ಅರಸೀಕೆರೆ : ನಮ್ಮ ಊರು, ನಮ್ಮ ಕೆರೆ ಯೋಜನೆ ಅಡಿ ದೊಡ್ಡಕೆರೆ ಹೂಳೆತ್ತಿದರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಗಣೇಶ್ ಮರಾಠೆ ತಿಳಿಸಿದರು.
ಹರಪನಹಳ್ಳಿ ತಾಲೂಕು ಅರಸೀಕೆರೆಯ ಶ್ರೀ ಕೋಲಶಾಂತೇಶ್ವರ ಒಳಮಠದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿದ್ದ ದೊಡ್ಡ ಕೆರೆ ಹೂಳೆತ್ತುವ ಕಾರ್ಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೆರೆಯ ಹೂಳೆತ್ತಿದರೆ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ. ಜನ- ಜಾನುವಾರುಗಳಿಗೆ ಕುಡಿಯುವ ನೀರಿಗೆ ನೆರವಾಗಲಿದೆ. ಅಲ್ಲದೇ ಕೆರೆ ಸುತ್ತ ಅಂತರರ್ಜಲ ಮಟ್ಟ ಏರಿಕೆಯಾಗಲಿದೆ ಎಂದು ಹೇಳಿದರು.
ಕೃಷಿ ಅಧಿಕಾರಿ ರಾಮಾಂಜನೆಯ, ಇಂಜಿನಿಯರ್ ಭರತ್‌ಕುಮಾರ್, ಎ.ಎಚ್.ಪಂಪಣ್ಣ, ಡಾ. ಸುರೇಶ್, ಪೂಜಾರ್ ಮರಿಯಪ್ಪ, ಹಾದಿಮನಿ ನಾಗರಾಜ್, ಜೋಗಪ್ಳ ಬಸವರಾಜ್, ಎ.ಎಚ್.ಕೊಟ್ರೇಶ್, ಎ.ಬಿ.ಜಗದೀಶ್‌ಗೌಡ, ಚಿದಾನಂದ ಗೌಡ, ದುರ್ಗೆಶ್, ಶಾರದಮ್ಮ, ಗಂಗಮ್ಮ ಇತರರಿದ್ದರು.