ನೀರು ಭವಿಷ್ಯದ ಆಸ್ತಿ

ಅರಸೀಕೆರೆ: ಧರ್ಮ ಎಂದರೆ ಒಳ್ಳೆತನ, ಪ್ರಾಮಾಣಿಕತೆ, ಸತ್ಯ, ಉಪಕಾರ ಭಾವನೆ ಸಂಕೇತ ಎಂದು ಸಾಹಿತಿ ಎಸ್.ಟಿ.ಶಾಂತಗಂಗಾಧರ್ ಹೇಳಿದರು.

ಅರಸೀಕೆರೆ ವಲಯ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಹರಪನಹಳ್ಳಿ ತಾಲೂಕು ಹೊಸಕೋಟೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ, ಭಜನೆ, ಉಡಿ ತುಂಬಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಪಂ ಸದ್ಯಸರಾದ ಡಿ.ಸಿದ್ದಪ್ಪ ಮಾತನಾಡಿ, ಧರ್ಮಸ್ಥಳ ಸಂಘದಿಂದ ಆರ್ಥಿಕ ನೆರವು ಪಡೆದು ಅನೇಕರು ಹೊಸ ಬದುಕು ರೂಪಿಸಿಕೊಂಡಿದ್ದಾರೆ. ಯುವಕರು ಹಳ್ಳಿಗಳಲ್ಲಿ ಕೈಗಾರಿಕೆ ಪ್ರಾರಂಭಿಸಬಹುದು ಎಂದು ಸಲಹೆ ನೀಡಿದರು.

ಗ್ರಾಂಪಂ ಅಧ್ಯಕ್ಷ ಸಣ್ಣ ಹನುಮಂತಪ್ಪ, ಯೋಜನಾಧಿಕಾರಿ ಗಣೇಶ್ ಮರಾಠಿ, ನಿವೃತ್ತ ಮುಖ್ಯಶಿಕ್ಷಕ ಶರಣಪ್ಪ, ಜಾತಪ್ಪ, ರಹಮತ್ತುಲ್ಲಾ ಸಾಬ್, ಎಚ್.ಮುನಿಯಪ್ಪ, ಕಾಳಿಟಗಪ್ಪ, ಟಿ.ಚನ್ನಬಸಪ್ಪ, ಪರಸಪ್ಪ, ಆನಂದಪ್ಪ, ಮಂಜುನಾಥ್, ದೇವರಾಜ್, ಶರಣಪ್ಪ, ರಾಮಾಂಜನೇಯ ಇತರರಿದ್ದರು.

Leave a Reply

Your email address will not be published. Required fields are marked *