ಹೈದರಾಬಾದ್: ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಪ್ರಭಾಸ್(Prabhas), ತಮ್ಮ ಅದ್ಭುತ ನಟನೆಯಿಂದ ಪ್ರಪಂಚದ್ಯಾಂತ ತನ್ನದೇಯಾದ ಅಭಿಮಾನಿ ಬಳಗವನ್ನು ಸಂಪಾದಿಸದ್ದಾರೆ. ಆದರೆ, ಪ್ರಭಾಸ್ ಸಿನಿಮಾಗಳಿಂದಲೇ ನಿರ್ಮಾಪಕರು ಸಿನಿ ಇಂಡಸ್ಟ್ರಿಯಿಂದ ದೂರ ಸರಿಯುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೀಗ ಕೇಳಿಬಂದಿದೆ.
ಹೌದು, ಈ ಕುರಿತು ಟಾಲಿವುಡ್ ನಿರ್ಮಾಪಕರೊಬ್ಬರು ಆಡಿರುವ ಮಾತುಗಳೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ತೆಲುಗು ನಿರ್ಮಾಪಕರು ಆಗಿರುವ ಆದಿತ್ಯ ರಾಮ್ ಅವರು, ಪ್ರಭಾಸ್ ನಟಿಸಿರುವ ‘ಏಕ್ ನಿರಂಜನ್, ಸ್ವಾಗತಂ, ಖುಷಿ ಖುಷಿಗಾ, ಸಂದಡೆ ಸಂದಡಿ’ ಸಿನಿಮಾಗಳು ನಿರ್ಮಿಸುವ ಮೂಲಕ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿ, ಸಿನಿ ಪ್ರೇಕ್ಷಕರಿಗೆ ಚಿರಪರಿಚಿತರಾದರು. ಹಾಕಿದ ಬಜೆಟ್ ವಾಪಸ್ ಬಾರದ ಕಾರಣ ನಷ್ಟ ಹೊಂದಿದ ರಾಮ್, ಬಳಿಕ ಸಿನಿಮಾರಂಗದಿಂದ ದೂರ ಸರಿದರು.
ಇದನ್ನು ಓದಿ;ಈ 5 ಭಾರತೀಯ ಸ್ಟಾರ್ ಕ್ರಿಕೆಟಿಗರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗೋದು ಬಹುತೇಕ ಡೌಟ್! ಹೀಗಿದೆ ವರದಿ
ಈಗ 15 ವರ್ಷಗಳ ಬಳಿಕ ಮತ್ತೆ ಸಿನಿರಂಗಕ್ಕೆ ಹಿಂತಿರುಗಿದ್ದು, ರಾಮಚರಣ್ ಅಭಿನಯದ ‘ಗೇಮ್ ಚೆಂಜರ್’ ಚಿತ್ರಕ್ಕೆ ಮತ್ತೆ ಬಂಡವಾಳ ಹೂಡಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ಮಾಪಕ ಆದಿತ್ಯ ರಾಮ್, ತಮ್ಮ ಜೀವನದಲ್ಲಿ ಸಿನಿಮಾಗಳಿಂದ ದೂರ ಸರಿದ್ದಿದ್ಯಾಕೆ ಎಂಬ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದಾರೆ. ”ಪ್ರಭಾಸ್ ಅವರ ಏಕ್ ನಿರಂಜನ್ ಸಿನಿಮಾ ನಿರ್ಮಾಣದಿಂದ ಬಹಳಷ್ಟು ನಷ್ಟ ಹೊಂದಿದೆ. ಇದರಿಂದ ಹೊರ ಬರಲಾಗಲಿಲ್ಲ. ಹೀಗಾಗಿ, ಸಿನಿ ಇಂಡಸ್ಟ್ರಿ ತೊರೆದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೈ ಹಾಕಿ, ಉತ್ತಮವಾದದನ್ನೇ ಸಂಪಾದಿಸಿದ್ದೇನೆ. ಈಗ ಮತ್ತೆ ಸಿನಿಮಾಕ್ಕೆ ಬಂಡವಾಳ ಹೂಡಿದ್ದೇನೆ” ಎಂದಿದ್ದಾರೆ.
ಇದಲ್ಲದೇ, ಇತ್ತೀಚಿಗೆ ನಟಿ ಶ್ರೇಯಾ ಅವರಿಗೆ ಸಂಬಂಧಿಸಿದಂತೆ ವಿಡಿಯೋ ತುಣುಕೊಂದು ವೈರಲ್ ಆಗಿತ್ತು. ಅದರಲ್ಲಿ ಎನ್ಟಿಆರ್ ಸಿನಿಮಾ ಮಾಡಿ ಕೈ ಸುಟ್ಟುಕೊಂಡು ನಿರ್ಮಾಪಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಹೇಳಿಕೆ ಇತ್ತು. ಈ ಕ್ಲಿಪ್ ಬಗ್ಗೆ ಆದಿತ್ಯ ಉಲ್ಲೇಖಿಸಿದ್ದಾರೆ.
ಇನ್ನು ಇದೇ ವಿಡಿಯೋದ ತುಣಕು ಇಟ್ಟುಕೊಂಡು ಇತರ ಅಭಿಮಾನಿಗಳು ಪ್ರಭಾಸ್ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ. ನಿಮ್ಮ ಸಿನಿಮಾದಿಂದ ಆದಿತ್ಯ ಅವರು 15 ವರ್ಷ ರಿಯಲ್ ಎಸ್ಟೇಟ್ ಮಾಡಬೇಕಾಗಿತ್ತು ಎಂದು ಕಾಲೆಳೆಯುತ್ತಿದ್ದಾರೆ. (ಏಜೆನ್ಸೀಸ್).