು ಬಳಸಿದ ನಂತರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯಲಾಗುತ್ತದೆ. ನಾವು ಇಂದು ಹಣ್ಣು ಹಾಗೂ ತರಕಾರಿ ಸಿಪ್ಪೆಗಳನ್ನು ಹೇಗೆ ಮರುಬಳಕೆ ಮಾಡಬೇಕು ಎನ್ನುವ ಕುರಿತಾಗಿ ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ….
ಸೌತೆಕಾಯಿಯ ಸಿಪ್ಪೆಯನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಹೊಳಪು ಹೆಚ್ಚುತ್ತದೆ. ಶುದ್ಧೀಕರಣದ ಸಮಯದಲ್ಲಿ ದೇಹದಿಂದ ವಿಷಕಾರಿ ರಾಸಾಯನಿಕಗಳನ್ನು ತೆಗೆದುಹಾಕಲು ಸೌತೆಕಾಯಿ ತಿರುಳನ್ನು ಸಹ ಬಳಸಬಹುದು.
ಬಾಳೆಹಣ್ಣು ತಿಂದು ಸಿಪ್ಪೆಯನ್ನು ಬಿಸಾಡುವ ಬದಲು.. ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಪಾದರಕ್ಷೆಗಳ ಮೇಲೆ ಉಜ್ಜುವುದರಿಂದ ಶೂಗಳ ಮೇಲಿರುವ ಕೊಳೆ, ಧೂಳು ಸ್ವಚ್ಛವಾಗಿ ಬೂಟುಗಳು ಕನ್ನಡಿಯಂತೆ ಹೊಳೆಯುತ್ತವೆ.
ಸೇಬಿನ ಸಿಪ್ಪೆಯಲ್ಲಿ ವಿಟಮಿನ್ ಇ ಹೇರಳವಾಗಿದ್ದು ತ್ವಚೆಯನ್ನು ಮೃದು ಮತ್ತು ತೇವಾಂಶದಿಂದ ಇಡುತ್ತದೆ. ಇದರಲ್ಲಿರುವ ಕಾಲಜನ್ ಚರ್ಮದ ಯೌವನವನ್ನು ಕಾಪಾಡುತ್ತದೆ.
ಸೇಬಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಯಂತಹ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
ಆಲೂಗಡ್ಡೆಯ ಸಿಪ್ಪೆಯನ್ನು 10 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ.. ಅದು ತಣ್ಣಗಾದ ನಂತರ ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಈ ಸಿಪ್ಪೆಯನ್ನು ಹದಿನೈದು ನಿಮಿಷಗಳ ಕಾಲ ಇಟ್ಟು ನಂತರ ತಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕಣ್ಣು ನೋವು ಮತ್ತು ಕಣ್ಣಿನ ಸುತ್ತ ಕಪ್ಪು ವರ್ತುಲದಂತಹ ಸಮಸ್ಯೆಗಳು ದೂರವಾಗುತ್ತವೆ.